ಹೈದರಾಬಾದ್: ಹುಬ್ಬಳಿಯಲ್ಲಿ ಡಿಸೆಂಬರ್ 22 ರಂದು ಉಣಕಲ್ನ ಅಚ್ಚವ್ವ ಕಾಲೋನಿಯ ಕಟ್ಟಡವೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ 8 ಜನರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮಾಡುತ್ತಿದ್ದ ಕಟ್ಟಡದಲ್ಲಿ ತಡರಾತ್ರಿ ಈ ಸ್ಫೋಟ ಸಂಭವಿಸಿ ಭಾರಿ ಅನಾಹುತಕ್ಕೆ ಕಾರಣವಾಗಿದೆ. ಈ ಘಟನೆಯು ಎಲ್ಪಿಜಿ ಸಿಲಿಂಡರ್ ಸೋರಿಕೆ ಮತ್ತು ಸ್ಫೋಟದ ಕುರಿತು ಪ್ರತಿಯೊಬ್ಬರು ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕು ಎಂಬ ಕುರಿತು ಮತ್ತೊಮ್ಮೆ ತಿಳಿಸುವಂತೆ ಮಾಡಿತು.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?
ಇಂಧನ, ಆಮ್ಲಜನಕ ಮತ್ತು ದಹಿಸುವ ಶಕ್ತಿ ಸ್ಫೋಟದ ಪ್ರಮುಖ ವಸ್ತುಗಳಾಗಿವೆ. ಗ್ಯಾಸ್ ಸೋರಿಕೆಯಾದಾಗ ನಮ್ಮ ವಾತಾವರಣದಲ್ಲಿನ ಆಮ್ಲಜನಕಕ್ಕೆ ಒಂದು ಕಿಡಿ ತಗುಲಿದರೂ ಅದು ಸ್ಫೋಟವಾಗುತ್ತದೆ ಎಂಬುದನ್ನು ಮರೆಯಬಾರದು. ಇದೇ ಕಾರಣಕ್ಕೆ ಗ್ಯಾಸ್ ಸೋರಿಕೆ ಅಂಶದ ಬಗ್ಗೆ ಅಸಡ್ಡೆ ಬೇಡ.
ಗ್ಯಾಸ್ ಸೋರಿಕೆಗೆ ಹಲವು ಬಾರಿ ಇವು ಕಾರಣವಾಗುತ್ತದೆ ಎಚ್ಚರ:
- ದೋಷಯುಕ್ತ ಸಂಪರ್ಕಗಳು ಅಥವಾ ಹಳೆಯದಾದ ಸಿಲಿಂಡರ್ಗಳ ಭಾಗಗಳು ಸೋರಿಕೆಯನ್ನು ಉಂಟುಮಾಡಬಹುದು.
- ಸ್ಟೌವ್ಗಳು, ಓವನ್ಗಳು ಅಥವಾ ನೇರ ಸೂರ್ಯನ ಬೆಳಕಿನ ಬಳಿ ಸಿಲಿಂಡರ್ಗಳನ್ನು ಇಡುವುದು ಅಪಾಯಕಾರಿ. ಇದು ಅದರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.
- ಸಿಲಿಂಡರ್ಗಳನ್ನು ಬೀಳಿಸುವುದು, ಬಡಿಯುವುದು ಅಥವಾ ತಿರುಚುವುದರಿಂದ ಅದರ ಸುರಕ್ಷತಾ ಕವಾಟಕ್ಕೆ ಹಾನಿಯಾಗಿ ಇಂಧನ ಸೋರಿಕೆಯಾಗುತ್ತದೆ.
- ಸಿಲಿಂಡರ್ ಕ್ಯಾಪ್ನ ವಾಲ್ (ಕವಾಟ) ಅಥವಾ ಸುರಕ್ಷತಾ ಸೀಲ್ ತಿರುವುದರಿಂದ ಕೂಡ ಹಾನಿ ಸಂಭವಿಸಬಹುದು.
ಮುನ್ನೆಚ್ಚರಿಕಾ ಕ್ರಮ:
- ಈ ಕೆಲವು ಸುರಕ್ಷತಾ ಕ್ರಮ ವಹಿಸುವುದರಿಂದಾಗಿ ಸ್ಫೋಟದ ಅಪಾಯ ಕಡಿಮೆ ಮಾಡಬಹುದು.
- ಸೂರ್ಯನ ಬೆಳಕು ಮತ್ತು ಶಾಖದ ಮೂಲಗಳು ನೇರವಾಗಿ ಸಿಲಿಂಡರ್ ಮೇಲೆ ಬೀಳುವುದನ್ನು ತಪ್ಪಿಸಿ. ಚೆನ್ನಾಗಿ ಗಾಳಿ ಆಡುವ ಪ್ರದೇಶದಲ್ಲಿ ಸಿಲಿಂಡರ್ ಅನ್ನು ಇರಿಸಿ.
- ನಿಯಮಿತವಾಗಿ ಸಿಲಿಂಡರ್ ಸೋರಿಕೆ ಮತ್ತು ಅದರ ಕೊಳವೆಯನ್ನು ಪರಿಶೀಲಿಸಿ. ಇದಕ್ಕೆ ಬೇಕಾದಲ್ಲಿ ಸೋಪ್ ವಾಟರ್ ತಂತ್ರ ಬಳಸಬಹುದು.
- ಐಎಸ್ಐ ಮಾರ್ಕ್ನ ಒತ್ತಡ ನಿಯಂತ್ರಕ ಮತ್ತು ಕೊಳವೆ ಬಳಕೆ ಮಾಡಿ. ಅದರ ಶಿಫಾರಸ್ಸಿಗೆ ಅನುಗುಣವಾಗಿ ಅವುಗಳನ್ನು ನಿಯಮಿತವಾಗಿ ಬದಲಾಯಿಸಿ.
- ಸರಿಯಾದ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳುವ ಅಧಿಕೃತ ಡೀಲರ್ಗಳಿಂದ ಯಾವಾಗಲೂ ಎಲ್ಪಿಜಿ ಸಿಲಿಂಡರ್ಗಳನ್ನು ಖರೀದಿಸಿ.
- ಸೋರಿಕೆ ಅನುಮಾನ ವ್ಯಕ್ತವಾದರೆ, ತಕ್ಷಣವೇ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ ಮತ್ತು ಗಾಳಿಯಾಡಲು ಕಿಟಕಿಗಳನ್ನು ತೆರೆಯಿರಿ. ಸ್ವಿಚ್ಗಳು, ಲೈಟರ್ಗಳು ಅಥವಾ ಸಿಗರೇಟ್ಗಳನ್ನು ಈ ಸಂದರ್ಭದಲ್ಲಿ ಬಳಸಬೇಡಿ. ಈ ವೇಳೆ ತಕ್ಷಣಕ್ಕೆ ಗ್ಯಾಸ್ ಪೂರೈಕೆದಾರರನ್ನು ಸಂಪರ್ಕಿಸಿ.
- ಉಪಕರಣವನ್ನು ಆನ್ ಮಾಡುವ ಮೊದಲು, ಸಿಲಿಂಡರ್ ಮತ್ತು ಸಂಪರ್ಕಗಳ ಸುತ್ತಲೂ ಸ್ನಿಫ್ ಪರೀಕ್ಷೆಯನ್ನು ಮಾಡಿ. ಇದು ತಕ್ಷಣಕ್ಕೆ ಸೋರಿಕೆಯನ್ನು ತಿಳಿಸುತ್ತದೆ.
- ಗ್ಯಾಸ್ ಬಳಕೆ ಮಾಡದಿದ್ದಾಗ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ.
- ಸಿಲಿಂಡರ್ ಸಂಪರ್ಕಗಳನ್ನು ಬದಲಾಯಿಸುವಾಗ ಅಥವಾ ಸೋರಿಕೆಯನ್ನು ಪರಿಶೀಲಿಸುವಾಗ ಸಿಲಿಂಡರ್ ಬಳಿ ವಿದ್ಯುತ್ ಉಪಕರಣಗಳು ಅಥವಾ ಬೆಂಕಿ ಬಳಕೆ ತಪ್ಪಿಸಿ.
ಅನೇಕ ಬಾರಿ ಅನಿಶ್ಚಿತ ಸಂಬಂಧದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ಸಂದರ್ಭದಲ್ಲಿ ಈ ಕ್ರಮಕ್ಕೆ ಮುಂದಾಗಿ
- ಸ್ಥಳಾಂತರ: ತಕ್ಷಣವೇ ಪ್ರದೇಶದಿಂದ ಹೊರಹೋಗಿ. ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳಿ.
- ಎಚ್ಚರಿಸಿ: ತಕ್ಷಣಕ್ಕೆ ಕೂಗಿ ಸ್ಥಳ ತೊರೆಯುವಂತೆ ನೆರೆಹೊರೆಯವರನ್ನು ಎಚ್ಚರಿಸಿ.
- ಸಹಾಯಕ್ಕಾಗಿ ಕರೆ ಮಾಡಿ: ಅಗ್ನಿಶಾಮಕ ಇಲಾಖೆ ಮತ್ತು ಅನಿಲ ಪೂರೈಕೆದಾರರಿಗೆ ಕರೆ ಮಾಡಿ.
- ಮತ್ತೆ ಪ್ರವೇಶಿಸಬೇಡಿ: ತುರ್ತು ಸಿಬ್ಬಂದಿ ಸ್ಥಳ ಸುರಕ್ಷಿತವೆಂದು ಘೋಷಿಸುವವರೆಗೆ ಕಟ್ಟಡವನ್ನು ಎಂದಿಗೂ ಮರುಪ್ರವೇಶಿಸಬೇಡಿ.
ಎಲ್ಪಿಜಿ ಕೊಳ್ಳುವಾಗ ಈ ವಿಷಯ ನೆನಪಿನಲ್ಲಿರಲಿ:
- ಅಧಿಕೃತ ಫ್ರಾಂಚೈಸಿಯಿಂದ ಖರೀದಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ವಿತರಣೆಯ ಸಮಯದಲ್ಲಿ ಸಿಲಿಂಡರ್ನಲ್ಲಿ ಕಂಪನಿಯ ಮುದ್ರೆ ಮತ್ತು ಸುರಕ್ಷತಾ ಕ್ಯಾಪ್ ಅನ್ನು ಪರೀಕ್ಷಿಸಲು ಮರೆಯಬೇಡಿ.
- ಸೀಲ್ ಹಾನಿಗೊಂಡಿದ್ದರೆ, ಸಿಲಿಂಡರ್ ಅನ್ನು ಸ್ವೀಕರಿಸಬೇಡಿ.
- ಸಿಲಿಂಡರ್ ಸ್ಟೇ ಪ್ಲೇಟ್ ಒಳಭಾಗದಲ್ಲಿನ ಅಂತಿಮ ದಿನಾಂಕವನ್ನು ತಪ್ಪದೇ ಪರೀಕ್ಷಿಸಿ. ಇವುಗಳನ್ನು ತ್ರೈಮಾಸಿಕ (ಎ - ಮಾರ್ಚ್, ಬಿ - ಜೂನ್, ಸಿ - ಸೆಪ್ಟೆಂಬರ್, ಡಿ - ಡಿಸೆಂಬರ್) ದ ಮೂಲಕ ಗುರುತಿಸಲಾಗುವುದು. ಉದಾಹರಣೆಗೆ ಡಿಎಫ್ಟಿ ಎ-22 ಆಗಿದ್ದರೆ, ಸಿಲಿಂಡರ್ ಅನ್ನು ಮಾರ್ಚ್ 2022 ರೊಳಗೆ ಪರೀಕ್ಷಿಸಬೇಕಾಗಿದೆ ಎಂದರ್ಥ.
ನಿಗದಿತ ದಿನಾಂಕ ಮುಗಿದ ಸಿಲಿಂಡರ್ ಸ್ವೀಕರಿಸಬೇಡಿ;ಹೊಸ ಸಿಲಿಂಡರ್ ಅನ್ನು ಬಳಕೆಗೆ ತರುವ ಸಮಯದಲ್ಲಿ ಸಿಲಿಂಡರ್ ಜಾಯಿಂಟ್ಸ್ ಮತ್ತು ಸುರಕ್ಷತಾ ಪೈಪ್ಗಳಿಗೆ ಸೋಪ್ ವಾಟರ್ ಪರೀಕ್ಷೆ ನಡೆಸುವ ಮೂಲಕ ಅನಿಲ ಸೋರಿಕೆಯನ್ನು ಪರಿಶೀಲಿಸಿ.
ಎಲ್ಪಿಜಿ ವಿಮೆ ಕ್ಲೈಮ್ ಪ್ರಕ್ರಿಯೆ;ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ರೆ, ಬಳಕೆಯಲ್ಲಿ ಬಹಳ ಜಾಗರೂಕರಾಗಿರಬೇಕು. ಗ್ಯಾಸ್ ಸಿಲಿಂಡರ್ ಅನಾಹುತಕ್ಕೆ ಗೊತ್ತಿದ್ದೋ ಅಥವಾ ತಿಳಿಯದೆಯೋ ಬಲಿಯಾದರೆ, ಅಂತಹ ಸಮಯದಲ್ಲಿ ಏನು ಮಾಡಬೇಕು? ಅಪಘಾತದಲ್ಲಿ ಗಾಯಗೊಂಡವರು ವಿಮೆ ಪರಿಹಾರವನ್ನು ಹೇಗೆ ಪಡೆಯಬಹುದು? ತೈಲ ಕಂಪನಿಯಿಂದ ನಷ್ಟಕ್ಕೆ ಪರಿಹಾರವನ್ನು ನೀವು ಪಡೆಯಬಹುದೇ? ಎಂಬ ಬಗ್ಗೆ ಅರಿವಿರಬೇಕು. ಸಿಲಿಂಡರ್ ಸಂಪರ್ಕದ ವೇಳೆ ವಿಮೆ ಪಡೆಯುತ್ತಿದ್ದೀರಾ ಎಂಬ ಬಗ್ಗೆ ತಿಳಿದಿರಬೇಕು. ಇದನ್ನು ಎಲ್ಪಿಜಿ ವಿಮಾ ಕವರ್ ಪಾಲಿಸಿ ಎನ್ನಲಾಗುತ್ತೆ.
ಯಾರು ವಿಮೆ ನೀಡುತ್ತಾರೆ?ಸಣ್ಣ ತಪ್ಪು ಕೂಡ ನಿಮಗೆ ದೊಡ್ಡ ಅನಾಹುತ ತರುತ್ತದೆ. ಇಂತಹ ಸಂದರ್ಭದಲ್ಲಿ ಅಪಘಾತವಾದರೆ, ಸರ್ಕಾರ ಅಪಾಘಾತ ವಿಮೆಯಲ್ಲಿ 40 ಲಕ್ಷ ರೂ. ನೀಡುತ್ತದೆ. ಪೆಟ್ರೋಲಿಯಂ ಕಂಪನಿಗಳು ಎಲ್ಪಿಜಿ ಸಂಪರ್ಕ ಪಡೆಯುವಾಗ ಗ್ರಾಹಕರಿಗೆ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಒದಗಿಸುತ್ತವೆ. ಎಲ್ಪಿಜಿ ಸಿಲಿಂಡರ್ನಿಂದ ಅನಿಲ ಸೋರಿಕೆ ಅಥವಾ ಸ್ಫೋಟದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಪೆಟ್ರೋಲಿಯಂ ಕಂಪನಿಗಳು ಈ ವಿಮೆಗಾಗಿ ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ.
40 ರಿಂದ 50 ಲಕ್ಷ ಅಪಘಾತ ವಿಮೆ: ಎಲ್ಪಿಸಿ ವಿಮೆಗಳು 50 ಲಕ್ಷದವರೆಗೆ ಅಪಘಾತ ವಿಮೆಯನ್ನು ಭರಿಸುತ್ತದೆ. ಯಾವುದೇ ಗ್ಯಾಸ್ ಸ್ಫೋಟದಿಂದ ಜೀವ ಅಥವಾ ಆಸ್ತಿ ನಷ್ಟವಾದರೆ, ಇದು ಸಿಗಲಿದೆ. ಇದರ ಜೊತೆಗೆ ಗ್ಯಾಸ್ ಸಂಪರ್ಕದಿಂದ 40 ಲಕ್ಷದವರೆಗೆ ಕ್ಲೈಮ್ ಮಾಡಬಹುದಾಗಿದೆ. ಜೀವ ಹಾನಿ ಸಂದರ್ಭದಲ್ಲಿ 50 ಲಕ್ಷ ಕ್ಲೈಮ್ ಮಾಡಬಹುದು. ಅಪಘಾತದಲ್ಲಿ ಗ್ರಾಹಕರ ಆಸ್ತಿ ಅಥವಾ ಮನೆ ಹಾನಿಯಾದರೆ, 2 ಲಕ್ಷ ಸಿಗಲಿದೆ. ಇದು ಸಿಲಿಂಡರ್ ಆ ವ್ಯಕ್ತಿಯ ಹೆಸರಿಗೆ ನೋಂದಣಿಯಾಗಿದ್ದಾಗ ಮಾತ್ರ. ಇದರಲ್ಲಿ ನಾಮಿನಿ ಮಾಡುವ ಯಾವುದೇ ಸೌಲಭ್ಯವಿಲ್ಲ.