ಕರ್ನಾಟಕ

karnataka

ETV Bharat / photos

Photos; ಕೊಂಕಣಿ ಸಂಪ್ರದಾಯದಂತೆ ಅರುಣ್ ಜೊತೆ ಹಸೆಮಣೆ ಏರಿದ ಟಗರು ಪುಟ್ಟಿ ಮಾನ್ವಿತಾ - Manvita Kamath Wedding - MANVITA KAMATH WEDDING

ಕನ್ನಡ ಚಿತ್ರರಂಗದಲ್ಲಿ ಟಗರು ಪುಟ್ಟಿ ಎಂದೇ ಕರೆಸಿಕೊಂಡಿರುವ ಮಾನ್ವಿತಾ ಕಾಮತ್ ಇಂದು ಮೈಸೂರಿನ ಮ್ಯೂಸಿಕ್‌ ಪ್ರೊಡ್ಯೂಸರ್‌ ಅರುಣ್‌ ಕುಮಾರ್‌ ಜೊತೆ ಹಸೆಮಣೆ ಏರಿದ್ದಾರೆ. ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ. ಏಪ್ರಿಲ್‌ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ ಕಾರ್ಯಕ್ರಮ ಜರುಗಿತ್ತು.

By ETV Bharat Karnataka Team

Published : May 1, 2024, 4:05 PM IST

ಮ್ಯೂಸಿಕ್‌ ಪ್ರೊಡ್ಯೂಸರ್‌ ಅರುಣ್‌ ಕುಮಾರ್‌ ಜೊತೆ ದಾಂಪತ್ಯ ಜೀವನ ಆರಂಭಿಸಿದ ಮಾನ್ವಿತಾ ಕಾಮತ್.
ಏಪ್ರಿಲ್‌ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ ಕಾರ್ಯಕ್ರಮ ಜರುಗಿತ್ತು.
ಇಂದು ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ.
ದುನಿಯಾ ಸೂರಿ ನಿರ್ದೇಶನದ ಸೂಪರ್‌ಹಿಟ್‌ 'ಕೆಂಡಸಂಪಿಗೆ' ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಮಾನ್ವಿತಾ ಕಾಮತ್‌ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವಣ್ಣ ನಟನೆಯ ಟಗರು ಸಿನಿಮಾ ನಟಿಯ ಜನಪ್ರಿಯತೆ ಹೆಚ್ಚಿಸಿತು.
ಸೋದರಮಾವ ಮದುಮಗಳನ್ನು ಮಂಟಪಕ್ಕೆ ಎತ್ತಿಕೊಂಡು ಬರುವ ಶಾಸ್ತ್ರವೂ ನೆರವೇರಿದೆ.
ಸಮಾರಂಭದಲ್ಲಿ ಆಪ್ತರು, ಗೆಳೆಯರಷ್ಟೇ ಭಾಗಿಯಾಗಿದ್ದರು.
ಲವ್ ಮ್ಯಾರೇಜ್ ಎನ್ನುವ ವದಂತಿಯನ್ನು ಮಾನ್ವಿತಾ ಕಾಮತ್ ತಳ್ಳಿಹಾಕಿದ್ದಾರೆ. ನಮ್ಮದು ಅರೇಂಜ್ ಮ್ಯಾರೇಜ್ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details