ಕರ್ನಾಟಕ

karnataka

ETV Bharat / photos

ಕುವೆಂಪು ಕವಿಮನೆ, ಕವಿಶೈಲಕ್ಕೆ ನಟ ಸಾಯಿಕುಮಾರ್​ ಭೇಟಿ: ಫೋಟೋಗಳು - ಕವಿಶೈಲಕ್ಕೆ ಸಾಯಿಕುಮಾರ್ ಭೇಟಿ

ಅದ್ಭುತ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಸಾಯಿಕುಮಾರ್ ಇತ್ತೀಚೆಗೆ ಶಿವಮೊಗ್ಗದ ಕುಪ್ಪಳ್ಳಿಯ ಕುವೆಂಪು ಅವರ ಕವಿಮನೆ ಹಾಗೂ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳು ಇಲ್ಲಿವೆ.

By ETV Bharat Karnataka Team

Published : Jan 28, 2024, 10:43 AM IST

ಕುಪ್ಪಳ್ಳಿಯಲ್ಲಿರುವ ಪ್ರಸಿದ್ಧ ಕುವೆಂಪು ಕವಿಮನೆ
ದಕ್ಷಿಣ ಚಿತ್ರರಂಗದ ಖ್ಯಾತ ನಟ ಸಾಯಿಕುಮಾರ್
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ ಸಾಯಿಕುಮಾರ್
''ಅಬ್ಬಾ! ಆ ಸ್ಥಳವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ'' ಎಂದ ನಟ
''ನನ್ನ ಸಿನಿಮಾಗಳಲ್ಲಿ ಕುವೆಂಪು ಅವರ ಗೀತೆಗಳನ್ನು ಹಾಡುತ್ತಿರುತ್ತೇನೆ. ಆದರೆ ಈವರೆಗೂ ಕುಪ್ಳಳ್ಳಿಗೆ ಹೋಗಿರಲಿಲ್ಲ''- ಸಾಯಿಕುಮಾರ್
''ಪ್ರಕೃತಿಯ ಮಡಿಲಲ್ಲಿರುವ ಪುಣ್ಯಸ್ಥಳ ನೋಡಿ ಪುಳಕಿತನಾದೆ'
''ಸುಮಾರು 30 ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನು ಮಾಡುತ್ತಿದ್ದರೂ ಕುಪ್ಪಳ್ಳಿಯನ್ನು ನೋಡುವ ಯೋಗ ನನಗೆ ಬಂದಿರಲಿಲ್ಲ''-ಸಾಯಿಕುಮಾರ್
''ಕುವೆಂಪು ಬಳಸುತ್ತಿದ್ದ ಲೇಖನಿ ಹಾಗೂ ಪುಸ್ತಕ ಸೇರಿ ಮುಂತಾದವುಗಳನ್ನು ಕಂಡು ಧನ್ಯನಾದೆ'' - ಸಾಯಿಕುಮಾರ್
ವಿದ್ಯಾರ್ಥಿಗಳು ಹಾಗೂ ಯುವಕರು ಕುಪ್ಪಳ್ಳಿಗೆ ಭೇಟಿ ನೀಡಿ. ಅಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಸಾಯಿಕುಮಾರ್

ABOUT THE AUTHOR

...view details