ಮೇಷ:ಈ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಜೀವನ ಸಂಗಾತಿಗೆ ಅವರ ಕೆಲಸದಲ್ಲಿ ಸಹಾಯ ಮಾಡಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ಗಮನ ನೀಡಿ. ನಿಮ್ಮ ಸಂಬಂಧದಲ್ಲಿ ಪ್ರೇಮವನ್ನು ಕಾಣಬಹುದು. ಈ ವಾರದಲ್ಲಿ ಹಣಕಾಸಿನ ವಿಚಾರದ ಕುರಿತ ವಿಪರೀತ ಚಿಂತೆಯು ನಿಮಗೆ ತಲೆನೋವು ನೀಡಬಹುದು. ಅದೃಷ್ಟವು ನಿಮ್ಮ ಪರವಾಗಿದ್ದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಪಾಲುದಾರರಿಗೆ ಗಮನ ನೀಡಬೇಕು. ಉದ್ಯೋಗದಲ್ಲಿರುವ ಜನರು ಹೊಸ ಕೆಲಸದ ಕುರಿತು ಯೋಚಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಬಹುದು. ನಿಮ್ಮ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದೀರಿ.
ವೃಷಭ:ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವ ಜನರು ತಮ್ಮ ಭಾವನೆಗಳನ್ನು ಪ್ರೇಮಿಗೆ ವ್ಯಕ್ತಪಡಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಪ್ರೇಮವನ್ನು ಕಾಣಬಹುದು. ಅವಿವಾಹಿತರಿಗೆ ಒಳ್ಳೆಯ ಪ್ರಸ್ತಾವನೆಯು ಬರಬಹುದು. ಇದರಿಂದ ಅವರು ಸಂತಸ ಅನುಭವಿಸಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಉದ್ಯೋಗದಲ್ಲಿರುವವರು ತಮ್ಮ ಕಿರಿಯ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸಬಾರದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಯತ್ನಿಸಲಿದ್ದಾರೆ. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ವೆಚ್ಚದಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದ್ದು ಇದರಿಂದ ನಿಮಗೆ ಚಿಂತೆ ಉಂಟಾಗಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ನೀವು ಯೋಜನೆ ರೂಪಿಸಲಿದ್ದೀರಿ. ಅಲ್ಲಿಯೂ ಸಹ ನಿಮಗೆ ವಿಪರೀತ ವೆಚ್ಚ ಉಂಟಾಗಬಹುದು.
ಮಿಥುನ:ಈ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಈ ವಾರದಲ್ಲಿ ನೀವು ಋಣಾತ್ಮಕ ವಿಚಾರಗಳಿಂದ ದೂರವುಳಿಯಬೇಕು. ನೀವು ಹೊಸ ಸಂಬಂಧಕ್ಕೆ ಕಾಲಿಡಲು ಇಚ್ಛಿಸುವುದಾದರೆ, ನೀವು ಸಾಕಷ್ಟು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ನಿಯಮದ ಪ್ರಕಾರ ನೀವು ಅಧ್ಯಯನವನ್ನು ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಪ್ರಗತಿ ಕಾಣಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸವನ್ನು ಮುಂದುವರಿಸಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮಗೆ ಅಧಿಕ ಖರ್ಚುವೆಚ್ಚ ಉಂಟಾಗಲಿದೆ. ಪ್ರಯಾಣ, ಊಟೋಪಚಾರ ಇತ್ಯಾದಿಗಳಿಗಾಗಿ ಖರ್ಚು ಉಂಟಾಗಲಿದೆ. ಹೂಡಿಕೆ ಮಾಡಲು ಸಮಯವು ಒಳ್ಳೆಯದು.
ಕರ್ಕಾಟಕ:ಕರ್ಕಾಟಕ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಒಂದು ವೇಳೆ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರೆ ತಮ್ಮ ಕಠಿಣ ಶ್ರಮದ ಮೂಲಕ ಅವರು ಯಶಸ್ಸನ್ನು ಸಾಧಿಸಲಿದ್ದಾರೆ. ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಉದ್ಯೋಗದಲ್ಲಿ ತೊಡಗಿಸಿಕೊಂಡಿರು ಜನರು ನಿಯೋಜಿಸಿದ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ಭಡ್ತಿ ಪಡೆಯಲಿದ್ದಾರೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಹೊಸ ವಾಹನ ಖರೀದಿಸಲು ನೀವು ಹಣ ಖರ್ಚು ಮಾಡಬಹುದು. ಮನೆಯ ಅಲಂಕಾರಕ್ಕಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು. ತಾಯಿ, ಮಾವ, ಅಜ್ಜ ಅಥವಾ ಅಜ್ಜಿಯಿಂದ ಆರ್ಥಿಕ ಲಾಭ ಉಂಟಾಗಬಹುದು.
ಸಿಂಹ:ಸಿಂಹ ರಾಶಿಯವರ ಕುರಿತು ಹೇಳುವುದಾದರೆ ನಿಮಗೆ ಈ ವಾರವು ತುಂಬಾ ಒಳ್ಳೆಯದು. ಗೆಳೆಯರ ಜೊತೆಗಿನ ಸಂಬಂಧದಲ್ಲಿ ಸುಧಾರಣೆಯಾಗಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ಯುವಕರು ಯಶಸ್ಸನ್ನು ಗಳಿಸಲಿದ್ದಾರೆ. ಅರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಿಕೊಂಡರೆ ಒಳ್ಳೆಯದು. ನಿಮಗೆ ಅಧಿಕ ಖರ್ಚುವೆಚ್ಚ ಉಂಟಾಗಲಿದೆ. ಮನೆಯ ಅಗತ್ಯತೆಗಾಗಿ ಒಂದಷ್ಟು ಶಾಪಿಂಗ್ ಮಾಡಬಹುದು. ನೀವು ವಾಹನವನ್ನು ಖರೀದಿಸಬಹುದು. ನೀವು ಸರ್ಕಾರಿ ಕ್ಷೇತ್ರದಿಂದ ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ಯಾವುದೇ ವಾಗ್ವಾದ ಅಥವಾ ಕಾನೂನಿನ ಕೆಲಸದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ನೀವು ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ.
ಕನ್ಯಾ: ಈರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಸಂತಸ ಅನುಭವಿಸಲಿದ್ದಾರೆ. ವಿವಾಹಿತ ಜನರು ಪ್ರಯಾಣಕ್ಕೆ ಹೋಗುವ ಮೂಲಕ ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಗಳಿಗೆ ಸಿದ್ಧತೆ ನಡೆಸುವ ಜೊತೆಗೆ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲಿದ್ದಾರೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನೀವು ಒಳ್ಳೆಯ ವೈದ್ಯರೊಬ್ಬರನ್ನು ಭೇಟಿಯಾಗುವುದು ಒಳ್ಳೆಯದು. ಉದ್ಯೋಗದಲ್ಲಿರುವವರಿಗೆ ತಮ್ಮ ದಕ್ಷತೆಯನ್ನು ಪ್ರದರ್ಶಿಸಲು ಅವಕಾಶ ದೊರೆಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಹೂಡಿಕೆ ಮಾಡಲು ಇದು ಸಕಾಲವಲ್ಲ. ಈ ವಾರದಲ್ಲಿ ಯಾವುದೇ ವ್ಯವಹಾರವನ್ನು ಎಚ್ಚರಿಕೆಯಿಂದ ನಡೆಸಿ.