ವೈವಿಧ್ಯಮಯ ಮತ್ತು ಸುವಾಸನೆ ಭರಿತ ಖಾದ್ಯವಾಗಿರುವ ಬಿರಿಯಾನಿ ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ. ಇದರ ರುಚಿ ಹಾಗೂ ಸುವಾಸನೆ ಹಾಗೂ ಅದರ ಮಹತ್ವವನ್ನು ತಿಳಿಸುವ ಉದ್ದೇಶದೊಂದಿಗೆ ವಿಶ್ವ ಬಿರಿಯಾನಿ ದಿನವನ್ನು ಪ್ರಪಂಚದಾದ್ಯಂತ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ಚಿಕನ್, ಮಟನ್, ತರಕಾರಿ ಮತ್ತು ಮಶ್ರೂಮ್ ಬಿರಿಯಾನಿಗಳಂತಹ ವಿವಿಧ ರೀತಿಯ ಬಿರಿಯಾನಿಗಳ ರುಚಿಯನ್ನು ವಿಶ್ವಾದ್ಯಂತ ಆನಂದಿಸಲಾಗುತ್ತದೆ.
ಪರ್ಷಿಯಾದಲ್ಲಿ ಅಕ್ಕಿ ಮತ್ತು ಮಾಂಸದ ಭಕ್ಷ್ಯವಾಗಿ ಹುಟ್ಟಿಕೊಂಡ ಒಂದು ಖಾಧ್ಯವೇ ಈ ಬಿರಿಯಾನಿ ಆಗಿದೆ. ಪರ್ಷಿಯಾದ ಈ ಖಾದ್ಯ ವಲಸಿಗರಿಂದಾಗಿ ಭಾರತಕ್ಕೂ ಪರಿಚಿತವಾಯ್ತು. ಆದರೀಗ ಈ ಆಹಾರ ಜನಮನದ ವಿಶೇಷ ಖಾದ್ಯವಾಗಿ ಖ್ಯಾತಿ ಗಳಿಸಿದೆ.
ಆಹಾರಪ್ರೇಮಿಗಳು ದೇಶದ ಪ್ರತಿಯೊಂದು ಪ್ರದೇಶದಲ್ಲಿ ಬಿರಿಯಾನಿ ರುಚಿ ಮತ್ತು ವಿಶೇಷ ಆವೃತ್ತಿಯ ವಿಶಿಷ್ಟ ಮತ್ತು ವಿಭಿನ್ನ ಅನುಭವಗಳನ್ನು ಪಡೆಯುತ್ತಾರೆ. ಪ್ರತಿಯೊಂದು ಪ್ರದೇಶವು ತಮ್ಮ ಪ್ರದೇಶಗಳಿಗೆ ಅನುಗುಣವಾಗಿ ರುಚಿಕರವಾದ ಪಾಕಪದ್ಧತಿಯನ್ನು ಅನುಸರಿಸಿ ಬಿರಿಯಾನಿ ತಯಾರಿಸಲಾಗುತ್ತದೆ. ತಮ್ಮ ಪ್ರದೇಶದಲ್ಲಿ ಲಭ್ಯವಿರುವ ಮಸಾಲೆಗಳು ಅಥವಾ ಪದಾರ್ಥಗಳನ್ನು ಸೇರಿಸುವ ಮೂಲಕ ರುಚಿಕರವಾದ ಬಿರಿಯಾನಿ ತಯಾರಿಸುವ ರೂಢಿ ಅಳವಡಿಸಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ, ಆಹಾರಪ್ರೇಮಿಗಳು ದೇಶದ ವಿವಿಧ ಭಾಗಗಳಲ್ಲಿ ಬಿರಿಯಾನಿಗಳ ವಿವಿಧ ಆವೃತ್ತಿಗಳಲ್ಲಿ ಪಡೆಯುತ್ತಾರೆ. ಆ ಪ್ರದೇಶಕ್ಕೆ ನಿರ್ದಿಷ್ಟವಾಗಿ ಮಸಾಲೆಗಳು ಅಥವಾ ಪದಾರ್ಥಗಳನ್ನು ಸೇರಿಸಿ ಬೇಯಿಸಲಾಗುತ್ತದೆ. ಬಿರಿಯಾನಿ ಒಂದು ರುಚಿಕರವಾದ ಖಾದ್ಯ, ಪ್ರಪಂಚದಾದ್ಯಂತದ ಆಹಾರಪ್ರೇಮಿಗಳ ಹೃದಯವನ್ನು ಕದ್ದಿರುವ ಆಹಾರವಾಗಿದೆ. ಏಕೆಂದರೆ ಜನರು ಪ್ರಪಂಚದಾದ್ಯಂತ ಬಿರಿಯಾನಿಯನ್ನು ವ್ಯಾಪಕವಾಗಿ ಇಷ್ಟ ಪಡುವ ಒಂದು ವರ್ಗವೇ ಇದೆ.
ಇದನ್ನು ಓದಿ:ದಸರಾ ವಿಶೇಷ 'ಲಡಗಿ ಪಾಕ' ಕೇಳಿದ್ದೀರಾ? ಇದನ್ನು ಮಾಡುವ ಸರಳ ವಿಧಾನ ಇಲ್ಲಿದೆ
ಹೈದರಾಬಾದಿ ಬಿರಿಯಾನಿ: ಇದನ್ನು ಬಾಸ್ಮತಿ ಅಕ್ಕಿ, ಮಾಂಸ (ಕೋಳಿ ಅಥವಾ ಮೇಕೆ), ಮತ್ತು ವಿಶೇಷ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಈ ಬಿರಿಯಾನಿಯ ರುಚಿ ಮತ್ತು ಸುವಾಸನೆಯು ಭಾರತ ಮತ್ತು ಇತರ ದೇಶಗಳಲ್ಲಿನ ಆಹಾರಪ್ರಿಯರಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಹೈದರಾಬಾದ್‌ಗೆ ಭೇಟಿ ನೀಡುವ ಪ್ರವಾಸಿಗರು ಹೈದರಾಬಾದಿ ಬಿರಿಯಾನಿ ಸವಿಯದೇ ಒಂದು ಹೆಜ್ಜೆಯನ್ನು ಮುಂದಿಡುವುದಿಲ್ಲ. ಹೀಗಾಗಿ ಹೈದರಾಬಾದ್ ಬಿರಿಯಾನಿ ವಿಶ್ವ ಪ್ರಸಿದ್ಧಿಯನ್ನೂ ಪಡೆದುಕೊಂಡಿದೆ.
ಸಿಂಧಿ ಬಿರಿಯಾನಿ: ಇದು ಪರಿಮಳಯುಕ್ತ ಮತ್ತು ಸುವಾಸನೆಯುಳ್ಳದ್ದಾಗಿದೆ. ಮಾಂಸವನ್ನು ಸೇರಿಸಿದ ಅಕ್ಕಿ ಖಾದ್ಯವು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದೆ. ಇದನ್ನು ಅಕ್ಕಿ, ಚಿಕನ್, ಮಟನ್, ಟೊಮೆಟೊ, ಆಲೂಗಡ್ಡೆಗಳೊಂದಿಗೆ ಬೇಯಿಸಲಾಗುತ್ತದೆ ಮತ್ತು ಮಸಾಲೆಯುಕ್ತ ಸುವಾಸನೆಗಾಗಿ ಹಸಿರು ಮೆಣಸಿನಕಾಯಿಯನ್ನು ಬಳಸಲಾಗುತ್ತದೆ.
ದೆಹಲಿ ಬಿರಿಯಾನಿ:ಮೊಘಲ್ ಯುಗದಿಂದ ಆಧುನಿಕ ಕಾಲದವರೆಗೆ ದೆಹಲಿಯಲ್ಲಿ ಬಿರಿಯಾನಿ ತಿನ್ನಲು ಇಷ್ಟಪಡುವ ಆಹಾರಪ್ರಿಯರ ಬಳಗವೇ ಇದೆ. ಆಹಾರ ಪ್ರಿಯರಲ್ಲಿ ಇದು ವಿಶೇಷ ಸ್ಥಾನವನ್ನೂ ಪಡೆದುಕೊಂಡಿದೆ. ಹಳೆಯ ದೆಹಲಿ ಮತ್ತು ನಿಜಾಮುದ್ದೀನ್ ದೆಹಲಿಯ ಬಿರಿಯಾನಿಗೆ ಫೇಮಸ್ ಆದ ಸ್ಥಳಗಳಾಗಿವೆ.