ಕರ್ನಾಟಕ

karnataka

ETV Bharat / spiritual

ಭಾನುವಾರದ ಪಂಚಾಂಗ, ಭವಿಷ್ಯ; ಇಂದು ಈ ರಾಶಿಯವರಿಗೆ ಅತ್ಯಂತ ಒತ್ತಡದ ದಿನ! - SUNDAY HOROSCOPE

ಇಂದಿನ ರಾಶಿ ಪಂಚಾಂಗ ಮತ್ತು ಭವಿಷ್ಯ ಹೀಗಿದೆ.

Daily Horoscope of Sunday
ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Jan 12, 2025, 5:01 AM IST

ಇಂದಿನ ಪಂಚಾಂಗ:

12-01-2025, ಭಾನುವಾರ

ಸಂವತ್ಸರ:ಕ್ರೋಧಿ

ಆಯನ: ಉತ್ತರಾಯಣ

ತಿಂಗಳು: ಮಾರ್ಗಶಿರ

ತಿಥಿ: ಶುಕ್ಲ ತ್ರಯೋದಶಿ

ನಕ್ಷತ್ರ:ಮೃಗಶಿರ

ಸೂರ್ಯೋದಯ: ಬೆಳಗ್ಗೆ 06:44

ಅಮೃತ ಕಾಲ:ಮಧ್ಯಾಹ್ನ 03:17 ರಿಂದ 04:42 ಗಂಟೆ ತನಕ

ದುರ್ಮೂಹುರ್ತಂ: ಮಧ್ಯಾಹ್ನ 05:08 ರಿಂದ 05:56 ಗಂಟೆ ವರೆಗೆ

ರಾಹುಕಾಲ:ಮಧ್ಯಾಹ್ನ04:42 ರಿಂದ 06:08 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:08

ಇಂದಿನ ರಾಶಿ ಭವಿಷ್ಯ:

ಮೇಷ: ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ನೀವು ನಿಮ್ಮ ಸುತ್ತಲಿನ ಅಂತಹ ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲೂ ಬಯಸುತ್ತೀರಿ. ಆದರೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಲ್ಲಿರಿ.

ವೃಷಭ:ಇಂದು ನಿಮ್ಮೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಅತ್ಯಂತ ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ, ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೀವು ತಣಿಸಿಕೊಳ್ಳಿ.

ಮಿಥುನ:ನೀವು ಇಂದು ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನವನ್ನು ಇಂದು ಎದುರಿಸುತ್ತೀರಿ. ಇಡೀ ದಿನ ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಂದು ದಾರಿಗೆ ತರುವುದು ಹೇಗೆಂದು ಆಲೋಚಿಸುತ್ತೀರುತ್ತೀರಿ. ಮೂಡ್ ಏರಿಳಿತಗಳನ್ನೂ ನೀವು ಎದುರಿಸಬಹುದು. ಧ್ಯಾನದ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.

ಕರ್ಕಾಟಕ: ನಿಮ್ಮ ಕುಟುಂಬ ನೆರವಿನ ಹಸ್ತ ಚಾಚದೇ ಇರಬಹುದು. ಆದ್ದರಿಂದ ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನೀವು ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.

ಸಿಂಹ: ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅಪಾರ ರಿಸ್ಕ್​​ಗಳನ್ನು ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ, ವದಂತಿಗಳನ್ನು ನಿಯಂತ್ರಿಸಿರಿ.

ಕನ್ಯಾ: ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ, ಏಕೆಂದರೆ ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ: ದೀರ್ಘಕಾಲದಿಂದ ಅಥವಾ ಹಿಂದಿನ ಕಾನೂನು ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅವುಗಳು ನ್ಯಾಯಾಲಯ ಅಥವಾ ಪರಸ್ಪರ ತಿಳಿವಳಿಕೆಯಿಂದ ಇತ್ಯರ್ಥವಾಗಬಹುದು. ಕಾರ್ಯದೊತ್ತಡ ಸಾಮಾನ್ಯವಾಗಿರುತ್ತದೆ ಮತ್ತು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ಹೊರಬರಲು ಅತ್ಯುತ್ತಮ ಯೋಜನೆ ರೂಪಿಸಲು ನಿಮಗೆ ಸಮಯ ದೊರೆಯಬಹುದು.

ವೃಶ್ಚಿಕ: ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದುಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ, ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯ ಪ್ರಾರಂಭ ಮಾಡುತ್ತೀರಿ.

ಧನು: ಈ ದಿನ ನಿಮಗೆ ಅತ್ಯಂತ ವಿವಾದಾತ್ಮಕ ಮತ್ತು ವದಂತಿಗಳ ದಿನವಾಗಿ ಬದಲಾಗಲಿದೆ. ನಿಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸುವವರ ಜೊತೆಯಲ್ಲಿ ಆತ್ಮೀಯವಾಗಿರುವುದನ್ನು ಬಿಡಿ. ತಾಳ್ಮೆಯಿಂದ ಆಲಿಸಿದರೆ ಮತ್ತು ಅವರ ಅಭಿಪ್ರಾಯಗಳಿಗೆ ಅವಕಾಶ ನೀಡಿದರೆ ವಿವಾದಗಳು ಇತ್ಯರ್ಥವಾಗಬಹುದು.

ಮಕರ: ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು ನಿಮ್ಮ ಪ್ರಿಯತಮೆ ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ. ಅತಿಯಾದ ಖರ್ಚುಗಳು ನಿಮ್ಮನ್ನು ಇಂದು ಉತ್ಸಾಹದಲ್ಲಿರಿಸುತ್ತವೆ. ನಿಮ್ಮ ಪ್ರಿಯತಮೆಯ ಸಂತೋಷ ನಿಮಗೆ ಬೇಕಾಗಿದ್ದು, ಅದನ್ನು ನೀವು ಸಾಧಿಸುತ್ತೀರಿ. ಆದರೆ, ದಿನದ ಅಂತ್ಯಕ್ಕೆ, ನಿಮ್ಮ ಜೇಬು ಖಾಲಿಯಾಗಿದ್ದಕ್ಕೆ ವಿಷಾದಪಡುತ್ತೀರಿ.

ಕುಂಭ: ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ, ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿಯೇ ಆನಂದವನ್ನೂ ಅನುಭವಿಸುತ್ತೀರಿ. ನಿಮ್ಮ ದೊಡ್ಡ ಅನುಕೂಲವೆಂದರೆ ಕೊರತೆಯನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದು.

ಮೀನ: ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ ಮತ್ತು ನೀವು ಯಾವುದೇ ಒಳಬರುವ ತೊಂದರೆಗಳನ್ನು ನಿವಾರಿಸಲು ಶಕ್ತರಾಗುತ್ತೀರಿ. ಇಂದು ವಾಸ್ತವಗೊಳ್ಳುವ ದಿನ ಮತ್ತು ಬಹಳ ದೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು ಮತ್ತಿತರೆ ಸಂಗತಿಗಳು ಪೂರ್ಣಗೊಳ್ಳಲು ಹತ್ತಿರವಾಗುತ್ತವೆ ಮತ್ತು ಫಲ ನೀಡಲು ಪ್ರಾರಂಭಿಸುತ್ತವೆ.

ABOUT THE AUTHOR

...view details