BAFTA ಎಂದು ಕರೆಯಲ್ಪಡುವ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೋಣೆ ತಮ್ಮ ಸಹಜ ನೋಟದಿಂದ ಸೆಳೆದಿದ್ದಾರೆ. ಅಲ್ಲದೇ ಗೋಲ್ಡನ್ ಬಣ್ಣದ ಶೈನಿ ಸೀರೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಪ್ಪಿ, ಅನೇಕರಿಗೆ ತಮ್ಮ ಹಸ್ತದಿಂದ ಪ್ರಶಸ್ತಿಗಳನ್ನು ನೀಡಿ ಭಾರತಕ್ಕೆ ಹೆಮ್ಮೆ ಸಹ ತಂದಿದ್ದಾರೆ. ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭವು ವಿಶ್ವದ ಅನೇಕ ದಿಗ್ಗಜ ತಾರೆಯರ ಸಮಾಗಮಕ್ಕೆ ಸಾಕ್ಷಿ ಆಯಿತು.