ಕರ್ನಾಟಕ

karnataka

ETV Bharat / photos

ನಿಮ್ಮ ಆಹಾರ ಪದ್ಧತಿಯಲ್ಲಿ ಬಾಳೆಹಣ್ಣು ಸೇರಿಸಿ, ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ - Banana Health Benefits - BANANA HEALTH BENEFITS

ಬಾಳೆಹಣ್ಣು ಎಲ್ಲ ಋತುಮಾನದಲ್ಲೂ ಸಿಗುವ ಪೋಷಕಾಂಶಭರಿತ ಹಣ್ಣು. ಈ ಹಣ್ಣನ್ನು ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆ ಪ್ರಯೋಜನಗಳೇನು? ನೋಡೋಣ ಬನ್ನಿ.

By ETV Bharat Karnataka Team

Published : Mar 28, 2024, 9:36 AM IST

ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಹಾರಪದ್ಧತಿಯಲ್ಲಿ ಇರಲಿ ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ವಿಟಮಿನ್ ಸಿ, ಮಿದುಳಿನ ಕಾರ್ಯಕ್ಕೆ ವಿಟಮಿನ್ ಬಿ6 ಇದೆ. ಜೀರ್ಣಕ್ರಿಯೆಗೆ ಫೈಬರ್ ಅಂಶವಿದೆ.
ರಕ್ತ, ಹೃದಯದ ಆರೋಗ್ಯಕ್ಕೂ ಸಹಕಾರಿ.
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕ. ಇದು ಹೃದಯ, ಸ್ನಾಯು ಆರೋಗ್ಯಕ್ಕೆ ಸಹಕಾರಿ. ಅಲ್ಲದೇ, ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.
ಬಾಳೆಹಣ್ಣಿನಲ್ಲಿ ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್​ನಂತಹ ನೈಸರ್ಗಿಕ ಸಕ್ಕರೆಯ ಅಂಶಗಳಿವೆ. ಇವು ದೇಹಕ್ಕೆ ತ್ವರಿತ ಶಕ್ತಿ ಒದಗಿಸುತ್ತವೆ.
ಬಾಳೆಹಣ್ಣಿನಲ್ಲಿರುವ ಫೈಬರ್ ಮಲಬದ್ಧತೆಯನ್ನು ತಡೆಯುತ್ತದೆ. ಒಟ್ಟಾರೆ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ.
ಜೀರ್ಣಕ್ರಿಯೆ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಬಾಳೆಹಣ್ಣು ಆರೋಗ್ಯ ಪ್ರಯೋಜನಗಳು...

ABOUT THE AUTHOR

...view details