ಕರ್ನಾಟಕ

karnataka

ETV Bharat / spiritual

ವಾರದ ಭವಿಷ್ಯ: ಪ್ರೇಮಿಗಳ ಬದುಕಿನಲ್ಲಿ ಸಂತಸ, ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : 10 hours ago

ಮೇಷ :ನಿಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ಯಶಸ್ಸಿನ ಹಾದಿಯಲ್ಲಿ ನೀವು ಗಮನಾರ್ಹ ಅಡಚಣೆಗಳು ಮತ್ತು ತೊಂದರೆಗಳನ್ನು ಎದುರಿಸಬಹುದು. ಆದರೆ ನಿಮ್ಮ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಈ ಸವಾಲುಗಳನ್ನು ಜಯಿಸಲು ಸಾಧ್ಯವಾಗಲಿದೆ. ನೀವು ಗೊಂದಲದ ಸ್ಥಿತಿಯಲ್ಲಿದ್ದರೆ, ಹಠಾತ್‌ ಆಗಿ ನಿರ್ಧಾರ ತೆಗೆದುಕೊಳ್ಳಬೇಡಿ. ಆದರೆ ಸಮತೋಲಿತ, ಮತ್ತು ಚಿಂತನಶೀಲ ರೀತಿಯಲ್ಲಿ ಮುಂದುವರಿಯುವುದು ಉತ್ತಮ. ಈ ವಾರ ನಿಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ. ಆದರೆ ನಿಮ್ಮ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ನಿಮ್ಮ ಯೋಗಕ್ಷೇಮ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳಲು, ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಹೊಸ ವಿಧಾನ ಅಥವಾ ತಂತ್ರವನ್ನು ಅಳವಡಿಸಿಕೊಳ್ಳುವುದನ್ನು ನೀವು ಪರಿಗಣಿಸಬಹುದು. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಮಾನಸಿಕ ಸ್ಥಿತಿಯು ಧನಾತ್ಮಕ ಮತ್ತು ಸಂತೋಷದಾಯಕವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರ ಬೆಂಬಲ ನಿಮಗೆ ಇರುತ್ತದೆ. ಸ್ವಲ್ಪ ಸಮಯದವರೆಗೆ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ಆದರೆ ಕಾಲ ಕಳೆದಂತೆ ನಿಮ್ಮ ವೃತ್ತಿಪರ ಗುರಿಯನ್ನು ನೀವು ಸಾಧಿಸಲಿದ್ದೀರಿ.

ವೃಷಭ :ಹತಾಶೆ ಮತ್ತು ದುಡುಕುತನವನ್ನು ತಡೆಯಲು, ನಿಮ್ಮ ಆಲೋಚನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ ಮತ್ತು ಚರ್ಚೆಗಳ ಸಮಯದಲ್ಲಿ ಗಮನ ಕೇಂದ್ರೀಕರಿಸಿ. ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸುಧಾರಣೆಯನ್ನು ಕಾಣುವ ಸಾಧ್ಯತೆಯಿದೆ. ಇದು ನಿಮ್ಮ ಆಸ್ತಿಯಲ್ಲಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸವಾಲುಗಳನ್ನು ಎದುರಿಸಿದ ನಂತರ ನಿಮ್ಮ ವ್ಯಾಪಾರ ಉದ್ಯಮಗಳಲ್ಲಿ ನೀವು ಯಶಸ್ಸನ್ನು ಕಾಣಬಹುದು. ಹೂಡಿಕೆ ಮಾಡಲು ಅಥವಾ ಹೊಸ ವ್ಯಾಪಾರ ಪಾಲುದಾರಿಕೆಗೆ ಕೈ ಹಾಕಲು ಅವಕಾಶಗಳು ಲಭಿಸಬಹುದು. ವಾರದ ಕೊನೆಯಲ್ಲಿ, ಪರೀಕ್ಷೆಗಳಿಗೆ ಅಧ್ಯಯನ ಮಾಡುವವರಿಗೆ ಅಥವಾ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಧನಾತ್ಮಕ ಬೆಳವಣಿಗೆಗಳಿಗೆ ಅವಕಾಶವಿದೆ. ಈ ಅವಧಿಯಲ್ಲಿ, ನಿಮ್ಮ ಅಧ್ಯಯನಕ್ಕೆ ಹೆಚ್ಚುವರಿ ಸಮಯವನ್ನು ಮೀಸಲಿಡುವುದು ಮತ್ತು ಉತ್ಕೃಷ್ಟತೆಯನ್ನು ಸಾಧಿಸಲು ಪ್ರಯತ್ನವನ್ನು ಮಾಡುವುದು ಬಹಳ ಮುಖ್ಯ. ನೀವು ಮತ್ತು ನಿಮ್ಮ ಪ್ರಣಯ ಸಂಗಾತಿಗೆ ಹತ್ತಿರವಾಗಲು ಅವಕಾಶ ದೊರೆಯಲಿದೆ. ಈಗ ಎದುರಾಗಿರುವ ಯಾವುದೇ ಸಮಸ್ಯೆಗಳನ್ನು ಸರಿಪಡಿಸಲು ಮತ್ತು ನಿಮ್ಮ ಸಂಪರ್ಕಗಳನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ಸಂಗಾತಿಯೊಂದಿಗೆ ಮಹತ್ವದ ಪ್ರಯಾಣವನ್ನು ಪ್ರಾರಂಭಿಸಲು ನಿಮಗೆ ಅವಕಾಶ ಲಭಿಸಲಿವೆ. ಅದು ನಿಮ್ಮ ಸಂಬಂಧಕ್ಕೆ ಮಾಧುರ್ಯವನ್ನು ನೀಡುತ್ತದೆ. ನಿಮ್ಮ ತಾಯಿಯ ಯೋಗಕ್ಷೇಮದ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ, ಅವರಿಗೆ ಬೆಂಬಲ ಮತ್ತು ಪ್ರೀತಿಯನ್ನು ನೀಡಿ. ಈ ವಾರದಲ್ಲಿ ನಿಮ್ಮ ಮಗುವು ಗಮನಾರ್ಹ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಅದು ನಿಮಗೆ ಹೆಚ್ಚಿನ ಗೌರವವನ್ನು ತಂದುಕೊಡಬಹುದು.

ಮಿಥುನ :ರಾಶಿಯವರು ಕೆಲಸದಲ್ಲಿ ಆಯಾಸ ಮತ್ತು ಅತಿಯಾದ ಒತ್ತಡವನ್ನು ಅನುಭವಿಸಬಹುದು. ಇದು ಪ್ರಕ್ಷುಬ್ಧ ಮನಸ್ಸು ಮತ್ತು ವೃತ್ತಿಪರ ಕಾರ್ಯಗಳಲ್ಲಿ ಸಂಭಾವ್ಯ ಅಡ್ಡಿ ಆತಂಕಗಳಿಗೆ ಕಾರಣವಾಗುತ್ತದೆ. ನಿರ್ದಿಷ್ಟ ಗುರಿಗಳ ಮೇಲೆ ಕೇಂದ್ರೀಕರಿಸಿದ ವ್ಯಕ್ತಿಗಳು ಅವುಗಳನ್ನು ಸಾಧಿಸುವಲ್ಲಿ ಅಡೆತಡೆಗಳನ್ನು ಎದುರಿಸಬಹುದು. ವಾರದ ಆರಂಭದಲ್ಲಿ ಹಣಕಾಸಿನ ಸಮಸ್ಯೆಗಳನ್ನು ನಿಭಾಯಿಸಲು ಶಿಫಾರಸು ಮಾಡಲಾಗಿದೆ. ಭೂಮಿ, ಆಸ್ತಿ ಮತ್ತು ವಾಹನ ಮಾರಾಟವನ್ನು ಮುಂದೂಡಬೇಕಾದೀತು. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡುವುದು ಅಗತ್ಯ. ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಪೌಷ್ಟಿಕ ಆಹಾರ ಮತ್ತು ನಿಯಮಿತ ವ್ಯಾಯಾಮದ ಅಗತ್ಯವಿರುತ್ತದೆ. ಪ್ರೇಮದ ಸಂಬಂಧವು ಸಿಹಿ ಕಹಿ ಕ್ಷಣಗಳನ್ನು ಹೊಂದಿರಬಹುದು. ಆಕರ್ಷಕ ಉಡುಗೊರೆಯು ಪ್ರಣಯ ಸಂಗಾತಿಯನ್ನು ಮನವೊಲಿಸಲು ಸಹಾಯ ಮಾಡುತ್ತದೆ. ಸಂಗಾತಿಗಳ ನಡುವೆ ಸಾಮರಸ್ಯ ಮತ್ತು ಪ್ರೀತಿಯ ಸಂಬಂಧವನ್ನು ನಿರೀಕ್ಷಿಸಬಹುದು. ಮಕ್ಕಳ ಬಗ್ಗೆಯೂ ನಿಗಾ ವಹಿಸುವಂತೆ ಸೂಚಿಸಲಾಗಿದೆ. ವಾರದ ಸವಾಲುಗಳನ್ನು ಜಯಿಸಲು, ಶಾಂತ ವರ್ತನೆಯನ್ನು ಕಾಪಾಡಿಕೊಳ್ಳುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯ.

ಕರ್ಕಾಟಕ :ಈ ವಾರವು ಕರ್ಕಾಟಕ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ತುಂಬಾ ಪ್ರಮುಖವಾದುದು. ಉದ್ಯೋಗದಲ್ಲಿ ಕೆಲಸವು ಸುಗಮವಾಗಿ ಸಾಗಬೇಕಾದರೆ ನಿಮ್ಮ ಕೆಲಸವನ್ನು ಕ್ಷುಲ್ಲಕಗೊಳಿಸುವ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಈ ವಾರ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾದೀತು. ಆದ್ದರಿಂದ ಪ್ರಯಾಣದ ವೇಳೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ತಪ್ಪು ಗ್ರಹಿಕೆಯನ್ನು ತಡೆಗಟ್ಟಲು ಮತ್ತು ಅತಿಯಾದ ಉತ್ಸಾಹದ ಕಾರಣ ಬಲೆಗೆ ಬೀಳದಂತೆ ನೋಡಿಕೊಳ್ಳಲು ಪ್ರಣಯ ಸಂಬಂಧಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಅಲ್ಲದೆ, ನಿಮ್ಮ ಸಂಗಾತಿಯ ಯೋಗಕ್ಷೇಮಕ್ಕೆ ಆದ್ಯತೆ ನೀಡಿ ಮತ್ತು ಪರಸ್ಪರ ಅರ್ಥೈಸಿಕೊಂಡು ಕೆಲಸದ ಸ್ಥಳದ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಯತ್ನಿಸಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಅವಕಾಶವಿದ್ದರೆ, ಅನುಕೂಲಕರ ಫಲಿತಾಂಶವನ್ನು ಪಡೆಯಲು ಈ ನಿಟ್ಟಿನಲ್ಲಿ ಮುಂದುವರಿಯಿರಿ. ಕೌಶಲ್ಯ ಮತ್ತು ವಿವೇಕದಿಂದ ಈ ಸವಾಲುಗಳನ್ನು ನಿಭಾಯಿಸುವ ಮೂಲಕ ನಿಮ್ಮ ಗುರಿಗಳನ್ನು ಸಾಧಿಸಲಿದ್ದೀರಿ.

ಸಿಂಹ :ಈ ವಾರ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಆಶೀರ್ವಾದ ಮತ್ತು ಸಮೃದ್ಧಿ ದೊರೆಯಲಿದೆ. ಸಂಗೀತ, ಕಲೆ ಮತ್ತು ನೃತ್ಯಕ್ಕಾಗಿ ಯುವ ಪೀಳಿಗೆಯು ಹೊಂದಿರುವ ಉತ್ಸಾಹವು ಬೆಳೆಯುವ ನಿರೀಕ್ಷೆಯಿದೆ. ನಿಮ್ಮ ಆಪ್ತ ಸ್ನೇಹಿತರ ಸಹವಾಸವನ್ನು ಆನಂದಿಸುವುದಕ್ಕಾಗಿ ನೀವು ಸಾಕಷ್ಟು ಸಮಯವನ್ನು ಮೀಸಲಿಡುತ್ತೀರಿ. ಆಸ್ತಿ ಖರೀದಿ, ಕಟ್ಟಡಗಳನ್ನು ನಿರ್ಮಿಸುವುದು ಅಥವಾ ವಾಹನಗಳನ್ನು ಖರೀದಿಸುವ ಬಯಕೆಯು ಸಹ ಕಾರ್ಯರೂಪಕ್ಕೆ ಬರಬಹುದು. ನಿಮ್ಮ ಪೋಷಕರ ಪ್ರೀತಿ ಮತ್ತು ಬೆಂಬಲ ಲಭಿಸಲಿದೆ. ಪ್ರೇಮ ಸಂಬಂಧವು ತೀವ್ರಗೊಳ್ಳುತ್ತವೆ ಮತ್ತು ನಿಮ್ಮ ಪ್ರಣಯ ಸಂಬಂಧವು ಮದುವೆಯ ಹಂತಕ್ಕೆ ಮುಂದುವರಿಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬವು ನಿಮ್ಮ ಪ್ರೀತಿಯನ್ನು ಸ್ವೀಕರಿಸಲಿದ್ದು, ಸಂತೋಷದಾಯಕ ವೈವಾಹಿಕ ಜೀವನವನ್ನು ಖಾತ್ರಿಗೊಳಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನೆಚ್ಚಿನ ತಾಣಕ್ಕೆ ಭೇಟಿ ನೀಡಿರಿ. ಧನಾತ್ಮಕ ಸುದ್ದಿಗಳನ್ನು ಸ್ವೀಕರಿಸುವ ಸಾಧ್ಯತೆಯೊಂದಿಗೆ ನಿಮ್ಮ ಶೈಕ್ಷಣಿಕ ಗುರಿಯಲ್ಲಿ ನಿಮಗೆ ಅದೃಷ್ಟದ ಬೆಂಬಲ ದೊರೆಯಲಿದ್ದು, ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ನಿಮಗೆ ನಿರಂತರವಾಗಿ ಮಕ್ಕಳಿಂದ ಬೆಂಬಲ ದೊರೆಯಲಿದೆ.

ಕನ್ಯಾ :ಕನ್ಯಾ ರಾಶಿಯಲ್ಲಿ ಜನಿಸಿದವರು ಈ ವಾರದಲ್ಲಿ ಸಾಕಷ್ಟು ಚಟುವಟಿಕೆಗಳಿಂದ ಕೂಡಿರುತ್ತಾರೆ. ವಾರದ ಆರಂಭದಿಂದ, ನೀವು ಕೆಲಸಕ್ಕಾಗಿ ದೂರದ ಅಥವಾ ಹತ್ತಿರದ ಸ್ಥಳಕ್ಕೆ ಪ್ರಯಾಣಿಸುತ್ತಿರುವಿರಿ. ಚೆನ್ನಾಗಿ ಯೋಚಿಸಿದ ಯೋಜನೆಯೊಂದಿಗೆ ಹಣಕಾಸಿನ ಕಾರ್ಯಗಳನ್ನು ನಿಭಾಯಿಸುವುದು ಅಗತ್ಯ. ವಿದ್ಯಾರ್ಥಿಗಳ ಅಧ್ಯಯಕ್ಕೆ ಅಡ್ಡಿ ಉಂಟಾಗಬಹುದು. ಆದ್ದರಿಂದ ಗಮನವನ್ನು ಕೇಂದ್ರೀಕರಿಸುವುದು ಬಹಳ ಮುಖ್ಯ. ಪ್ರಣಯ ಸಂಬಂಧಗಳಲ್ಲಿ ಸಂತಸ ಇರಬೇಕಾದರೆ ನಿಮ್ಮ ಸಂಗಾತಿಗೆ ನಿಷ್ಠೆ ತೋರುವುದು ಅತ್ಯಗತ್ಯ. ಜೀವನದಲ್ಲಿ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ನಡೆದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ಯಾವುದೇ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ನೆಲೆಸುತ್ತವೆ. ಜೀರ್ಣಕಾರಿ ಸಮಸ್ಯೆಗಳಿಂದ ದೂರವಿರಲು ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು ಮುಖ್ಯ. ವ್ಯವಹಾರದಲ್ಲಿ ಯಶಸ್ಸಿನ ಕೊರತೆಯ ಕಾರಣ ಹತಾಶೆ ಉಂಟಾಗಬಹುದು. ಆದರೆ ವೈಯಕ್ತಿಕ ಅಭಿವೃದ್ಧಿ ಮತ್ತು ಪ್ರಗತಿಗೆ ಧನಾತ್ಮಕ ಚಿಂತನೆಯು ಅಗತ್ಯವಾದುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಜಾಗರೂಕರಾಗಿರಿ ಮತ್ತು ಸಮಸ್ಯೆಗಳನ್ನು ಎದುರಿಸುವ ಮೂಲಕ, ನೀವು ಯಶಸ್ಸನ್ನು ಸಾಧಿಸುವಿರಿ.

ತುಲಾ :ತುಲಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಆದರೆ ಪರಿಶ್ರಮ ಮತ್ತು ನಿಮ್ಮ ಪ್ರೀತಿಪಾತ್ರರ ಬೆಂಬಲದೊಂದಿಗೆ, ನೀವು ಈ ಅಡೆತಡೆಗಳನ್ನು ನಿವಾರಿಸಬಹುದು. ಕೆಲಸದಲ್ಲಿ ಸಮಸ್ಯೆಗಳಿರಬಹುದು. ಆದರೆ ಅವು ದೀರ್ಘ ಕಾಲ ಮುಂದುವರಿಯದಂತೆ. ತಾಳ್ಮೆಯಿಂದಿರಿ ಮತ್ತು ನಿಮ್ಮ ಕುಟುಂಬದ ಸಹಾಯದಿಂದ ಅವುಗಳನ್ನು ಬಗೆಹರಿಸಿ. ವಾರದ ಮಧ್ಯದಲ್ಲಿ, ಪರಿಸ್ಥಿತಿಯು ನಿಮ್ಮ ಪರವಾಗಿ ತಿರುಗಲು ಪ್ರಾರಂಭಿಸಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಬೆಂಬಲ ಮತ್ತು ಸಹಾಯ ದೊರೆಯಲಿದೆ. ತಾಳ್ಮೆಯಿಂದಿರಿ ಮತ್ತು ನಿಮ್ಮ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಲ್ಲದೆ, ವಾರದ ಅಂತ್ಯದಲ್ಲಿ ಪೂಜಾ ಸ್ಥಳಕ್ಕೆ ಭೇಟಿ ನೀಡುವ ಮೂಲಕ ನೀವು ಸಾಂತ್ವನ ಮತ್ತು ಸಕಾರಾತ್ಮಕತೆಯನ್ನು ಕಂಡುಕೊಳ್ಳಬಹುದು. ನಿಮ್ಮ ಪ್ರಣಯ ಸಂಬಂಧಗಳನ್ನು ಬಲಪಡಿಸಿದರೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಂವಹನವನ್ನು ಸುಧಾರಿಸಿದರೆ ನಿಮ್ಮ ಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ ಮತ್ತು ನಿಮಗೆ ಸಂತೋಷ ಲಭಿಸಲಿದೆ. ನಿಮ್ಮ ವ್ಯಾಪಾರ ಉದ್ಯಮಗಳಲ್ಲಿ ಯಶಸ್ಸು ದೊರೆಯಲಿದ್ದು, ಪ್ರಗತಿ ಉಂಟಾಗಲಿದೆ.

ವೃಶ್ಚಿಕ :ಪರೀಕ್ಷೆಗಳು ಅಥವಾ ಸ್ಪರ್ಧೆಗಳಿಗೆ ಸಜ್ಜಾಗುತ್ತಿರುವ ವ್ಯಕ್ತಿಗಳು ಯಶಸ್ವಿಯಾಗಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆದರೆ ಅವರ ಸಮರ್ಪಣಾ ಭಾವವು ಅಂತಿಮವಾಗಿ ಫಲ ನೀಡುತ್ತದೆ. ಗುಪ್ತ ಎದುರಾಳಿಗಳ ವಿರುದ್ಧ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಆದ್ದರಿಂದ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅಗತ್ಯ. ನಿಮ್ಮ ವೃತ್ತಿಪರ ಯೋಜನೆಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ. ಇದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಮತ್ತು ನಿಮ್ಮ ಪ್ರತಿಸ್ಪರ್ಧಿಗಳ ಎದುರು ನೀವು ದುರ್ಬಲರಾಗಬಹುದು. ವಾರಾಂತ್ಯದಲ್ಲಿ ವ್ಯಾಪಾರಕ್ಕಾಗಿ ಪ್ರಯಾಣಿಸಬೇಕಾದೀತು. ಆದ್ದರಿಂದ ನಿಮ್ಮ ಹಣಕಾಸಿನ ಕುರಿತು ಜಾಗರೂಕರಾಗಿರುವುದು ಅಗತ್ಯ. ಪ್ರೇಮ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಆದರೆ ವೈವಾಹಿಕ ಬದುಕು ಧನಾತ್ಮಕವಾಗಿರುತ್ತದೆ. ಈ ವಾರ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮತ್ತು ನಿಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸಿ. ಈ ಅವಧಿಯು ನಿಮಗೆ ಅದೃಷ್ಟ ಮತ್ತು ಚೇತರಿಕೆಯನ್ನು ತರುವ ಸಾಧ್ಯತೆಯಿದ್ದು, ಇದು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಸಂಪತ್ತು ಮತ್ತು ಯಶಸ್ಸಿನ ಕಡೆಗೆ ನಿಮ್ಮ ಪ್ರಯಾಣವು ಪ್ರಾರಂಭವಾಗಲಿದೆ ಮತ್ತು ನಿಮ್ಮ ವೃತ್ತಿ ಮತ್ತು ವ್ಯಾಪಾರ ಉದ್ಯಮದಲ್ಲಿ ವಿಸ್ತರಣೆ ಉಂಟಾಗಲಿದೆ. ಅಲ್ಲದೆ, ನಿಮ್ಮ ಪ್ರಣಯ ಸಂಬಂಧಗಳು ನಿಮ್ಮ ಸಂಗಾತಿಯ ಕಡೆಗೆ ಪ್ರೀತಿಯನ್ನು ಹೆಚ್ಚಿಸುವುದರೊಂದಿಗೆ ಹೆಚ್ಚು ಸಾಮರಸ್ಯವನ್ನು ಹೊಂದುವ ಸಾಧ್ಯತೆಯಿದೆ.

ಧನು :ಈ ವಾರವು ಧನು ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದವರಿಗೆ ಉತ್ತಮ ಅವಕಾಶಗಳನ್ನು ತಂದುಕೊಡಲಿದೆ. ನಿಮ್ಮ ಪ್ರಯಾಣವು ಆನಂದದಾಯಕ ಮತ್ತು ಆಕರ್ಷಕವಾಗಿರಲಿದೆ. ಜೊತೆಗೆ ಕುಟುಂಬದ ಜೊತೆಗೆ ವಿಹಾರವನ್ನು ಕೈಗೊಳ್ಳುವ ಅವಕಾಶವಿದೆ. ವೃತ್ತಿಪರ ಮತ್ತು ಉದ್ಯಮಶೀಲತೆಯ ವಿಚಾರದಲ್ಲಿ ಹೇಳುವುದಾದರೆ, ಈ ವಾರ ವಿಶೇಷವಾಗಿ ಅನುಕೂಲಕರವಾಗಿದೆ. ನಿಮ್ಮ ಕನಸಿನ ಕೆಲಸವನ್ನು ನೀವು ಪಡೆಯಬಹುದು ಅಥವಾ ಗಮನಾರ್ಹ ಸಾಧನೆಗಾಗಿ ಮನ್ನಣೆಯನ್ನು ಪಡೆಯಬಹುದು. ಇದರಿಂದಾಗಿ ನಿಮ್ಮ ಗೌರವ ಹೆಚ್ಚಲಿದೆ. ವಾರದ ಅಂತ್ಯದ ವೇಳೆಗೆ, ನಿಮ್ಮ ಮಕ್ಕಳಿಂದ ನೀವು ಸಕಾರಾತ್ಮಕ ಸುದ್ದಿಯನ್ನು ಪಡೆಯಬಹುದು ಮತ್ತು ಯಾವುದೇ ಕೌಟುಂಬಿಕ ವಿವಾದಗಳನ್ನು ಬಗೆಹರಿಸಬಹುದು. ಇದು ಗಾಢವಾದ ಪ್ರೀತಿಗೆ ಕಾರಣವಾಗುತ್ತದೆ. ಈ ಅವಧಿಯು ಪ್ರೇಮ ಸಂಬಂಧಿ ವಿಷಯಗಳಿಗೆ ಅನುಕೂಲವಾಗಿದೆ. ನಿಮ್ಮ ಸಂಗಾತಿಯೊಂದಿಗೆ ಅರ್ಥಪೂರ್ಣ ಸಮಯವನ್ನು ಕಳೆಯಲು ನಿಮಗೆ ಅವಕಾಶವಿದೆ. ಈ ವಾರ ನಿಮ್ಮ ದಾಂಪತ್ಯದಲ್ಲಿ ಸಂತೋಷದ ಅಧ್ಯಾಯದ ಆರಂಭವನ್ನು ಗುರುತಿಸಬಹುದು. ಹೀಗಾಗಿ ನಿಮ್ಮ ವೈವಾಹಿಕ ಜೀವನವು ಸಂತೋಷದಾಯಕವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸೇರಿಕೊಂಡು ನೀವು ಆನಂದದಾಯಕ ಮತ್ತು ಸಕಾರಾತ್ಮಕ ಕ್ಷಣಗಳನ್ನು ಆನಂದಿಸಬಹುದು.

ಮಕರ :ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಲು, ತಾಳ್ಮೆ ಮತ್ತು ಸ್ವಯಂ ನಿಯಂತ್ರಣದಿಂದ ಅವುಗಳನ್ನು ನಿಭಾಯಿಸುವುದು ಬಹಳ ಮುಖ್ಯ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಪ್ರಣಯ ಸಂಬಂಧಗಳನ್ನು ಪ್ರದರ್ಶಿಸದಿದ್ದರೆ ಅನಗತ್ಯ ಸಂಘರ್ಷಗಳನ್ನು ತಡೆಯಬಹುದು. ವೃತ್ತಿ ವಿಚಾರದಲ್ಲಿ ಹೇಳುವುದಾದರೆ, ಯಾವುದೇ ಹಣಕಾಸಿನ ಬದ್ಧತೆಗಳನ್ನು ಮಾಡುವ ಮೊದಲು ಜ್ಞಾನವುಳ್ಳ ವ್ಯಕ್ತಿ ಅಥವಾ ವಿಶ್ವಾಸಾರ್ಹ ಸ್ನೇಹಿತನೊಂದಿಗೆ ಸಮಾಲೋಚಿಸುವುದು ಒಳ್ಳೆಯದು. ಈ ವಾರವು ವೈಯಕ್ತಿಕ ಸಂಬಂಧಗಳಲ್ಲಿ, ವಿಶೇಷವಾಗಿ ಕೌಟುಂಬಿಕ ಬದುಕಿನಲ್ಲಿ ಸಂತೋಷವನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೊಂದಿಕೊಳ್ಳುವಲ್ಲಿ ಕೆಲವು ಸವಾಲುಗಳು ಇರಬಹುದು. ಆದರೂ ಅವರು ತಮ್ಮ ಬೆಂಬಲವನ್ನು ನೀಡುತ್ತಾರೆ. ವಾರದ ಅಂತ್ಯದ ವೇಳೆಗೆ, ಉದ್ಯೋಗಿ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವಲ್ಲಿ ಸವಾಲುಗಳನ್ನು ಎದುರಿಸಬಹುದು. ಆದರೂ ಅವರು ತಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನೀವು ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದರೆ ಅಥವಾ ಉದ್ಯೋಗವನ್ನು ಹುಡುಕುತ್ತಿದ್ದರೆ, ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಈ ವಾರದಲ್ಲಿ ನಿಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಮತ್ತು ನಿಮ್ಮ ಗುರಿಗಳಿಗೆ ಬದ್ಧರಾಗಿರುವುದರ ಮೂಲಕ ಧನಾತ್ಮಕ ಫಲಿತಾಂಶಗಳನ್ನು ಸಾಧಿಸಲು ಅವಕಾಶ ಲಭಿಸಲಿದೆ.

ಕುಂಭ :ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವು ಆನಂದದಾಯಕ ಮತ್ತು ಲಾಭದಾಯಕವಾಗಿದ್ದು, ನಿಮ್ಮ ಹಿರಿಯರು ಮತ್ತು ಗೆಳೆಯರಿಂದ ಸಾಕಷ್ಟು ಬೆಂಬಲ ದೊರೆಯಲಿದೆ. ಈ ಅವಧಿಯು ಪ್ರಗತಿಗೆ ಮತ್ತು ಹೊಸ ಆದಾಯದ ಗಳಿಕೆಗೆ ಹಲವಾರು ಅವಕಾಶಗಳನ್ನು ಒದಗಿಸುತ್ತದೆ. ಆಸ್ತಿ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ಪೋಷಕರಿಂದ ಸಂಪೂರ್ಣ ಬೆಂಬಲ ಮತ್ತು ಸಹಾಯವನ್ನು ನಿರೀಕ್ಷಿಸಬಹುದು. ಇದು ನಿಮ್ಮ ಆರ್ಥಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ. ಈ ಸಮಯದಲ್ಲಿ ಪ್ರೇಮ ಸಂಬಂಧಿತ ವಿಚಾರಗಳು ನಿಮಗೆ ಅನುಕೂಲಕರವಾಗಿರಬಹುದು. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇದು ಅತ್ಯುತ್ತಮ ಕ್ಷಣವಾಗಿದೆ. ಇದು ನಿಮ್ಮ ಕುಟುಂಬದ ಬೆಂಬಲದೊಂದಿಗೆ ಮದುವೆಗೆ ಕಾರಣವಾಗಬಹುದು. ದಾಂಪತ್ಯ ಜೀವನವು ಸಾರ್ಥಕವಾಗುವ ಸಾಧ್ಯತೆಯಿದೆ. ನೀವು ಸ್ಪರ್ಧೆಗೆ ಸಜ್ಜಾಗುತ್ತಿದ್ದರೆ, ಈ ವಾರವು ನಿಮ್ಮ ಪ್ರಯತ್ನಗಳಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ನಿಮ್ಮ ಸಮರ್ಪಣೆ ಮತ್ತು ಶೈಕ್ಷಣಿಕ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ಯಶಸ್ಸಿಗೆ ಸಾಕಷ್ಟು ಅವಕಾಶಗಳು ಲಭಿಸಲಿವೆ. ಮೂಲಭೂತವಾಗಿ, ಈ ವಾರವು ವೃತ್ತಿ ಸಾಧನೆಗಳು, ಆರ್ಥಿಕ ಯೋಗಕ್ಷೇಮ ಮತ್ತು ಪ್ರಣಯ ಸಂಬಂಧಗಳ ವಿಷಯದಲ್ಲಿ ಅದೃಷ್ಟ ಮತ್ತು ಪ್ರಯೋಜನಗಳನ್ನು ಭರವಸೆ ನೀಡುತ್ತದೆ. ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ಮರೆಯದಿರಿ. ಏಕೆಂದರೆ ಇದು ನಿಮ್ಮ ಒಟ್ಟಾರೆ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಮೀನ :ನೀವು ಜೀವನದಲ್ಲಿ ಹೊಸ ಮತ್ತು ಸಂತೋಷಕರ ಅವಕಾಶಗಳ ಸರಣಿಯಲ್ಲಿದ್ದೀರಿ. ಅವುಗಳನ್ನು ಬುದ್ಧಿವಂತಿಕೆಯಿಂದ ನಿಮ್ಮದಾಗಿಸಿಕೊಳ್ಳುವುದು ಬಹಳ ಮುಖ್ಯ. ಉದ್ಯೋಗದ ಹುಡುಕಾಟದಲ್ಲಿರುವವರು ಹೊಸ ಅವಕಾಶಗಳನ್ನು ಪಡೆಯಬಹುದು. ನೀವು ವಿದೇಶದ ಕನಸನ್ನು ಕಾಣುತ್ತಿದ್ದರೆ, ಅಲ್ಲಿ ಉನ್ನತ ಶಿಕ್ಷಣ ಅಥವಾ ಉದ್ಯೋಗಾವಕಾಶಗಳನ್ನು ಪಡೆಯಲು ಈ ವಾರ ಸೂಕ್ತ ಸಮಯವಾಗಿದೆ. ಈ ಅವಧಿಯಲ್ಲಿ ನಿಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಈ ಋತುವಿನಲ್ಲಿ ಸಾಮಾನ್ಯ ರೋಗಗಳನ್ನು ನಿವಾರಿಸಲು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾರದಲ್ಲಿ ಪ್ರೇಮ ಜೀವನವು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಸಂತಸ ಮತ್ತು ಸಂಭ್ರಮದೊಂದಿಗೆ ಮುಂದೆ ಸಾಗಲು ಸಾಕಷ್ಟು ಅವಕಾಶಗಳು ಲಭಿಸಲಿವೆ. ನಿಮ್ಮ ವೈವಾಹಿಕ ಸಂಬಂಧವು ಗಟ್ಟಿಯಾಗಿ ಉಳಿಯುವ ಸಾಧ್ಯತೆಯಿದೆ. ವಾರದ ಅಂತ್ಯದ ವೇಳೆಗೆ, ಆಸ್ತಿ, ಕಟ್ಟಡಗಳು ಅಥವಾ ಕುಟುಂಬದ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ಘರ್ಷಣೆಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳುವ ಸಾಧ್ಯತೆಯಿದೆ. ಇದು ನಿಮ್ಮ ವೃತ್ತಿಪರ ಜೀವನದಲ್ಲಿ ಆರ್ಥಿಕ ಲಾಭಗಳು ಮತ್ತು ಪ್ರಗತಿಗೆ ಕಾರಣವಾಗುತ್ತದೆ. ನಿಮ್ಮ ಪ್ರಯತ್ನಗಳಿಗೆ ಪ್ರತಿಫಲ ದೊರೆಯುತ್ತದೆ ಮತ್ತು ನಿಮ್ಮ ವ್ಯಾಪಾರ ಮತ್ತು ವೃತ್ತಿ ಎರಡೂ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ವಾರವು ಸಾಧನೆ, ಸಂತೋಷ ಮತ್ತು ಪ್ರಗತಿಯ ಅವಧಿಯಾಗಿದೆ. ನಿಮ್ಮ ಮಹತ್ವಾಕಾಂಕ್ಷೆಗಳ ಬೆನ್ನು ಬೀಳುವಾಗ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಮುಖ್ಯವಾಗಿದೆ.

ABOUT THE AUTHOR

...view details