ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಖ್ಯಾತಿಯ ಕಿಚ್ಚ ಸುದೀಪ್ 1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ವೃತ್ತಿಜೀವನ ಆರಂಭಿಸಿದ್ದರು. ಈ ಪಯಣಕ್ಕೀಗ 28 ವರ್ಷಗಳಾಗುತ್ತಿದೆ. ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಕೂಡ 10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಷ್ಟೂ ಸೀಸನ್ಗಳಲ್ಲಿಯೂ ಸುದೀಪ್ ಅವರೇ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.'ಸುದೀಪ್ ಸಿನಿಪಯಣ'ಕ್ಕೆ 28 ವರ್ಷಗಳ ಸಂಭ್ರಮ.1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ವೃತ್ತಿಜೀವನ ಆರಂಭಿಸಿದ್ದ ಸುದೀಪ್.ಬಿಗ್ ಬಾಸ್ ಜರ್ನಿಗೂ 'ದಶಕ'ದ ಸಂಭ್ರಮ.10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕೀರ್ತಿ ಸುದೀಪ್ ಅವರಿಗೆ ಸಲ್ಲುತ್ತದೆ.ಸರ್ವರಿಗೂ ಧನ್ಯವಾದ ಅರ್ಪಿಸಿದ ಸ್ಯಾಂಡಲ್ವುಡ್ ಸೂಪರ್ ಸ್ಟಾರ್.ಮಲೆನಾಡಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸುದೀಪ್ ಕ್ರಿಕೆಟ್ ಸ್ಟಾರ್ ಆಗಬೇಕೆಂಬ ಕನಸು ಹೊತ್ತಿದ್ದರು.ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಗಾಯಕನಾಗಿ ಸುದೀಪ್ ಗುರುತಿಸಿಕೊಂಡಿದ್ದಾರೆ.ಸುದೀಪ್ ಮೊದಲು ಬಣ್ಣ ಹಚ್ಚಿದ್ದು 'ಬ್ರಹ್ಮ' ಚಿತ್ರಕ್ಕಾದರೂ, ಪೂರ್ತಿಯಾಗಲಿಲ್ಲ. ಬಳಿಕ 1997ರಲ್ಲಿ 'ತಾಯವ್ವ' ಚಿತ್ರದಲ್ಲಿ ನಟಿಸಿದರಾದರೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ.ನಂತರ ಬಂದ 'ಪ್ರತ್ಯರ್ಥ' ಸಿನಿಮಾ ಕೂಡ ನಿರೀಕ್ಷೆ ತಲುಪಲಿಲ್ಲ.'ಸುದೀಪ್ ಐರನ್ ಲೆಗ್' ಅನ್ನೋ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಿನಿಮಾ ಸಹವಾಸವೇ ಸಾಕು ಎಂದು ನಿರ್ಧರಿಸಿದ್ದರು.
ಆದ್ರೆ ಆ ಸಂದರ್ಭದಲ್ಲಿ ನಟನ ಕೈ ಹಿಡಿದಿದ್ದು ಸ್ಪರ್ಶ ಸಿನಿಮಾ.ಒಂದೂವರೆ ಕೋಟಿ ಬಜೆಟ್ನ ಸಿನಿಮಾ ನಾಲ್ಕು ಕೋಟಿ ಗಳಿಸುವ ಮೂಲಕ ನಟನಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು.ನಂತರ ಸುದೀಪ್ ಸಿನಿಮಾ ಕೆರಿಯರ್ನಲ್ಲಿ ಮಹತ್ವದ ತಿರುವು ತಂದುಕೊಟ್ಟ ಚಿತ್ರ 'ಹುಚ್ಚ'.ಅಲ್ಲಿಂದ ಕಿಚ್ಚ ಹಿಂತಿರುಗಿ ನೋಡಲೇ ಇಲ್ಲ.ವೀರ ಮದಕರಿ, ಕೆಂಪೇಗೌಡ, ಈಗ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2, ಹೆಬ್ಬುಲಿ, ಪೈಲ್ವಾನ್, ವಿಕ್ರಾಂತ್ ರೋಣ ಹೀಗೆ 45 ಸಿನಿಮಾಗಳಲ್ಲಿ ನಟಿಸಿದ್ದಾರೆ.ಬಹುಭಾಷೆಗಳಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಪ್ರಭಾಸ್, ವಿಜಯ್ ಅವರಂತಹ ಸ್ಟಾರ್ ನಟರ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ.ಕಿಚ್ಚನ 46ನೇ ಸಿನಿಮಾ ಮ್ಯಾಕ್ಸ್ಮುಂದಿನ ಸಿನಿಮಾದ ಮೇಲಿದೆ ಸಾಕಷ್ಟು ನಿರೀಕ್ಷೆ.ಮ್ಯಾಕ್ಸ್ ಇದೇ ಸಾಲಿನಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.ಕಿಚ್ಚ ಸುದೀಪ್ಅಭಿನಯ ಚಕ್ರವರ್ತಿ ಸುದೀಪ್