ಕರ್ನಾಟಕ

karnataka

ETV Bharat / spiritual

ಭಾನುವಾರದ ದಿನ ಭವಿಷ್ಯ: ಈ ರಾಶಿಯವರು ಇಂದು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ! - DAILY HOROSCOPE

ಭಾನುವಾರದ ದಿನ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

Daily Horoscope of Sunday
ಭಾನುವಾರದ ದಿನ ಭವಿಷ್ಯ (ETV Bharat)

By ETV Bharat Karnataka Team

Published : Oct 20, 2024, 3:00 AM IST

ಇಂದಿನ ಪಂಚಾಂಗ

20-10-2024, ಭಾನುವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಅಶ್ವಿನ್

ಪಕ್ಷ:ಕೃಷ್ಣ

ತಿಥಿ:ತೃತೀಯಾ

ನಕ್ಷತ್ರ: ಕೃತಿಕಾ

ಸೂರ್ಯೋದಯ : ಬೆಳಗ್ಗೆ 06:09 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 02:59 ರಿಂದ 04:27 ಗಂಟೆವರೆಗೆ

ರಾಹುಕಾಲ :ಸಂಜೆ 04:27 ರಿಂದ 05:55 ಗಂಟೆವರೆಗೆ

ದುರ್ಮುಹೂರ್ತಂ : ಸಾಯಂಕಾಲ 04:33 ರಿಂದ 05:21 ಗಂಟೆವರೆಗೆ

ಸೂರ್ಯಾಸ್ತ:ಸಂಜೆ 05:55 ಗಂಟೆಗೆ

ರಾಶಿ ಭವಿಷ್ಯ:

ಮೇಷ: ಇಂದು ನೀವು ಅತ್ಯಂತ ಸೂಕ್ಷ್ಮ ಅಥವಾ ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಅಲೆಯ ವಿರುದ್ಧ ಈಜಲು ಬಯಸುತ್ತೀರಿ, ಅದು ಅಷ್ಟೇನೂ ಉಪಯುಕ್ತವಾದುದಲ್ಲ. ಯಾವುದೂ ನಿಮಗೆ ಅನುಕೂಲಕರವಾಗಿರುವಂತೆ ಕಾಣುವುದಿಲ್ಲ. ಒತ್ತಡದಿಂದ ನಿರಾಳಗೊಳ್ಳಲು ನೀವು ಕೊಂಚ ಸಮಯ ತೆಗೆದುಕೊಳ್ಳಿರಿ.

ವೃಷಭ:ನಿಮ್ಮ ಚಿಂತನಾಶಕ್ತಿ ಇಂದು ಅತ್ಯಂತ ದುರ್ಬಲವಾಗಿದೆ. ನಿಮ್ಮ ಸ್ವಾಮ್ಯತೆ ಸಂಘರ್ಷಕ್ಕೆ ಕಾರಣವಾಗಬಹುದು. ಅನಗತ್ಯ ಸಂಕೀರ್ಣಗಳನ್ನು ತಪ್ಪಿಸಲು ನಿಮ್ಮ ಕೋಪವನ್ನು ನಿಯಂತ್ರಿಸಿ. ಆತ್ಮಾವಲೋಕನ ನಿಮ್ಮ ಚಿಂತನೆಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ನಿಮ್ಮ ಸಮಸ್ಯೆಗಳನ್ನು ಕಂಡುಕೊಳ್ಳಲು ಮತ್ತು ಪರಿಹಾರಗಳನ್ನು ಚಿಂತಿಸಲು ಅವಕಾಶ ಕಲ್ಪಿಸುತ್ತದೆ.

ಮಿಥುನ: ನೀವು ಎಲ್ಲದರಿಂದ ವಿಮುಖರಾಗಿರುವಂತೆ ಭಾವಿಸುತ್ತೀರಿ. ಇದು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ದೂರ ಉಂಟು ಮಾಡಬಹುದು. ನಿಮ್ಮ ಕೋಪದಿಂದಾಗಿ ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು.

ಕರ್ಕಾಟಕ: ಕಲ್ಪನಾಲೋಕದಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತಾರೆ.(ನಿಮ್ಮ ಪ್ರಯತ್ನಗಳಿಗೆ ಶ್ಲಾಘನೆ). ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದವೂ ಇರುತ್ತದೆ.

ಸಿಂಹ: ನೀವು ಇಂದು ನಿಮ್ಮ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕೆಲಸದಲ್ಲಿ ಕಳೆದರೂ, ನಿಮಗೆ ಆಶ್ಚರ್ಯಗೊಳಿಸಲು ಸಕಾರಾತ್ಮಕ ಫಲಿತಾಂಶಗಳು ಕಾಯುತ್ತಿವೆ. ಕಚೇರಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಬುದ್ಧತೆ ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪವಿತ್ರ ದಿನದಂದು ವ್ಯಾಪಾರವು ಮಹತ್ತರ ಪುರಸ್ಕಾರಗಳು ಹಾಗೂ ಲಾಭಗಳನ್ನು ತಂದುಕೊಡಲಿದೆ.

ಕನ್ಯಾ: ಇಲ್ಲಿಯವರೆಗೂ ನೀವು ತಡೆಹಿಡಿದಿದ್ದ ಭಾವನೆಗಳು ಇಂದು ಹೊರಗಡೆ ನುಗ್ಗಲು ದಾರಿ ಕಂಡುಕೊಳ್ಳಬಹುದು. ನೀವು ಕೈಗೆ ಸಿಗುವ ವಸ್ತುಗಳ ಕುರಿತು ಭಾವನೆಗಳನ್ನು ಬೆಳೆಸಿಕೊಂಡು ಅವುಗಳಿಗೆ ಬಾಂಧವ್ಯ ಬೆಳೆಸಿಕೊಳ್ಳಬಹುದು. ನೀವಿರುವ ಪರಿಸರ ನಿಮ್ಮ ಇಷ್ಟಕ್ಕೆ ಅನುಗುಣವಾಗಿಲ್ಲದೇ ಇರುವುದರಿಂದ ವಿಶ್ರಾಂತಿರಾಹಿತ್ಯದ ಭಾವನೆ ಹೊಂದಬಹುದು.

ತುಲಾ: ಲಲಿತಕಲೆಗಳು ನಿಮ್ಮನ್ನು ಇಂದು ಕೈ ತೆರೆದು ಆಹ್ವಾನಿಸುತ್ತಿವೆ. ಅಂತಿಮವಾಗಿ ನಿಮ್ಮಲ್ಲಿನ ಗೋಪ್ಯವಾಗಿದ್ದ ಕಲಾವಿದ ಹೊರಬರುತ್ತಿದ್ದಾನೆ. ನಿಮ್ಮ ಮೆರುಗು ನೀಡಿದ ಸೌಂದರ್ಯಪ್ರಜ್ಞೆಯಿಂದ ನೀವು ಒಳಾಂಗಣ ಅಲಂಕರಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಮುನ್ನಡೆಸುತ್ತದೆ.

ವೃಶ್ಚಿಕ: ನೀವು ಯಾರೋ ಒಬ್ಬರಿಗೆ ಅವರ ಯೋಜನೆಯಲ್ಲಿ ಪಾಲುದಾರರಾಗಲು ಅವಕಾಶ ದೊರೆಯಬಹುದು, ಮತ್ತು ಇದು ನಿಮಗೆ ಇಡೀ ದಿನ ವ್ಯಸ್ತವಾಗಿರಿಸುತ್ತದೆ. ನೀವು ಬಯಸಿದಂತೆ ಫಲಿತಾಂಶ ದೊರೆಯದೇ ಇದ್ದರೂ, ತಾಳ್ಮೆಯು ನಿಮಗೆ ಮಹತ್ತರ ಪುರಸ್ಕಾರಗಳು ನಿಮಗಾಗಿ ಕಾಯುವಂತೆ ಮಾಡುತ್ತದೆ.

ಧನು: ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ನೀವು ವಿಜಯಿಯಾಗಿ ಹೊರಹೊಮ್ಮಲು ಮರುಹೋರಾಟ ನಡೆಸಬೇಕು. ಇಡೀ ದಿನ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿರಿ. ಸಂಜೆಯ ವೇಳೆಗೆ, ಅನಿರೀಕ್ಷಿತ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ ಮತ್ತು ನಿಮ್ಮನ್ನು ಅತ್ಯಂತ ಸಂತೋಷಗೊಳ್ಳುವಂತೆ ಮಾಡುತ್ತವೆ.

ಮಕರ: ಪ್ರತಿನಿತ್ಯ ಏನೋ ಒಂದ ಹೊಸದನ್ನು ನಿಮಗೆ ತರುತ್ತದೆ. ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ, ಅದರಿಂದ ಇಡೀ ದಿನ ಕೊಂಚ ಮಂಕಾಗಿರುತ್ತೀರಿ. ಆದರೆ ಕೆಲಸದ ವಿಷಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಪುರಸ್ಕರಿಸಲಾಗುತ್ತದೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಸದೃಢ ತಳಹದಿ ನಿರ್ಮಿಸಬಹುದು.

ಕುಂಭ: ನಿಮ್ಮ ದಿನ ಅತ್ಯಂತ ಘಟನೆಗಳ ದಿನವಾಗಿದೆ. ನೀವು ಹೊಸ ಜನರನ್ನು ಭೇಟಿಯಾಗಬಹುದು, ಅರ್ಥಪೂರ್ಣ ಸಂವಹನಗಳನ್ನು ನಡೆಸಬಹುದು ಮತ್ತು ನಿಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬಹುದು. ಈ ದಿನ ನಿಮಗೆ ನಿಮ್ಮ ಎಲ್ಲ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ನೀವು ಸುಸ್ತು ಹಾಗೂ ಆಯಾಸಪಡುವಂತೆ ಮಾಡಬಹುದು. ಆದರೆ ಒಟ್ಟಾರೆಯಾಗಿ ಈ ದಿನ ನಿಮಗೆ ಸಾಕಷ್ಟು ಉತ್ಸಾಹ ತರುತ್ತದೆ.

ಮೀನ: ಕೆಲಸದಲ್ಲಿ ನೀವು ಆತಂಕವನ್ನು ಎದುರಿಸುವ ಸಾಧ್ಯತೆ ಇದೆ, ನಿಮ್ಮಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ. ನೀವು ನಿಮ್ಮದೇ ಹೋರಾಟಗಳನ್ನು ನಡೆಸಬೇಕಾಗಬಹುದು ಮತ್ತು ಫಲಿತಾಂಶದ ಕುರಿತು ತಾಳ್ಮೆಯಿಂದಿರಿ. ದಿನ ಮುಂದುವರೆದಂತೆ, ನೀವು ನಿಮ್ಮ ಪ್ರಯತ್ನಗಳಿಗೆ ಪ್ರತಿಫಲವನ್ನು ಆನಂದಿಸಲು ಶಕ್ತರಾಗುತ್ತೀರಿ.

ಇದನ್ನೂ ಓದಿ:ಪತಿಯ ಆರೋಗ್ಯ, ಆಯಸ್ಸಿಗಾಗಿ ಕರ್ವಾ ಚೌತ್​: ಈ ಆಚರಣೆಯ ಮಹತ್ವ ನೀವೂ ಅರಿಯಿರಿ!

ABOUT THE AUTHOR

...view details