ಮೇಷ:ಈ ವಾರದಲ್ಲಿ ಈ ರಾಶಿಯಲ್ಲಿ ಹುಟ್ಟಿದವರು ಧನಾತ್ಮಕ ಬೆಳವಣಿಗೆ ಮತ್ತು ಆರಂಭಿಕ ಯಶಸ್ಸನ್ನು ಕಾಣಲಿದ್ದಾರೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ನಿಮಗೆ ಹಿರಿಯರು ಮತ್ತು ಕಿರಿಯರ ನೆರವು ದೊರೆಯಲಿದ್ದು, ಕೆಲಸದ ಸ್ಥಳದಲ್ಲಿ ನಿಮ್ಮ ಕ್ಷಮತೆಯಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ವಿಪರೀತ ಖರ್ಚು ಮಾಡಿದರೆ ಆರ್ಥಿಕ ಸವಾಲುಗಳು ಉಂಟಾಗಬಹುದು. ನಿಮ್ಮ ಖರ್ಚಿನ ಬಗ್ಗೆ ಸರಿಯಾದ ಯೋಜನೆ ರೂಪಿಸಿದರೆ ನಿಮ್ಮ ಕೈಯಲ್ಲಿ ಸಾಕಷ್ಟು ಸಂಪನ್ಮೂಲ ಇರಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಪ್ರಯತ್ನಗಳಿಗೆ ತಕ್ಕುದಾದ ಫಲ ದೊರೆಯಲಿದೆ. ನಿಮ್ಮ ಆರೋಗ್ಯವನ್ನು ಆನಂದಿಸಲಿದ್ದೀರಿ. ಋತುಮಾನಕ್ಕೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿ ನಿಮ್ಮ ಕುಟುಂಬದ ಸದಸ್ಯರ ಜೊತೆಗಿನ ಬಂಧವು ಚೆನ್ನಾಗಿರಲಿದ್ದು, ಸಂತಸಭರಿತ ವಾತಾವರಣ ನೆಲೆಸಲಿದೆ. ನಿಮ್ಮ ವೈವಾಹಿಕ ಬದುಕು ಸಂತಸದಿಂದ ಕೂಡಲಿದೆ. ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ನಿಭಾಯಿಸಿ. ನಿಮ್ಮ ಆರೋಗ್ಯಕ್ಕೆ ಒತ್ತು ನೀಡಿರಿ. ಅಲ್ಲದೆ ಈ ವಾರದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿ.
ವೃಷಭ: ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ತಮ್ಮ ಹೂಡಿಕೆಯ ಮೇಲೆ ಹಠಾತ್ ಆಗಿ ಲಾಭ ದೊರೆಯಲಿದ್ದು, ಈ ಹಿಂದಿನ ಹೂಡಿಕೆಗಳ ಮೇಲೂ ಲಾಭ ದೊರೆಯಲಿದೆ. ಆದರೆ ಯಾವುದೇ ಉದ್ಯಮ ಅಥವಾ ಯೋಜನೆಗೆ ಹಣ ಹೂಡಿಕೆ ಮಾಡುವ ಮೊದಲು ವೃತ್ತಿಪರ ಅಥವಾ ನಂಬಿಕಸ್ತ ಗೆಳೆಯರಿಂದ ಸಲಹೆ ಪಡೆಯಿರಿ. ನಿಮ್ಮ ಆಹಾರಕ್ರಮ ಮತ್ತು ವ್ಯಾಯಾಮ ಸೇರಿದಂತೆ ನಿಮ್ಮ ಯೋಗಕ್ಷೇಮಕ್ಕೆ ಒತ್ತು ನೀಡುವುದು ಒಳ್ಳೆಯದು. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ವಿವಾಹ ಬಂಧನಕ್ಕೆ ಒಳಗಾಗಲು ಇಚ್ಛಿಸುವ ಅವಿವಾಹಿತರಿಗೆ ಈ ಸಮಯವು ಚೆನ್ನಾಗಿದೆ. ಅವರ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಜೋಡಿಗಳು ಸ್ಥಳೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಬಹುದು. ವಾರವು ಮುಂದುವರಿದಂತೆ, ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಯಶಸ್ಸಿನ ಜೊತೆಗೆ ಒಂದಷ್ಟು ಸವಾಲುಗಳನ್ನು ಸಹ ಎದುರಿಸಬಹುದು. ಧಾರ್ಮಿಕ ಮತ್ತು ಸಾಮುದಾಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಮಯವು ಚೆನ್ನಾಗಿದ್ದು, ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸಲಿದೆ. ನಿಮ್ಮ ಕೈಯಲ್ಲಿರುವ ಈಗಿನ ಯೋಜನೆಗಳಿಗೆ ಹೆಚ್ಚಿನ ಸಮಯವನ್ನು ವ್ಯಯಿಸುವ ಮೂಲಕ ಹಾಗೂ ನಿರಂತರ ಧ್ಯಾನ ಸೇರಿದಂತೆ ಆರೋಗ್ಯದಾಯಕ ಜೀವನ ಶೈಲಿಯನ್ನು ಪಾಲಿಸುವ ಮೂಲಕ ಈ ವಾರವನ್ನು ಚೆನ್ನಾಗಿ ಬಳಸಿಕೊಳ್ಳಿರಿ.
ಮಿಥುನ: ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದ್ದು, ಮಾನಸಿಕ ಉದ್ವೇಗವು ಹೆಚ್ಚಲಿದೆ. ತಾಳ್ಮೆಯಿಂದ ವರ್ತಿಸಿ ನಿಮ್ಮ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿಭಾಯಿಸಲು ಗಮನ ನೀಡುವುದು ಅಗತ್ಯ. ಅಲ್ಲದೆ, ನಿಮ್ಮ ಗುರಿಯನ್ನು ಸಾಧಿಸುವಾಗ ದಾರಿಯಲ್ಲಿ ಅಡ್ಡ ಬರುವವರಿಂದ ದೂರವಿರಿ. ವಾರದ ಉತ್ತರಾರ್ಧದಲ್ಲಿ, ವ್ಯವಹಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಉತ್ತಮ ಫಲಿತಾಂಶ ಲಭಿಸಲಿದೆ. ನಿಮ್ಮ ಲಾಭದಲ್ಲಿ ಹೆಚ್ಚಳ ಉಂಟಾಗಲಿದ್ದು, ನಿಮ್ಮ ವ್ಯವಹಾರಕ್ಕೆ ಅದೃಷ್ಟದ ಬಲ ದೊರೆಯಲಿದೆ. ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಪ್ರೇಮಿಯೊಂದಿಗೆ ಅನುರಾಗದ ಇನ್ನಷ್ಟು ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶಗಳು ಲಭಿಸಲಿವೆ. ಕೌಟುಂಬಿಕ ಬದುಕು ಸಹ ಸಾಮರಸ್ಯದಿಂದ ಕೂಡಿರಲಿದ್ದು, ಒಟ್ಟಿಗೆ ಸಮಯ ಕಳೆಯುವ ಅವಕಾಶ ನಿಮಗೆ ಲಭಿಸಲಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು. ಆದರೆ ಹಣಕಾಸಿನ ವಿಚಾರವನ್ನು ಎಚ್ಚರಿಕೆಯಿಂದ ನಿಭಾಯಿಸುವ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ತಾಳ್ಮೆ, ಶಿಸ್ತು ಮತ್ತು ಧನಾತ್ಮಕ ಮನೋಭಾವವನ್ನು ಕಾಪಾಡುವ ಮೂಲಕ ನಿಮ್ಮ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ. ವ್ಯವಹಾರ ಮತ್ತು ವೈಯಕ್ತಿಕ ಸಂಬಂಧದಲ್ಲಿ ಪ್ರಗತಿಯನ್ನು ಸಾಧಿಸಲು ಈ ಸಮಯವು ಅನುಕೂಲಕರವಾಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಬೇಕಾದರೆ, ನಿಮ್ಮ ದೈಹಿಕ ಆರೋಗ್ಯಕ್ಕೆ ಗಮನ ನೀಡಿ ಹಾಗೂ ಸಮಸ್ಯೆಗಳನ್ನು ಸಕಾಲದಲ್ಲಿ ಬಗೆಹರಿಸಿ.
ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಅನೇಕ ಸವಾಲುಗಳನ್ನು ಎದುರಿಸಲಿದ್ದು, ಮುಖ್ಯವಾಗಿ ತಮ್ಮ ಮನೆ ಮತ್ತು ಕೌಟುಂಬಿಕ ಬದುಕಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಬಹುದು. ಆಸ್ತಿಗೆ ಸಂಬಂಧಿಸಿದ ಘರ್ಷಣೆ ಉಂಟಾಗಲಿದ್ದು, ನೀವು ಭಾವನೆಗಳನ್ನು ನಿಯಂತ್ರಿಸಿ ತಾಳ್ಮೆಯಿಂದ ವರ್ತಿಸಬೇಕಾದ ಅಗತ್ಯವಿದೆ. ಸಮಸ್ಯೆಯ ಸುಳಿಯಲ್ಲಿ ಸಿಲುಕದಂತೆ ನೋಡಿಕೊಳ್ಳಬೇಕಾದರೆ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಪರ್ಯಾಲೋಚಿಸುವುದು ಒಳ್ಳೆಯದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದಷ್ಟು ನಿರಾಳತೆ ದೊರೆಯಲಿದೆ. ಈಗಾಗಲೇ ಉದ್ಯೋಗದಲ್ಲಿರುವವರು ಬಿಡುವನ್ನು ಆನಂದಿಸಬಹುದು. ನಿಮ್ಮ ಪ್ರಣಯ ಸಂಬಂಧವನ್ನು ಗಟ್ಟಿಗೊಳಿಸಬೇಕಾದರೆ, ನಿಮ್ಮ ಸಂಗಾತಿಯ ಭಾವನೆಗಳು ಮತ್ತು ಇಚ್ಛೆಗಳನ್ನು ಅರಿತುಕೊಳ್ಳುವುದು ಅಗತ್ಯ. ನಿಮ್ಮ ಜೀವನ ಸಂಗಾತಿಯ ಯೋಗಕ್ಷೇಮದ ಕುರಿತು ನೀವು ಚಿಂತಿತರಾಗಿದ್ದರೆ, ಮುಕ್ತ ಸಂವಹನ ನಡೆಸುವುದನ್ನು ಮುಂದುವರಿಸಿ. ಈ ವಾರಾಂತ್ಯದ ವೇಳೆ, ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಋತುಮಾನಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ಇರುವ ರೋಗಗಳು ಉಲ್ಬಣಿಸಬಹುದು. ಹೀಗಾಗಿ ನಿಮ್ಮ ಆಹಾರಕ್ರಮ, ದೈಹಿಕ ಚಟುವಟಿಕೆ ಮತ್ತು ವಿಶ್ರಾಂತಿಗೆ ಒತ್ತು ನೀಡಬೇಕು. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡರೆ, ನಿಮ್ಮ ಒಟ್ಟಾರೆ ಯೋಗಕ್ಷೇಮ ಮತ್ತು ನಿಮ್ಮ ಉದ್ದೇಶಗಳನ್ನು ಈಡೇರಿಸುವ ಪ್ರಯತ್ನಕ್ಕೆ ಇಂಬು ದೊರೆಯಲಿದೆ.
ಸಿಂಹ: ನೀವು ಸಾಕಷ್ಟು ಸಮಯದಿಂದ ಕಾಯುತ್ತಿದ್ದ ಕಾಲ ಕೂಡಿಬಂದಿದ್ದು, ಪ್ರಮುಖ ಯೋಜನೆಯಲ್ಲಿ ಪಾಲ್ಗೊಳ್ಳುವ ಸಮಯವು ಸನ್ನಿಹಿತವಾಗಿದೆ. ನಿಮಗೆ ನುರಿತ ತಜ್ಞರಿಂದ ನೆರವು ದೊರೆಯಲಿದ್ದು, ಅವರು ಬಾಕಿ ಉಳಿದಿರುವ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದ್ದಾರೆ. ಹೀಗೆ, ತೀರಾ ಅಗತ್ಯವಿರುವ ನಿರಾಳತೆಯು ನಿಮಗೆ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನೀವು ಮಾಡುವ ಪ್ರಯತ್ನಗಳನ್ನು ಗುರುತಿಸಲಾಗುತ್ತದೆ. ನಿಮ್ಮ ಹಿರಿಯರು ನಿಮಗೆ ಪ್ರಮುಖ ಜವಾಬ್ದಾರಿಯೊಂದನ್ನು ವಹಿಸಿ ಕೊಡಲಿದ್ದಾರೆ. ಇದು ನಿಮ್ಮ ವೃತ್ತಿಪರ ಬೆಳವಣಿಗೆಗೆ ಅನುಕೂಲಕರವಾಗಿದೆ. ಈ ವಾರದಲ್ಲಿ ಪ್ರೇಮ ಸಂಬಂಧವು ಅರಳಲಿದೆ. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಅಲ್ಲದೆ, ವಾರದ ಕೊನೆಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ನಿಮ್ಮ ಆಧ್ಯಾತ್ಮಿಕ ಮತ್ತು ಮಾನಸಿಕ ಪ್ರಗತಿಗೆ ಇದು ತೀರಾ ಅತ್ಯಗತ್ಯ. ಈ ವಾರವು ಅತ್ಯಂತ ಯಶಸ್ವಿ ವಾರವೆನಿಸಲಿದ್ದು, ನಿಮ್ಮ ವೃತ್ತಿ, ಪ್ರೇಮ ಜೀವನ, ಮತ್ತು ಆರ್ಥಿಕ ಸ್ಥಿತಿಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿದೆ. ನೀವು ಸಂತಸ ಅನುಭವಿಸಲಿದ್ದು, ಇತರರಿಗಿಂತಲೂ ಹೆಚ್ಚಿನ ಉತ್ಸಾಹವನ್ನು ತೋರಲಿದ್ದೀರಿ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಣ್ಮೆಯಿಂದ ವರ್ತಿಸಿ. ನಿಮ್ಮೆದುರು ಬರುವ ಯಾವುದೇ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಸಿದ್ಧರಾಗಿರಿ.
ಕನ್ಯಾ: ನಿಮ್ಮ ನೆಚ್ಚಿನ ತಾಣಕ್ಕೆ ಸ್ಥಳಾಂತರಗೊಳ್ಳುವ ನಿಮ್ಮ ದೀರ್ಘಕಾಲದ ಇಚ್ಛೆಯು ಈ ಬಾರಿ ಈಡೇರಲಿದ್ದು, ನಿಮ್ಮ ಬದುಕಿನಲ್ಲಿ ಹೊಸ ಅವಕಾಶಗಳಿಗೆ ಬಾಗಿಲು ತೆರೆಯಲಿದೆ. ಉದ್ಯೋಗದಲ್ಲಿರುವವರು ಅನಿರೀಕ್ಷಿತವಾಗಿ ಪ್ರಮುಖ ಜವಾಬ್ದಾರಿಗಳನ್ನು ಪಡೆಯಲಿದ್ದು, ಇದರಿಂದ ನಿಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದೆ. ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗುವುದರಿಂದ ನಿಮ್ಮ ಒಟ್ಟಾರೆ ಸಂಪತ್ತಿನಲ್ಲಿ ಏರಿಕೆ ಉಂಟಾಗಲಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ತಾವು ದೀರ್ಘ ಕಾಲದಿಂದ ಕಾಯುತ್ತಿದ್ದ ಲಾಭ ಗಳಿಸಲಿದ್ದು, ಅವರ ಸಂಗಾತಿಯಿಂದಲೂ ಅವರಿಗೆ ಸಹಕಾರ ದೊರೆಯಲಿದೆ. ಪ್ರಣಯ ಸಂಬಂಧದಲ್ಲಿ ಯಶಸ್ಸು ದೊರೆಯಬೇಕಾದರೆ ಅವರು ಇನ್ನಷ್ಟು ಪ್ರಯತ್ನ ಪಡಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಆರೋಗ್ಯ ಕ್ರಮ ಮತ್ತು ದೈನಂದಿನ ಹವ್ಯಾಸಗಳಿಗೆ ಗಮನ ನೀಡುವುದು ಅಗತ್ಯ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ ಯಶಸ್ವಿಯಾಗಬೇಕಾದರೆ ತಮ್ಮ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಬೇಕು. ವಾರದ ನಿಮ್ಮ ಕೆಲಸವನ್ನು ಸಾಕಷ್ಟು ಎಚ್ಚರಿಕೆಯಿಂದ ನಿಭಾಯಿಸಿ, ನಿಮ್ಮ ವೃತ್ತಿಪರ ಪ್ರಗತಿ ಮತ್ತು ಯಶಸ್ಸಿಗೆ ಕೊಡುಗೆಯನ್ನು ನೀಡುವ ಚಟುವಟಿಕೆಗಳಿಗಾಗಿ ನಿಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಮೀಸಲಿಡಿ.