ಕರ್ನಾಟಕ

karnataka

ETV Bharat / lifestyle

ಸಂಕ್ರಾಂತಿಗೆ ಭರ್ಜರಿ ರುಚಿಯ ಬಿಸಿ ಬಿಸಿ ಕಜ್ಜಾಯ: ಸಿದ್ಧಪಡಿಸೋದು ಅಷ್ಟೇ ಸುಲಭ - SANKRANTI SPECIAL KAJJAYA RECIPE

Sankranti Special Kajjaya Recipe: ಸಂಕ್ರಾಂತಿ ಹಬ್ಬದಲ್ಲಿ ಸಕ್ಕರೆ ಇಲ್ಲದೆ ಭರ್ಜರಿ ರುಚಿಯ ಬಿಸಿ ಬಿಸಿ ಕಜ್ಜಾಯ ಮಾಡುವುದು ಹೇಗೆ? ರುಚಿ ಕೂಡ ಅದ್ಭುತವಾಗಿರುತ್ತದೆ. ಹಾಗಾದ್ರೆ, ಕಜ್ಜಾಯ ರೆಡಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

SANKRANTI KAJJAYA MAKING  HOW TO MAKE KAJJAYA  SANKRANTI SPECIAL KAJJAYA  KAJJAYA RECIPE
ಬಿಸಿ ಬಿಸಿ ಕಜ್ಜಾಯ (ETV Bharat)

By ETV Bharat Lifestyle Team

Published : Jan 11, 2025, 4:32 PM IST

How to Make Kajjaya Recipe:ದೇಶದಾದ್ಯಂತ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಜೋರಾಗಿಯೇ ಆಚರಣೆ ಮಾಡಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಈ ಸಲ ಹಬ್ಬಕ್ಕಾಗಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಬೇಕು ಅಂದುಕೊಂಡಿದ್ದರೆ, ನಾವು ನಿಮಗಾಗಿ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ... ಭರ್ಜರಿ ರುಚಿಯ ಬಿಸಿ ಬಿಸಿ ಕಜ್ಜಾಯ. ಈ ಕಜ್ಜಾಯಗಳನ್ನು ತಯಾರಿಸುವುದು ತುಂಬಾ ಸುಲಭ. ಈ ಸಿಹಿ ತಿನಿಸು ಮಾಡಲು ಬೇಕಾಗಿರುವ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನ ಹೇಗೆ ಎಂಬುದನ್ನು ಕಲಿಯೋಣ.

ಕಜ್ಜಾಯಕ್ಕೆ ಅಗತ್ಯವಿರುವ ಪದಾರ್ಥಗಳು:

  • ಅಕ್ಕಿ ಹಿಟ್ಟು - 1 ಕಪ್
  • ಗೋಧಿ ಹಿಟ್ಟು - ಅರ್ಧ ಕಪ್
  • ಬೆಲ್ಲ - 1 ಕಪ್
  • ನೀರು - ಒಂದೂವರೆ ಕಪ್
  • ತುಪ್ಪ - ಬೇಕಾಗುವಷ್ಟು
  • ಏಲಕ್ಕಿ ಪುಡಿ - 1 ಟೀಸ್ಪೂನ್
  • ಎಳ್ಳು - 1 ಟೀಸ್ಪೂನ್
  • ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾದಷ್ಟು

ಕಜ್ಜಾಯ ತಯಾರಿಸುವ ವಿಧಾನ ಹೇಗೆ?:

  • ಮೊದಲು ಒಂದು ತಟ್ಟೆಯಲ್ಲಿ ಅಕ್ಕಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
  • ಒಲೆ ಆನ್​ ಮಾಡಿ, ಅದರ ಮೇಲೆ ಒಂದು ಪಾತ್ರೆ ಇಡಿ. ಅದರೊಳಗೆ ನೀರು ಸುರಿದು ಬೆಲ್ಲ ಹಾಕಿ ಕರಗಿಸಿ. ಬೆಲ್ಲ ಸಂಪೂರ್ಣವಾಗಿ ಕರಗಿದ ನಂತರ, ಅದನ್ನು ಸೋಸಿಕೊಳ್ಳಬೇಕು.
  • ಮತ್ತೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸೋಸಿದ ಬೆಲ್ಲದ ನೀರಿಗೆ 1 ಟೀಸ್ಪೂನ್ ತುಪ್ಪ, ಏಲಕ್ಕಿ ಪುಡಿ ಹಾಗೂ ಎಳ್ಳು ಸೇರಿಸಿ ಕುದಿಸಬೇಕು.
  • ನೀರು ಕುದಿಯುತ್ತಿರುವಾಗ, ಮೊದಲೇ ಮಿಕ್ಸ್​ ಮಾಡಿದ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನ ಮಿಶ್ರಣವನ್ನು ಕ್ರಮೇಣವಾಗಿ ಸೇರಿಸಿಕೊಳ್ಳಬೇಕಾಗುತ್ತದೆ. ಯಾವುದೇ ಉಂಡೆಗಳಾಗದಂತೆ ಬೆರೆಸಿಕೊಳ್ಳಿ.
  • ಬಳಿಕ ಮಧ್ಯದಲ್ಲಿ ತುಪ್ಪ ಸೇರಿಸಿಕೊಳ್ಳಿ. ಹಿಟ್ಟಿನ ಮಿಶ್ರಣವು ಪಾತ್ರೆಗೆ ಅಂಟಿಕೊಳ್ಳದವರೆಗೆ ಬೇಯಿಸಿ.
  • ಹಿಟ್ಟು ಸಿದ್ಧವಾದ ಬಳಿಕ ಒಲೆ ಆಫ್ ಮಾಡಿ ಹಾಗೂ ಅದು ಗಟ್ಟಿಯಾಗದಂತೆ ಮುಚ್ಚಳದಿಂದ ಮುಚ್ಚಿ.
  • ಈಗ ಒಲೆ ಆನ್ ಮಾಡಿ, ಅದರ ಮೇಲೆ ಕಡಾಯಿ ಇಡಿ, ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆಯನ್ನು ಸುರಿದು ಬಿಸಿ ಮಾಡಿ.
  • ಎಣ್ಣೆ ಬಿಸಿಯಾಗುವ ಮೊದಲು, ಬೆಚ್ಚಗಿನ ಹಿಟ್ಟಿನ ಮಿಶ್ರಣವನ್ನು ಒಂದು ತಟ್ಟೆಗೆ ತೆಗೆದುಕೊಂಡು ಚೆನ್ನಾಗಿ ಮಿಕ್ಸ್​ ಮಾಡಿ. ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಚಪಾತಿ ಮಣೆಯ ತುಪ್ಪ ಸವರಿ ಅವುಗಳನ್ನು ಚಿಕ್ಕ ಪೂರಿಗಳಂತೆ ರೆಡಿ ಮಾಡಬೇಕಾಗುತ್ತದೆ.
  • ಈ ಕಜ್ಜಾಯಗಳನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಒಂದು ನಿಮಿಷ ಅಲ್ಲಿಯೇ ಬಿಡಿ, ಬಳಿಕ ಅದನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಎಣ್ಣೆಯಿಂದ ಸೋಸಿ ತಟ್ಟೆಯಲ್ಲಿ ತೆಗೆಯಿರಿ.
  • ಈ ರೀತಿ ಎಲ್ಲಾ ಕಜ್ಜಾಯಗಳನ್ನು (Sankranti Special Kajjaya Recipe) ರೆಡಿ ಮಾಡಬೇಕಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಕಜ್ಜಾಯಗಳನ್ನು ಸಿದ್ಧಪಡಿಸಬಹುದು
  • ಈ ರೆಸಿಪಿ ನಿಮಗೆ ಇಷ್ಟವಾದರೆ, ಸಂಕ್ರಾಂತಿ ಹಬ್ಬಕ್ಕೆ ಟ್ರೈ ಮಾಡಿ.

ಇದನ್ನೂ ಓದಿ:ಸಂಕ್ರಾಂತಿ ವಿಶೇಷ: 'ಬೆಲ್ಲದ ಉದ್ದಿನಬೇಳೆ ಲಡ್ಡು' ಸಿದ್ಧಪಡಿಸೋದು ತುಂಬಾ ಸರಳ!

ಸಂಕ್ರಾಂತಿ ವಿಶೇಷ: ರವೆ ಲಡ್ಡು ಹೀಗೆ ಮಾಡಿದರೆ, ತಿಂಗಳವರೆಗೆ ಸಾಫ್ಟ್​ & ತಾಜಾ ಆಗಿರುತ್ತೆ!

ABOUT THE AUTHOR

...view details