ಕರ್ನಾಟಕ

karnataka

ETV Bharat / photos

ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: 'ದೆಹಲಿ ಚಲೋ' ಪ್ರತಿಭಟನೆ: Photos - farmers protest photos

ಪಂಜಾಬ್​​​ ಮತ್ತು ಹರಿಯಾಣ ರೈತರ 'ದೆಹಲಿ ಚಲೋ' ಹೋರಾಟ ಬುಧವಾರ ತೀವ್ರಗೊಂಡಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ, 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತಗೊಳಿಸಲಾಗಿದೆ. 'ದೆಹಲಿ ಚಲೋ' ಹೋರಾಟದ ಫೋಟೋಗಳಿಲ್ಲಿವೆ ನೋಡಿ.

By ETV Bharat Karnataka Team

Published : Feb 22, 2024, 8:30 AM IST

ಎಂಎಸ್​ಪಿಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಪಂಜಾಪ್​ ಮತ್ತು ಹರಿಯಾಣ ರೈತರ ಹೋರಾಟ ನಡೆಸುತ್ತಿದ್ದಾರೆ.
ಸಂಘರ್ಷಕ್ಕೆ ತಿರುಗಿದ 'ದೆಹಲಿ ಚಲೋ' ಪ್ರತಿಭಟನೆ.
ಓರ್ವ ರೈತ ಮೃತ - 12 ಪೊಲೀಸರಿಗೆ ಗಾಯ.
2 ದಿನ ಹೋರಾಟವನ್ನು ಸ್ಥಗಿತಗೊಳಿಸಲು ರೈತ ಮುಖಂಡರಿಂದ ಕರೆ.
ಶಂಭು ಮತ್ತು ಖನೌರಿ ಗಡಿಯಲ್ಲಿ ಬೀಡುಬಿಟ್ಟ ಸಾವಿರಾರು ರೈತರು.
ಭದ್ರತೆಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಮೆಣಸಿನಕಾಯಿ ಪುಡಿಯನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿದರು.
ಪರಿಸ್ಥಿತಿ ಬಿಗಡಾಯಿಸಿ, ರೈತರು-ಪೊಲೀಸರು ಗಾಯಗೊಂಡರು.
ಗಡಿಯಲ್ಲಿ ಪೊಲೀಸರು ಬಿಗಿ ಪಹರೆ ಹಾಕಿದ ಬಳಿಕ ರೈತ ಮುಖಂಡರು ಪ್ರತಿಭಟನೆ ಸ್ಥಗಿತಗೊಳಿಸಲು ಕರೆ ನೀಡಿದರು. ಎರಡು ದಿನಗಳ ಕಾಲ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡುವುದಾಗಿ ಘೋಷಿಸಿದ್ದಾರೆ.

ABOUT THE AUTHOR

...view details