ಕರ್ಜಿಕಾಯಿ ಹೆಚ್ಚಿನವರಿಗೆ ಇಷ್ಟವಾಗುವ ದೇಶಿ ಸಿಹಿ.. ಲಕ್ನೋದ ಪ್ರಸಿದ್ಧ ಸ್ವೀಟ್ ಶಾಪ್ನಲ್ಲಿ 24 ಕ್ಯಾರೆಟ್ ಚಿನ್ನದ ಲೇಪನದಿಂದ ತಯಾರಿಸಲಾದ ಕರ್ಜಿಕಾಯಿಗಳನ್ನು ಮಾರಾಟಕ್ಕೆ ಇಡಲಾಗಿದೆ.. ಹೋಳಿ ಸಂಭ್ರಮಾಚರಣೆಗೆ ಈ ಖಾದ್ಯವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಕರ್ಜಿಕಾಯಿಗಳನ್ನು ಗುಜಿಯಾ ಎಂದು ಕರೆಯಲಾಗುತ್ತದೆ.. ಕೆಲ ಪ್ರದೇಶಗಳಲ್ಲಿ ಕರ್ಜಿಕಾಯಿ ಇಲ್ಲದೇ ಹೋಳಿ ಹಬ್ಬ ಪೂರ್ಣವಾಗುವುದಿಲ್ಲ.. ಶ್ರೀಕೃಷ್ಣನ ಮೆಚ್ಚಿನ ಖಾದ್ಯ ಎಂದೂ ನಂಬಲಾಗಿದೆ.. ಈ ಬಂಗಾರ ಲೇಪಿತ ಕರ್ಜಿಕಾಯಿಗಳಲ್ಲಿ 5 ದೇಶಗಳ ಡ್ರೈ ಫ್ರೂಟ್ಸ್ ಬಳಸಲಾಗಿದೆ.. ಅಫ್ಘಾನಿಸ್ತಾನದ ಬಾದಾಮಿ ಮತ್ತು ಪಿಸ್ತಾ. ಅಮೆರಿಕದ ಬ್ಲೂ ಬೆರಿ. ದಕ್ಷಿಣ ಆಫ್ರಿಕಾದ ಮ್ಯಾಕಡಾಮಿಯಾ. ಟರ್ಕಿಯ ಹಝೆಲ್ ನಟ್ಸ್. ಕಾಶ್ಮೀರದ ಕೇಸರಿಯನ್ನು ಇದರಲ್ಲಿ ಬಳಸಲಾಗಿದೆ.. 4 ಕರ್ಜಿಕಾಯಿ ಇರುವ ಸ್ವೀಟ್ ಬಾಕ್ಸ್ ಬೆಲೆ 4.480ರೂ. ಒಂದು ಕೆಜಿಯ ಡಬ್ಬದಲ್ಲಿ ಸುಮಾರು 40 ಕರ್ಜಿಕಾಯಿಗಳಿರುತ್ತವೆ. ಒಂದು ಕೆಜಿಯ ಬಾಕ್ಸ್ ಬೆಲೆ 56 ಸಾವಿರ ರೂ.. ಗೋಲ್ಡನ್ ಗುಜಿಯಾ ಅಲ್ಲದೇ ಸಾಮಾನ್ಯ ಕರ್ಜಿಕಾಯಿಗಳು ಎಲ್ಲೆಡೆ ಮಾರಾಟಕ್ಕೆ ಇಡಲಾಗಿದೆ.. ಗೋಲ್ಡನ್ ಗುಜಿಯಾ ಮಾರಾಟಕ್ಕೆ..