ನವರಾತ್ರಿಯ ಒಂಬತ್ತು ದಿನಗಳು ಮುಗಿದಿವೆ. ಇಂದು ದಶಮಿ, ದುಷ್ಟರ ಮೇಲೆ ಶಿಷ್ಟರ ವಿಜಯದ ದಿವಸವಾಗಿ ಇಂದು ವಿಜಯ ದಶಮಿಯ ಆಚರಣೆ ಮಾಡಲಾಗುತ್ತಿದೆ. ಭಾರತದ ಬಹುಪಾಲು ಜನರಿಗೆ ಇಂದು ವಿಶೇಷ ದಿನ. ಇನ್ನು ನವರಾತ್ರಿ ಉತ್ಸವ ಗುಜರಾತಿನ ಜಾನಪದ ನೃತ್ಯ ಮತ್ತು ಉತ್ಸವವು ರಾಜ್ಯದ ಜನರೊಂದಿಗೆ ವಿಶೇಷ ಸಂಪರ್ಕ ಹೊಂದಿದೆ.
ಗರ್ಬಾ ನೃತ್ಯಕ್ಕಾಗಿ ಇಲ್ಲಿನ ಜನರು ವಿಶೇಷವಾದ ಬಟ್ಟೆಗಳನ್ನು ಧರಿಸಿ, ನಾನಾ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮ ಪಡುತ್ತಾರೆ. ನೀವು ಸಹ ನಮ್ಮಂತೆ ಹಬ್ಬದ ಕೊನೆಯ ಎರಡು ದಿನಗಳಲ್ಲಿ ಪಾಲ್ಗೊಳ್ಳಲು ಯೋಜಿಸುತ್ತಿದ್ದೀರಾ. ನಿಮ್ಮ ಸಾಮಾನ್ಯ ಸಾಂಪ್ರದಾಯಿಕ ಉಡುಗೆಯನ್ನು ಹೇಗೆ ವಿನ್ಯಾಸಗೊಳಿಸಬೇಕೆಂದು ಗೊತ್ತಾಗುತ್ತಿಲ್ಲವೇ. ನಾವು ನಿಮಗೆ ಇಂದು ಬಟ್ಟೆ ಅಥವಾ ಪರಿಕರಗಳ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಕ್ಷಣ ಮಾತ್ರದಲ್ಲಿ ತಯಾರಾಗಲು ತ್ವರಿತ ಮಾರ್ಗದರ್ಶಿ ನೀಡುತ್ತೇವೆ.
ಆಭರಣದೊಂದಿಗೆ ಮಿಂಚಿಂಗ್ Layer with jewelry:ಕೆಲವು ಆಭರಣಗಳನ್ನು ತೊಡುವುದರ ಮೂಲಕ ನಿಯಮಿತ ಬಟ್ಟೆಗಳೊಂದಿಗೆ ನಿಮ್ಮ ಸ್ಟೈಲ್ ಅನ್ನು ನಿಜವಾಗಿಯೂ ಹೆಚ್ಚಿಸಬಹುದು. ನಿಮ್ಮ ಗಾರ್ಬಾ ಉಡುಪನ್ನು ದಪ್ಪವಾದ ಬೆಳ್ಳಿಯ ಆಕ್ಸಿಡೀಕೃತ ಆಭರಣಗಳು ಅಥವಾ ಸಾಂಪ್ರದಾಯಿಕ ಚಿನ್ನದ ಬಿಡಿಭಾಗಗಳೊಂದಿಗೆ ರಾಜ- ರಾಣಿಯಂತೆ ಕಂಗೊಳಿಸುವಂತೆ ಮಾಡಬಹುದು.
ವ್ಯತಿರಿಕ್ತ ದುಪಟ್ಟಾ ಆರಿಸಿಕೊಳ್ಳಿ Opt for contrasting dupattas: ಹಸಿರು, ನೀಲಿ ಅಥವಾ ಹಳದಿಯಂತಹ ಬಣ್ಣಗಳಲ್ಲಿ ವ್ಯತಿರಿಕ್ತವಾದ ದುಪಟ್ಟಾ ನಿಮ್ಮ ಲೆಹೆಂಗಾದ ಅಂದವನ್ನು ಮತ್ತಷ್ಟು ಎದ್ದು ಕಾಣುವಂತೆ ಮಾಡುತ್ತದೆ. ಆ ಹೆಚ್ಚುವರಿ ಹಬ್ಬದ ಹೊಳಪಿಗಾಗಿ ನೀವು ಕನ್ನಡಿಗಳಿಂದ ತಯಾರಿಸಿದ ದುಪಟ್ಟಾವನ್ನು ಕೂಡ ಸೇರಿಸಬಹುದು.