ಕರ್ನಾಟಕ

karnataka

ETV Bharat / lifestyle

ಈ ವರ್ಷ ಭಾರತೀಯರು ಅಂತರ್ಜಾಲದಲ್ಲಿ ಹುಡುಕಿದ ಟಾಪ್‌​ 5 ಸ್ಥಳಗಳು ಇವು - YEAR ENDER 2024

2024ರಲ್ಲಿ ಸರ್ಚ್‌ ಎಂಜಿನ್‌ ಗೂಗಲ್‌ನಲ್ಲಿ ಭಾರತೀಯರು ಹುಡುಕಿದ ಪ್ರಮುಖ ಐದು ಪ್ರವಾಸಿ ಸ್ಥಳಗಳು ಯಾವುವು ನೋಡೋಣ ಬನ್ನಿ.

YEAR ENDER 2024 TRAVEL TIPS  TOP 5 MOST POPULAR TOURIST PLACE  TOP TRAVEL TRENDS OF 2024  2024ರ ಹಿನ್ನೋಟ
ಸಾಂದರ್ಭಿಕ ಚಿತ್ರ (FREEPIK)

By ETV Bharat Lifestyle Team

Published : Dec 25, 2024, 3:59 PM IST

Updated : Dec 25, 2024, 4:18 PM IST

Year Ender 2024:ಈ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಜನರು ನವೋತ್ಸಾಹದಿಂದ ಹೊಸ ವರ್ಷವನ್ನು ಸ್ವಾಗತಿಸುವ ಸಿದ್ಧತೆಯಲ್ಲಿದ್ದಾರೆ. 2014ರ ವರ್ಷವನ್ನೊಮ್ಮೆ ಮೆಲುಕು ಹಾಕಲು ಇದೊಂದು ಅವಕಾಶವೂ ಹೌದು. ಈ ನಿಟ್ಟಿನಲ್ಲಿ ಗೂಗಲ್ ಇತ್ತೀಚೆಗೆ ವಿವಿಧ ವಿಭಾಗಗಳಲ್ಲಿ (2024 ಗ್ಲೋಬಲ್ ಟ್ರಾವೆಲ್ ಟ್ರೆಂಡ್ಸ್​) ವಿಶ್ವದಾದ್ಯಂತ ಹುಡುಕಲಾದ ಟಾಪ್ 10 ಸ್ಥಳಗಳ ಪಟ್ಟಿ ಮಾಡಿದೆ. ಇದರ ಜೊತೆಗೆ, ಭಾರತೀಯರು ಹುಡುಕಿದ ವಿವಿಧ ಸ್ಥಳಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಅಜರ್‌ಬೈಜಾನ್:ಖಂಡಾಂತರ ರಾಷ್ಟ್ರ ಅಜರ್‌ಬೈಜಾನ್ 'ಬೆಂಕಿಯ ಭೂಮಿ' ಎಂದು ಕರೆಯಲ್ಪಡುತ್ತದೆ. ಇದು ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣ. ಇತ್ತೀಚಿನ ದಿನಗಳಲ್ಲಂತೂ ಆಫ್‌ಬೀಟ್ ತಾಣಗಳ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಈ ವರ್ಷ ಅಜರ್‌ಬೈಜಾನ್ ಜನರ ಮೊದಲ ಆಯ್ಕೆಯಾಗಲು ಇದುವೇ ಕಾರಣ.

ಸಾಂದರ್ಭಿಕ ಚಿತ್ರ (FREEPIK)

ಗೂಗಲ್​ ಹುಡುಕಾಟ ಪಟ್ಟಿಯ ಪ್ರಕಾರ, ಅಜರ್‌ಬೈಜಾನ್ ಭಾರತೀಯರು ಅತೀ ಹೆಚ್ಚು ಹುಡುಕಲ್ಪಟ್ಟ ದೇಶ. ಅದರ ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದಾಗಿ ಜನರು ಆ ದೇಶದತ್ತ ಆಕರ್ಷಿತರಾಗುತ್ತಾರೆ. ಇಲ್ಲಿ ಭೇಟಿ ನೀಡಲು ಯೋಗ್ಯವಾದ ಅನೇಕ ಸ್ಥಳಗಳಿವೆ. ಕ್ಯಾಸ್ಪಿಯನ್ ಸಮುದ್ರದ ಕರಾವಳಿಯಿಂದ ಯುರೋಪ್‌ನ ಅತೀ ಎತ್ತರದ ಕಾಕಸಸ್ ಸೇರಿದಂತೆ ವಿವಿಧ ಪರ್ವತಗಳು, ಹಲವು ಪ್ರಕೃತಿಯ ಸುಂದರ ತಾಣಗಳು ವಿಸ್ಮಯಗೊಳಿಸುವಂತಿವೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣ, ಹಳೆಯ ನಗರವಾದ ಬಾಕು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು.

ಬಾಲಿ (FREEPIK)

ಬಾಲಿ(ಇಂಡೋನೇಷ್ಯಾ):ವಿದೇಶಕ್ಕೆ ಹೋಗಬಯಸುವ ಭಾರತೀಯರ ಮೊದಲ ಆಯ್ಕೆ ಯಾವಾಗಲೂ ಬಾಲಿ ಆಗಿದೆ. ಇಲ್ಲಿರುವ ಆಕರ್ಷಕ ಕಡಲತೀರಗಳು ಮತ್ತು ಅತ್ಯಾಕರ್ಷಕ ರಾತ್ರಿಯ ಜೀವನವು ಜನರನ್ನು ಆಕರ್ಷಿಸುತ್ತದೆ. ಅದಕ್ಕಾಗಿಯೇ ವಿದೇಶ ಪ್ರವಾಸ ಮಾಡಲು ಬಯಸುವ ಭಾರತೀಯರಿಗೆ ಬಾಲಿ ನೆಚ್ಚಿನ ತಾಣವಾಗಿದೆ. ಬಹುಶಃ ಅದಕ್ಕಾಗಿಯೇ ಇದು 2024ರಲ್ಲಿ ಹೆಚ್ಚು ಹುಡುಕಲ್ಪಟ್ಟ ವಿದೇಶಿ ಸ್ಥಳಗಳಲ್ಲಿ ಒಂದಾಗಿದೆ.

ಸಾಂದರ್ಭಿಕ ಚಿತ್ರ (FREEPIK)

ಕಝಾಕಿಸ್ತಾನ್: ಆಫ್‌ಬೀಟ್ ವಿದೇಶಿ ತಾಣಗಳ ಪಟ್ಟಿಯಲ್ಲಿ ಕಝಾಕಿಸ್ತಾನ್ ಕೂಡ ಜನಪ್ರಿಯ ಆಯ್ಕೆ. ಈ ವರ್ಷ ಇದನ್ನು ಸಾಕಷ್ಟು ಭಾರತೀಯರು ಅನ್ವೇಷಿಸಿದ್ದಾರೆ. ಅಲ್ಮಾಟಿಯಂತಹ ಸಮೃದ್ಧ ನಗರಗಳು ಮತ್ತು ಚಾರಿನ್ ಕ್ಯಾನ್ಯನ್ ಮತ್ತು ಕೊಲ್ಸಾಯ್ ಸರೋವರದಂತಹ ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯ ಜನರನ್ನು ಆಕರ್ಷಿಸುತ್ತವೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರವಾಸಿಗರ ಆಸಕ್ತಿ ಹೆಚ್ಚಿದೆ. ವಿಶೇಷವಾಗಿ ಭಾರತೀಯರು ಕೂಡ ಇದನ್ನು ಇಷ್ಟಪಡುತ್ತಾರೆ.

ಮನಾಲಿ (FREEPIK)

ಮನಾಲಿ(ಹಿಮಾಚಲ ಪ್ರದೇಶ, ಭಾರತ): ಭಾರತದ ಹಿಮಾಚಲ ಪ್ರದೇಶದ ಮನಾಲಿ ನಗರವು ಪ್ರತೀವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಾಲ್ ರೋಡ್‌ನಿಂದ ರೋಹ್ಟಾಂಗ್ ಕಣಿವೆಯವರೆಗೆ ಅನೇಕ ಜನಪ್ರಿಯ ತಾಣಗಳಿವೆ. 2024ರಲ್ಲಿ ಜನರು ಈ ನಗರದ ಬಗ್ಗೆ ಗೂಗಲ್​ನಲ್ಲಿ ತುಂಬಾ ಹುಡುಕಿದ್ದಾರೆ.

ಜೈಪುರ (FREEPIK)

ಜೈಪುರ(ರಾಜಸ್ಥಾನ, ಭಾರತ):2024ರಲ್ಲಿ ಪ್ರವಾಸಿಗರಿಂದ Googleನಲ್ಲಿ ಹೆಚ್ಚು ಹುಡುಕಲ್ಪಟ್ಟ ಸ್ಥಳಗಳಲ್ಲಿ ಭಾರತದ ಜೈಪುರ ನಗರವೂ ಒಂದು. ಜೈಪುರವು ವಿದೇಶಿ ಪ್ರವಾಸಿಗರಿಗೆ ಬಹಳ ಆಕರ್ಷಕವಾಗಿದೆ. ರಾಜಸ್ಥಾನದ ರಾಜಧಾನಿಯಾದ ಜೈಪುರ ನಗರವನ್ನು 'ಪಿಂಕ್ ಸಿಟಿ' ಎಂದೂ ಕರೆಯುತ್ತಾರೆ. ಜೈಪುರವು ಅಮೇರ್ ಕೋಟೆ, ಹವಾ ಮಹಲ್, ನಹರ್ಗಢ್ ಕೋಟೆ ಹಾಗೂ ಬಿರ್ಲಾ ದೇವಾಲಯ ಸೇರಿದಂತೆ ಅನೇಕ ಐತಿಹಾಸಿಕ ಅರಮನೆಗಳು ಹಾಗೂ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಈ ಸ್ಥಳಗಳು ರಾಜಮನೆತನಗಳ ಬಗ್ಗೆ ತಿಳಿಸುತ್ತವೆ.

ಇದನ್ನೂ ಓದಿ:2024ರ ಹಿನ್ನೋಟ: ಈ ವರ್ಷ ಭರ್ಜರಿ ಸದ್ದು ಮಾಡಿದ ವಿವಿಧ ಭಾಷೆಗಳ ಹಾಡುಗಳ ಬಗ್ಗೆ ನಿಮಗೆ ಗೊತ್ತೇ?

Last Updated : Dec 25, 2024, 4:18 PM IST

ABOUT THE AUTHOR

...view details