ಕರ್ನಾಟಕ

karnataka

ETV Bharat / photos

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಗುಂಡಿನ ದಾಳಿ: ಘಟನಾ ಸ್ಥಳದ ಫೋಟೋಗಳು - Attack on Trump

ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಘಟನೆ ಜರುಗಿದ್ದು, ಮಾಜಿ ಅಧ್ಯಕ್ಷರ ಬಲ ಕಿವಿಗೆ ಗಾಯವಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವನಿಗೆ ಈ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಭದ್ರತಾ ಪಡೆಗಳು ಶಂಕಿತ ಶೂಟರ್​ನನ್ನು ಹೊಡೆದುರುಳಿಸಿವೆ. ಬಳಿಕ ಟ್ರಂಪ್​ ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. (Associated Press)

By ETV Bharat Karnataka Team

Published : Jul 14, 2024, 1:25 PM IST

ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ. (Associated Press)
ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ಕೈಗೊಂಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ. (Associated Press)
ಅಮೆರಿಕ ಮಾಜಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ. (Associated Press)
ಟ್ರಂಪ್ ಅವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿರುವ ಶಂಕೆ. (Associated Press)
ರ‍್ಯಾಲಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವನಿಗೆ ತಗುಲಿದ ಗುಂಡು. (Associated Press)
ಗುಂಡು ತಗುಲಿ ವ್ಯಕ್ತಿ ಸಾವು. (Associated Press)
ಶಂಕಿತ ಶೂಟರ್​ನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು. (Associated Press)
ಯುಎಸ್ ಸೀಕ್ರೆಟ್ ಸರ್ವೀಸ್ ವಕ್ತಾರರ ಪ್ರಕಾರ, ಟ್ರಂಪ್ ಮೇಲೆ ಗುಂಡು ಹಾರಿಸಿದ ಘಟನೆ ಯುಎಸ್ ಕಾಲಮಾನದ ಪ್ರಕಾರ ಶನಿವಾರ ಸಂಜೆ 6:15ಕ್ಕೆ ನಡೆದಿದೆ. (Associated Press)
ಪ್ರಚಾರದ ವೇಳೆ ಸಾವಿರಾರು ಜನರು ಸೇರಿದ್ದರು. (Associated Press)
ಅಮೆರಿಕದ ಮಾಧ್ಯಮಗಳು ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿವೆ. (Associated Press)
ಗುಂಡು ಹಾರಿಸಿದ ಕ್ಷಣಗಳೀಗ ಭಾರಿ ವೈರಲ್​​ (Associated Press)
ಟ್ರಂಪ್ ಮೇಲೆ ಗುಂಡು ಹಾರಿಸಿದ್ದು ಮತ್ತು ರಕ್ತಸ್ರಾವ ಸೇರಿದಂತೆ ಎಲ್ಲಾ ದೃಶ್ಯಗಳು ಲೈವ್ ಪ್ರಸಾರ ಆಗಿವೆ. (Associated Press)
ಗುಂಡಿನ ಸದ್ದು ಕೇಳಿದ ಕೂಡಲೇ ಎಚ್ಚೆತ್ತ ಟ್ರಂಪ್, ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸಿದರು. (Associated Press)
ರ‍್ಯಾಲಿ ವೇಳೆ ಭಾಗವಹಿಸಿದ್ದ ಜನರು ಬೆಚ್ಚಿಬಿದ್ದರು. (Associated Press)
ಘಟನೆ ನಡೆದ ಕೂಡಲೇ ಭದ್ರತಾ ಸಿಬ್ಬಂದಿ ಟ್ರಂಪ್​ ಅವರನ್ನು ಸುತ್ತುವರೆದರು. (Associated Press)
ಟ್ರಂಪ್​ ಮೇಲೆ ದಾಳಿ. (Associated Press)
ಘಟನಾ ಸ್ಥಳ. (Associated Press)
ಮುಂದುವರೆದ ಪೊಲೀಸ್​ ತನಿಖೆ. (Associated Press)

ABOUT THE AUTHOR

...view details