ಮೇಷ:ಈ ವಾರದಲ್ಲಿ ನಿಮ್ಮ ವೃತ್ತಿಯಲ್ಲಿ ನೀವು ನಿರತರಾಗಲಿದ್ದೀರಿ. ಉದ್ಯೋಗದಲ್ಲಿರುವ ಜನರು ಹೊಸ ಕೆಲಸದ ಅವಕಾಶವನ್ನು ಪಡೆಯಲಿದ್ದೀರಿ. ಆದರೆ ಹಳೆಯ ಕೆಲಸದಲ್ಲಿಯೇ ಮುಂದುವರಿಯುವುದು ಒಳ್ಳೆಯದು. ನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರ ಒಳ್ಳೆಯದು. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಹೊರಗೆ ಹೋಗಬಹುದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ದುಷ್ಚಟಗಳ ಕಾರಣ ನೀವು ಸಮಸ್ಯೆ ಎದುರಿಸಬಹುದು. ಹಿಂದಿನ ಹೂಡಿಕೆಯ ಸಂಪೂರ್ಣ ಲಾಭ ನಿಮಗೆ ದೊರೆಯಲಿದೆ. ನಿಮ್ಮ ಆದಾಯವು ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನಿಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಯಾವುದೇ ಹೊಸ ಹೂಡಿಕೆಯನ್ನು ಮಾಡುವ ಮೊದಲು ಯಾರಾದರೂ ವ್ಯಕ್ತಿಯ ಸಲಹೆ ಪಡೆಯಿರಿ.
ವೃಷಭ:ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಬದಲಾಗುತ್ತಿರುವ ಹವಾಗುಣದ ಕಾರಣ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯನ್ನು ನೀವು ಎಲ್ಲಿಗಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಗೆ ನೀವು ಸಮಯ ಕೊಟ್ಟಲ್ಲಿ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಪ್ರೀತಿಯನ್ನು ಕಾಣಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ಉದ್ಯೋಗದಲ್ಲಿರುವ ಜನರು ತಮ್ಮ ಬಾಸ್ನಿಂದ ಪ್ರಶಂಸೆ ಗಳಿಸಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಅಧಿಕ ಖರ್ಚುವೆಚ್ಚ ಉಂಟಾಗಬಹುದು. ಹೂಡಿಕೆ ಮಾಡಲು ಇದು ಸಕಾಲವಲ್ಲ. ಮನೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಕಾರಣ ಅಧ್ಯಯನಕ್ಕೆ ಗಮನ ನೀಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದು. ಆದರೆ ತಮ್ಮ ಗೆಳೆಯರ ಸಹಾಯದಿಂದ ಉತ್ತಮ ಸಾಧನೆ ಮಾಡಲಿದ್ದಾರೆ. ವೃತ್ತಿಪರ ಕೆಲಸದಲ್ಲಿ ಒಳಗೊಂಡಿರುವವರು ಒಳ್ಳೆಯ ಪ್ರಯೋಜನ ಪಡೆಯಲಿದ್ದಾರೆ. ನೀವು ಹೊಸ ಗುತ್ತಿಗೆಯನ್ನು ಪಡೆಯಬಹುದು. ನಿಮ್ಮ ತಂದೆಯೊಂದಿಗೆ ನೀವು ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮಿಥುನ ರಾಶಿಯವರ ಕುರಿತು ಹೇಳುವುದಾದರೆ, ವಿವಾಹಿತರು ತಮ್ಮ ಕೌಟುಂಬಿಕ ಬದುಕನ್ನು ಆನಂದಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ಅವಿವಾಹಿತರು ಒಳ್ಳೆಯ ಜೀವನ ಸಂಗಾತಿಯನ್ನು ಪಡೆಯಬಹುದು. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು. ಉದ್ಯೋಗದಲ್ಲಿರುವವರು ಪ್ರಗತಿಗೆ ಅವಕಾಶ ಪಡೆಯಲಿದ್ದಾರೆ. ವ್ಯವಹಾರದಲ್ಲಿರುವ ಜನರು ತಮ್ಮ ವ್ಯವಹಾರವನ್ನು ವಿಸ್ತರಿಸುವುದರಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ವಿದ್ಯಾರ್ಥಿಗಳು ಶೃದ್ಧೆಯಿಂದ ಕಲಿಯಲಿದ್ದಾರೆ. ಆದರೆ ಕೆಲವು ಜನರು ನಿಮ್ಮ ಅಧ್ಯಯನದಲ್ಲಿ ಅಡಚಣೆಯನ್ನುಂಟು ಮಾಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಅಧಿಕ ಖರ್ಚುವೆಚ್ಚ ಉಂಟಾಗಬಹುದು. ನಿಮ್ಮ ಮನೆಯ ದುರಸ್ತಿಗಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ವಿಪರೀತ ವೆಚ್ಚ ಉಂಟಾಗಬಹುದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು.
ಕರ್ಕಾಟಕ: ಈ ವಾರದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಹೊಸ ಗುತ್ತಿಗೆಯನ್ನು ಪಡೆಯಲಿದ್ದಾರೆ. ನೀವು ಉದ್ಯೋಗದಲ್ಲಿ ನಿಮಗೆ ನೀಡಿರುವ ಕೆಲಸಗಳನ್ನು ಸಕಾಲದಲ್ಲಿ ಮುಗಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಉನ್ನತಾಧಿಕಾರಿಗಳಿಂದ ಶುಭ ಸುದ್ದಿ ದೊರೆಯಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ಇತರ ಯಾವುದೇ ವ್ಯಕ್ತಿಯು ನಿಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಪ್ರೇಮಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ಅವರನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಲಿಸಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಮನೆಯಲ್ಲಿ ವಿಪರೀತ ಖರ್ಚುವೆಚ್ಚ ಉಂಟಾಗಬಹುದು. ಸಹೋದರರು ಮತ್ತು ಸಹೋದರಿಯದ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲಿದ್ದೀರಿ. ನಿಮ್ಮ ತಾಯಿಯ ಸಂಗವನ್ನು ಪಡೆಯಲಿದ್ದೀರಿ.
ಸಿಂಹ: ವಾರದ ಆರಂಭದಲ್ಲಿ ಕುಟುಂಬದ ಸದಸ್ಯರೊಂದಿಗೆ ನೀವು ಸಮಯವನ್ನು ಕಳೆಯಲಿದ್ದು, ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಕಲಿಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಮನದಾಳದ ಭಾವನೆಗಳನ್ನು ತಮ್ಮ ಪ್ರೇಮಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ನಂಬಿಕೆ ಇರಲಿದೆ. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಹೊಸ ಕಾಮಗಾರಿಗಾಗಿ ಕೆಲಸ ಮಾಡಲು ಅವಕಾಶ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಉದ್ಯೋಗದಲ್ಲಿರುವವರು ತಮ್ಮ ಬಾಸ್ ಜೊತೆಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಿಸಬೇಕು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಯತ್ನಿಸಲಿದ್ದಾರೆ. ಯಾರಾದರೂ ವ್ಯಕ್ತಿಯ ಸಲಹೆಯ ಮೇರೆ ಹೂಡಿಕೆ ಮಾಡಿರಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ.
ಕನ್ಯಾ: ಈ ವಾರದಲ್ಲಿ ನಿಮ್ಮ ಕುಟುಂಬದ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಲಿದ್ದು ಎಲ್ಲರೂ ಸಂತಸ ಅನುಭವಿಸಲಿದ್ದೀರಿ. ಯಾರಾದರೂ ಸಂಬಂಧಿಯ ಸಹಾಯದಿಂದ ಆದಾಯದ ಮೂಲವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಪ್ರತಿಯೊಬ್ಬರೊಂದಿಗೆ ಸಂವಾದ ನಡೆಸಲಿದ್ದೀರಿ. ಸಮಾಜದ ಒಳಿತಿಗಾಗಿ ಕೆಲಸ ಮಾಡುವವರ ಗೌರವ ಹೆಚ್ಚಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ಪ್ರಣಯ ಬದುಕು ಚೆನ್ನಾಗಿರಲಿದೆ. ಅವಿವಾಹಿತ ವ್ಯಕ್ತಿಗಳು ತಮ್ಮ ಆಯ್ಕೆಯ ಜೀವನ ಸಂಗಾತಿಯನ್ನು ಪಡೆಯಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಲು ಅವಕಾಶ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು. ಇದರಿಂದ ಅವರಿಗೆ ಲಾಭ ಉಂಟಾಗಲಿದೆ. ನೀವು ಸಹೋದರರು ಮತ್ತು ಸಹೋದರಿಯರ ಬೆಂಬಲವನ್ನು ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಪೋಷಕರೊಂದಿಗೆ ನೀವು ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಬಹುದು.
ತುಲಾ: ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಹಿರಿಯರ ಬೆಂಬಲ ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಯತ್ನಿಸಲಿದ್ದಾರೆ. ಹೊಸ ಅವಕಾಶಗಳು ದೊರೆಯಬಹುದು. ದೈನಂದಿನ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಅವಿವಾಹಿತ ವ್ಯಕ್ತಿಗಳ ವಿವಾಹ ಪ್ರಸ್ತಾವನೆಗೆ ಅಂಗೀಕಾರ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ನಿಮ್ಮೊಂದಿಗೆ ಕೋಪಗೊಂಡರೆ ಅವರ ಮನವೊಲಿಸಲು ಯತ್ನಿಸಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಎಲ್ಲಿಗಾದರೂ ಹೋಗಲು ಯೋಜನೆ ರೂಪಿಸಲಿದ್ದು, ಇದರಿಂದಾಗಿ ನಿಮಗೆ ಸಾಕಷ್ಟು ಹಣ ಖರ್ಚಾಗಲಿದೆ.
ವೃಶ್ಚಿಕ: ಈ ವಾರ ನಿಮ್ಮ ಪಾಲಿಗೆ ಪ್ರಮುಖ ವಾರ ಎನಿಸಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಒಂದಷ್ಟು ಸಮಯವನ್ನು ಕಳೆದು ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಕಲಿಯಲಿದ್ದೀರಿ. ಇದು ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತ ಎನಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ಗುತ್ತಿಗೆಯನ್ನು ಗಳಿಸಲಿದ್ದು ಇದು ಅವರ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಲಿದೆ. ಉದ್ಯೋಗದಲ್ಲಿರುವ ಜನರು ಹೊಸ ಉದ್ಯೋಗದ ಕೊಡುಗೆಯನ್ನು ಪಡೆಯಲಿದ್ದು ಇದು ಅಧಿಕ ಆದಾಯವನ್ನು ತರಲಿದೆ. ವಿಪರೀತ ಕೆಲಸದ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸಂಜೆಯ ವೇಳೆ ಮನೆಯಲ್ಲಿ ಸಾಕಷ್ಟು ಅತಿಥಿಗಳು ಬರಲಿದ್ದು, ಸಾಕಷ್ಟು ಮೋಜು ಅನುಭವಿಸಲಿದ್ದಾರೆ. ಮನೆಯಲ್ಲಿ ಆರಾಧನೆಯನ್ನು ಆಯೋಜಿಸಬಹುದು. ನೆರೆಮನೆಯಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ನೀವು ಕುಟುಂಬ ಸಮೇತವಾಗಿ ಪಾಲ್ಗೊಳ್ಳಲಿದ್ದೀರಿ. ನೀವು ರಾಜಕೀಯದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನೀವು ಮನೆಯ ದುರಸ್ತಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ.
ಧನು: ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆ ಸೇರಿ ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನೀವು ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಲಿದ್ದೀರಿ. ಇತರ ಯಾವುದೇ ವ್ಯಕ್ತಿಯು ನಿಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಸ್ಪರ್ಧೆಗಳಿಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಬಾಸ್ನಿಂದ ಬೆಂಬಲ ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು. ಇದರಿಂದ ಅವರಿಗೆ ಲಾಭ ಉಂಟಾಗಲಿದೆ. ಸಹೋದರನ ಮದುವೆಯ ಪ್ರಸ್ತಾವನೆಗೆ ಅನುಮೋದನೆ ದೊರೆಯಲಿದೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲರೂ ಒಟ್ಟಿಗೆ ಸೇರಿ ದುಡಿಯಲಿದ್ದಾರೆ. ಮನೆಯಲ್ಲಿ ಆರಾಧನೆ ಆಯೋಜಿಸಬಹುದು.
ಮಕರ: ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ಯುವಕರು ಯಶಸ್ಸನ್ನು ಗಳಿಸಲಿದ್ದಾರೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲಿದ್ದು ಯಶಸ್ಸನ್ನು ಗಳಿಸಲಿದ್ದಾರೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಹೆಚ್ಚಿನ ಕೌಟುಂಬಿಕ ಜವಾಬ್ದಾರಿಯನ್ನು ನಿಮ್ಮ ಹೆಗಲಿಗೇರಿಸಲಾಗುವುದು. ಇದನ್ನು ನೀವು ಖಂಡಿತವಾಗಿಯೂ ಈಡೇರಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ಹೊಸ ಕೆಲಸವನ್ನು ಪ್ರಾರಂಭಿಸಲು ನೀವು ಸಹಾಯ ಮಾಡಬಹುದು. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ನೀವು ಹೊಸ ಪಾಲುಗಾರಿಕೆ ವ್ಯವಹಾರಕ್ಕೆ ಕೈ ಹಾಕಲಿದ್ದು, ಇದನ್ನು ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಚರ್ಚಿಸಲಿದ್ದೀರಿ. ಕುಟುಂಬದ ಕಲ್ಯಾಣಕ್ಕಾಗಿ ಜೀವನ ಸಂಗಾತಿಯೊಂದಿಗೆ ಕೆಲಸ ಮಾಡಲಿದ್ದೀರಿ. ಮನೆಯಿಂದ ದೂರವಿದ್ದು ಕೆಲಸ ಮಾಡುವವರು ತಮ್ಮ ಕುಟುಂಬವನ್ನು ಮಿಸ್ ಮಾಡಲಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ದೈನಂದಿನ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ.
ಕುಂಭ: ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಅತ್ಯುತ್ತಮ. ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯ ಒಳ್ಳೆಯ ಗುಣವನ್ನು ನೀವು ಅರಿತುಕೊಳ್ಳಲಿದ್ದೀರಿ. ಅವರ ಕುರಿತು ನೀವು ಅಭಿಮಾನ ಪಡಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯವಹಾರದಲ್ಲಿ ಕೆಲವೊಂದು ಹೊಸ ಬದಲಾವಣೆಗಳನ್ನು ತರಲಿದ್ದಾರೆ. ಇದಕ್ಕಾಗಿ ಹೆಚ್ಚಿನ ವೆಚ್ಚ ಉಂಟಾಗಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಿದರೆ ಹಾನಿಯುಂಟಾದೀತು. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಖರ್ಚು ಉಂಟಾಗಬಹುದು. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಸಮಾಜದ ಒಳಿತಿಗಾಗಿ ಕೆಲಸ ಮಾಡುವವರ ಗೌರವ ಹೆಚ್ಚಲಿದೆ.
ಮೀನ: ಈ ವಾರವು ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಂತಸವನ್ನು ತರಲಿದೆ. ನಿಮ್ಮ ಜೀವನ ಸಂಗಾತಿಯ ಹೆಸರಿನಲ್ಲಿ ಕೆಲವು ಹೊಸ ಕೆಲಸವನ್ನು ನೀವು ಪ್ರಾರಂಭಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ವಿವಾಹದಲ್ಲಿ ಯಾವುದೇ ವಿಳಂಬ ಉಂಟಾಗದಂತೆ ನೋಡಿಕೊಳ್ಳಲು ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ವಿದೇಶದಿಂದ ಆಮದು, ರಫ್ತು ಕೆಲಸ ಮಾಡುವವರಿಗೆ ಶುಭ ಸುದ್ದಿ ದೊರೆಯಲಿದೆ. ರಾಜಕೀಯದಲ್ಲಿ ನೀವು ವೃತ್ತಿಯನ್ನು ರೂಪಿಸಲು ಎದುರು ನೋಡುತ್ತಿದ್ದರೆ ಯುವಜನರಿಗೆ ಸಮಯವು ಚೆನ್ನಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಕೆಲಸವನ್ನು ಬದಲಾಯಿಸಲು ಸಮಯವು ಸಕಾಲ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಹೆಚ್ಚಿನ ವೆಚ್ಚ ಉಂಟಾಗದು. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು. ನಿಮ್ಮ ಪೋಷಕರೊಂದಿಗೆ ನೀವು ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಬಹುದು.
ಇದನ್ನೂ ಓದಿ: ಭಾನುವಾರದ ಪಂಚಾಂಗ, ರಾಶಿ ಭವಿಷ್ಯ: ಈ ರಾಶಿಯವರಿಗೆ ಲಾಭಕರ ದಿನ