ಬಾಲಿವುಡ್ ಅಭಿನೇತ್ರಿ ಸೋನಂ ಕಪೂರ್.. ಸೋಷಿಯಲ್ ಮೀಡಿಯಾದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡ ನಟಿ.. ಅಮ್ಮನ 35 ವರ್ಷದ ಹಳೇ ಘರ್ಚೋಲಾ ಸೀರೆಯುಟ್ಟು ಮಿಂಚಿದ ಸೋನಂ ಕಪೂರ್.. ಹೆಚ್ಚಾಗಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ಳೋ ಅನಿಲ್ ಕಪೂರ್ ಪುತ್ರಿ ಇದೀಗ ಸಾಂಪ್ರದಾಯಿಕ ನೋಟದಲ್ಲಿ ಅಭಿಮಾನಿಗಳ ಮನ ಸೆಳೆದಿದ್ದಾರೆ.. ನಟಿಯ ಹೊಸ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.. ಅದ್ಭುತ ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾದ ನಟಿ ಇವರು.. ಫಿಟ್ನೆಸ್ ಐಕಾನ್ ಕೂಡ ಹೌದು.. ಹಂಚಿಕೊಳ್ಳೋ ಪ್ರತೀ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.