ಮೇಷ: ವ್ಯವಹಾರದಲ್ಲಿ ತೊಡಗಿಸಿಕೊಂಡವರು ಈ ವಾರ ಯಶಸ್ಸನ್ನು ಕಾಣಲಿದ್ದಾರೆ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನಕ್ಕೆ ಗಮನ ನೀಡಬೇಕು. ಬೇರೆ ಯಾರಾದರೂ ವ್ಯಕ್ತಿಯ ಮಾತುಗಳ ಕಾರಣ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮ ಜೀವನವು ಚೆನ್ನಾಗಿರಲಿದೆ. ಆದರೆ ಗೊಂದಲಕ್ಕೆ ಆಸ್ಪದ ನೀಡಬೇಡಿ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಈ ವಾರವು ಒಳ್ಳೆಯದು. ನೀವು ನಿಮ್ಮದೇ ಮನೆಯನ್ನು ಹೊಂದಲು ಇಚ್ಛಿಸುವುದಾದರೆ ನೀವು ಇದನ್ನು ಮಾಡಬಹುದು. ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನಿಮಗೆ ವಹಿಸಲಾಗುತ್ತದೆ. ನೀವು ಮಾಲ್ಗೆ ಶಾಪಿಂಗ್ಗೆ ಹೋಗಬಹುದು ಮತ್ತು ಕುಟುಂಬದ ಸದಸ್ಯರೊಂದಿಗೆ ಪಿಕ್ನಿಕ್ಗೆ ಹೋಗಬಹುದು. ಈ ಮೂಲಕ ಎಲ್ಲರೂ ಸಂತಸ ಅನುಭವಿಸಲಿದ್ದಾರೆ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು.
ವೃಷಭ: ಈ ರಾಶಿಯವರಿಗೆ ಈ ವಾರವು ಅನುಕೂಲಕರ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವ ಜನರಿಗೆ ಅಡ್ಡಿ ಆತಂಕ ಉಂಟಾಗಬಹುದು. ಹೀಗಾಗಿ ಅವರಿಗೆ ಈ ವಾರವು ಅಷ್ಟೊಂದು ಒಳ್ಳೆಯ ಫಲವನ್ನು ನೀಡದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಅಧ್ಯಯನಕ್ಕೆ ಮಾತ್ರವಲ್ಲದೆ ಸಾಮಾಜಿಕ ಬದುಕಿಗೂ ಒಂದಷ್ಟು ಸಮಯವನ್ನು ಮೀಸಲಿಡಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದೇಶದಲ್ಲಿ ಶಿಕ್ಷಣ ಪಡೆಯಲು ನಿಮಗೆ ಅವಕಾಶ ಲಭಿಸಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಸಂತಸ ಕಾಣಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ಗುತ್ತಿಗೆಗಳನ್ನು ಪಡೆಯಲಿದ್ದಾರೆ. ಇದರಿಂದ ನೀವು ಲಾಭ ಗಳಿಸಲಿದ್ದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಹೂಡಿಕೆ ಮಾಡಲು ಇದು ಸಕಾಲವಲ್ಲ. ಯಾವುದೇ ಹೂಡಿಕೆಯನ್ನು ಮಾಡುವ ಮೊದಲು ಯಾರಾದರೂ ವ್ಯಕ್ತಿಯ ಸಲಹೆಯನ್ನು ಪಡೆದು ಹೆಜ್ಜೆ ಇಡುವುದು ಒಳ್ಳೆಯದು. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ನಿಮ್ಮ ಕೌಟುಂಬಿಕ ಜವಾಬ್ದಾರಿಯು ಹೆಚ್ಚಲಿದೆ. ನಿಮ್ಮ ತಾಯಿಯ ಸಂಗವನ್ನು ಪಡೆಯಲಿದ್ದೀರಿ.
ಮಿಥುನ: ಈ ವಾರದಲ್ಲಿ ಮಿಥುನ ರಾಶಿಯವರು ತಮ್ಮ ಬದುಕಿನಲ್ಲಿ ಒಂದಷ್ಟು ಏರುಪೇರನ್ನು ಅನುಭವಿಸಲಿದ್ದಾರೆ. ಯಾರಾದರೂ ಇತರ ವ್ಯಕ್ತಿಯಿಂದಾಗಿ ಪ್ರೇಮ ಸಂಬಂಧದಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯಬಹುದು. ಹೀಗಾಗಿ ಅನೇಕ ಜನರು ಮನೆಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಮಾತಿನ ಮೇಲೆ ನಿಗಾ ಇರಲಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನೀವು ಸಂಪೂರ್ಣವಾಗಿ ನಿಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಈ ವಾರದಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಎಚ್ಚರಿಕೆಯಿಂದ ನಡೆಸಿ. ನಿಮ್ಮ ಮಕ್ಕಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ನೀವು ಹೊಸ ಕೆಲಸವನ್ನು ಮಾಡಲಿದ್ದೀರಿ. ಇದು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಹಿರಿಯರೊಂದಿಗೆ ಮಾತನಾಡುವಾಗ ಮೆಲು ದನಿಯಲ್ಲಿ ಮಾತನಾಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಹೋಗಬಹುದು. ಇದು ಹೊಸ ಅಸ್ಮಿತೆಯನ್ನು ಸೃಷ್ಟಿಸಲಿದೆ.
ಕರ್ಕಾಟಕ: ಈ ವಾರದಲ್ಲಿ ಕರ್ಕಾಟಕ ರಾಶಿಯವರು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಮತ್ತು ಶಾಂತಿಯನ್ನು ಅನುಭವಿಸಲಿದ್ದಾರೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ನೀವು ಸಮಯವನ್ನು ಕಳೆಯಲಿದ್ದು, ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಕಲಿಯಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಅವಿವಾಹಿತರಿಗೆ ಒಳ್ಳೆಯ ವಿವಾಹ ಪ್ರಸ್ತಾಪ ಬರಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ಗುತ್ತಿಗೆಗಳನ್ನು ಪಡೆಯಲಿದ್ದಾರೆ. ಇದರಿಂದ ನೀವು ಲಾಭ ಗಳಿಸಲಿದ್ದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಹಿರಿಯರಿಂದ ಪ್ರಶಂಸೆ ಗಳಿಸಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಕುಟುಂಬದ ಎಲ್ಲಾ ಸದಸ್ಯರು ಧಾರ್ಮಿಕ ಸ್ಥಳಕ್ಕೆ ಒಟ್ಟಿಗೆ ಭೇಟಿ ನೀಡಲು ಯೋಜನೆ ರೂಪಿಸಲಿದ್ದಾರೆ. ನೀವು ಮನೆಯ ಅಲಂಕಾರಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ.
ಸಿಂಹ: ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಇದರಿಂದಾಗಿ ಅವರಿಗೆ ನಿರೀಕ್ಷಿತ ಫಲಿತಾಂಶ ದೊರೆಯದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಸ್ಪರ್ಧೆಗಾಗಿ ಪೂರ್ವಸಿದ್ಧತೆ ನಡೆಸುತ್ತಿರುವ ಯುಜನರು ತಮ್ಮ ಕಠಿಣ ಶ್ರಮದಿಂದಾಗಿ ಯಶಸ್ಸನ್ನು ಪಡೆಯಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಮನ್ವಯವನ್ನು ಸಾಧಿಸಿ. ನಿಮ್ಮ ಸಂಗಾತಿಯೊಂದಿಗೆ ಒಂದಷ್ಟು ಸಮಯವನ್ನು ಕಳೆದು ಹಳೆಯ ವೈಮನಸ್ಸನ್ನು ಬಗೆಹರಿಸಲು ಯತ್ನಿಸಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನಿಮ್ಮ ಬದುಕಿನಲ್ಲಿ ಅಹಂ ನುಸುಳದಂತೆ ನೋಡಿಕೊಳ್ಳಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಹಿರಿಯರಿಂದ ಪ್ರಶಂಸೆ ಗಳಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ತಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳ ನೆರವನ್ನು ಪಡೆಯಲಿದ್ದಾರೆ. ನೀವು ಹೊಸ ಸಂಪರ್ಕಗಳನ್ನು ಪಡೆಯಬಹುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಅಧಿಕ ಖರ್ಚುವೆಚ್ಚ ಉಂಟಾಗಬಹುದು. ನಿಮ್ಮ ಆರೋಗ್ಯಕ್ಕಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಕುಟುಂಬದ ಅಗತ್ಯತೆಗಾಗಿ ನೀವು ಒಂದಷ್ಟು ಶಾಪಿಂಗ್ ಮಾಡಬಹುದು.
ಕನ್ಯಾ: ಈ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ಪ್ರೇಮ ಸಂಬಂಧದಲ್ಲಿ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನೀವು ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಲಿದ್ದೀರಿ. ನಿಮ್ಮ ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಲಿದ್ದು ಎಲ್ಲರೂ ಸಂತಸ ಅನುಭವಿಸಲಿದ್ದೀರಿ. ಈ ವಾರ ನಿಮಗೆ ದುಬಾರಿ ಎನಿಸಲಿದೆ. ಒಂದಷ್ಟು ಭೂಮಿಯನ್ನು ಖರೀದಿಸಲು ನೀವು ಯೋಚಿಸುವುದಾದರೆ ಈ ವಾರವು ನಿಮಗೆ ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನೀವು ಯಾವುದಾದರೂ ಸ್ಪರ್ಧೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದರೆ, ನೀವು ಕಠಿಣ ಶ್ರಮ ಪಡಬೇಕು. ವ್ಯವಹಾರದಲ್ಲಿರುವ ಜನರು ತಮ್ಮ ವ್ಯವಹಾರವನ್ನು ವಿಸ್ತರಿಸುವುದರಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಭಡ್ತಿ ಪಡೆಯುವುದಕ್ಕಾಗಿ ಅವಕಾಶ ದೊರೆಯಬಹುದು. ನೀವು ಹಿರಿಯರು ಮತ್ತು ಕಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಅವಿವಾಹಿತರಿಗೆ ಒಳ್ಳೆಯ ವಿವಾಹ ಪ್ರಸ್ತಾಪ ಬರಬಹುದು.