How to Make Jowar Dosa Easily:ತೂಕ ಮತ್ತು ಶುಗರ್ ನಿಯಂತ್ರಿಸುವ ಜೋಳದಿಂದ ಸಿದ್ಧಪಡಿಸಿದ ಆಹಾರವು ಉತ್ತಮ ಆಯ್ಕೆಯಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅನೇಕರಿಗೆ ಜೋಳದ ಆಹಾರಗಳನ್ನು ತಿನ್ನಲು ಕಷ್ಟವಾಗುತ್ತದೆ. ಆದರೆ, ನಮ್ಮಲ್ಲಿ ಜೋಳ ರೊಟ್ಟಿ ಸಾಮಾನ್ಯ ಹೆಚ್ಚು ಸೇವಿಸುತ್ತಾರೆ. ಒಂದಿಷ್ಟು ಟಿಪ್ಸ್ ಫಾಲೋ ಮಾಡಿದರೆ.. ಜೋಳದಿಂದ ಸುಲಭವಾದ ರೆಸಿಪಿಗಳನ್ನು ಮಾಡಬಹುದು. ಅದರಲ್ಲೊಂದು ರುಚಿಕರ ಜೋಳ ದೋಸೆ. ಜೋಳದ ದೋಸೆ ಸಿದ್ಧಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಜೋಳದ ರೊಟ್ಟಿಗಿಂತ ಬೇಗ ಜೋಳದ ದೋಸೆ ತಯಾರಿಸಬಹುದು! ರೊಟ್ಟಿ ಮಾಡಲು ಬರದೇ ಇರುವವರು ಈ ದೋಸೆಯನ್ನು ತುಂಬಾ ಸುಲಭವಾಗಿ ಮಾಡಬಹುದು.
ಬೆಳಗಿನ ತಿಂಡಿಯಲ್ಲಿ ಮಕ್ಕಳಿಗೆ ಇವುಗಳನ್ನು ಮಾಡಿಕೊಟ್ಟರೆ ಅವರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ.. ಈ ರುಚಿಕರವಾದ ಮತ್ತು ಆರೋಗ್ಯಕರವಾದ ಜೋಳದ ದೋಸೆಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುವು? ತಯಾರಿ ಹೇಗೆ? ಎಂಬುದನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು:
- ಜೋಳದ ಹಿಟ್ಟು - 1 ಕಪ್
- ಅಕ್ಕಿ ಹಿಟ್ಟು - ಕಾಲು ಕಪ್
- ರವೆ - ಕಾಲು ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ - ಅರ್ಧ ಟೀಚಮಚ
- ಶುಂಠಿ - ಸ್ವಲ್ಪ
- ಹಸಿಮೆಣಸಿನಕಾಯಿ- 3
- ಕೊತ್ತಂಬರಿ ಸೊಪ್ಪು, ಕ್ಯಾರೆಟ್ ತುರಿ - ಸ್ವಲ್ಪ
- ನೀರು - ಅಗತ್ಯವಿರುವಷ್ಟು
- ಎಣ್ಣೆ - ಸ್ವಲ್ಪ
ತಯಾರಿಸುವ ವಿಧಾನ:
- ಇದಕ್ಕೆ ಪಾಕದಲ್ಲಿ ಬೇಕಾಗುವ ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಡಬೇಕು. ಹಾಗೆಯೇ ಒಂದು ಚಿಕ್ಕ ಶುಂಠಿ ತೆಗೆದುಕೊಂಡು ನುಣ್ಣಗೆ ತುರಿದು ಪಕ್ಕಕ್ಕೆ ಇಡಿ.
- ಈಗ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಜೊಳದ ಹಿಟ್ಟು, ಅಕ್ಕಿ ಹಿಟ್ಟು ಮತ್ತು ರವೆ ಸೇರಿಸಿ ಮಿಶ್ರಣ ಮಾಡಿ.
- ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ತುರಿದ ಶುಂಠಿ, ಉಪ್ಪು ಸೇರಿಸಿ ಮತ್ತು ಹಿಟ್ಟಿಗೆ ಸಾಕಷ್ಟು ನೀರು ಸೇರಿಸಿ.
- ಆದಾಗ್ಯೂ, ಈ ಹಿಟ್ಟನ್ನು ಸಾಮಾನ್ಯ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರುವ ರೀತಿಯಲ್ಲಿ ತಯಾರಿಸಬೇಕು ಮತ್ತು ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಇಡಬೇಕು.
- ಅದರ ನಂತರ.. ಒಲೆಯ ಮೇಲೆ ದೋಸೆ ಪ್ಯಾನ್ ಇಟ್ಟು ಬಿಸಿ ಮಾಡಿ. ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಚ್ಚಿ.. ಒಂದು ಲೋಟದೊಂದಿಗೆ ಸ್ವಲ್ಪ ಹಿಟ್ಟು ತೆಗೆದುಕೊಂಡು ಸಾಧ್ಯವಾದಷ್ಟು ತೆಳುವಾಗಿ ರೌಂಡ್ ಶೇಫ್ನಲ್ಲಿ ಹರಡಿ.
- ನಂತರ ಅದರ ಮೇಲೆ ಸ್ವಲ್ಪ ಕ್ಯಾರೆಟ್ ತುರಿದು ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ, ಅಂಚುಗಳ ಉದ್ದಕ್ಕೂ ಸ್ವಲ್ಪ ಎಣ್ಣೆಯನ್ನು ಹಾಕಿ, ಎರಡೂ ಬದಿಗಳನ್ನು ಫ್ರೈ ಮಾಡಿ ಮತ್ತು ಬಡಿಸಿ. ಆಗ. ಸೂಪರ್ ಟೇಸ್ಟಿ 'ಇನ್‌ಸ್ಟಂಟ್ ಜೋಳದ ದೋಸೆ' ರೆಡಿ!
- ಮತ್ತು ಈ ದೊಸೆಯನ್ನು ಟೊಮೆಟೊ, ಶೇಂಗಾ, ತೆಂಗಿನಕಾಯಿ, ಶುಂಠಿ ಹೀಗೆ ಯಾವುದೇ ಚಟ್ನಿಯಲ್ಲಿ ತಿಂದರೆ. ಟೇಸ್ಟ್ ತುಂಬಾ ಚೆನ್ನಾಗಿರುತ್ತದೆ.
ಇದನ್ನೂ ಓದಿ:
ನಿಮಗಾಗಿ ಸೂಪರ್ ಸ್ನಾಕ್ಸ್, ಗರಿಗರಿಯಾದ ಸಖತ್ ಟೇಸ್ಟಿ 'ಅವಲಕ್ಕಿ ಚಕ್ಲಿ' ಸರಳವಾಗಿ ಮಾಡೋದು ಹೇಗೆ? - Flattened rice Chakli Recipe
ಮಕ್ಕಳಿಗೆ ಲಂಚ್ ಬಾಕ್ಸ್ ಕಟ್ಟಲು ಸಮಯವಿಲ್ಲವೇ? ಹಾಗಾದ್ರೆ 10 ನಿಮಿಷದಲ್ಲಿ ಟೊಮೆಟೊ ರೈಸ್ ರೆಡಿ ಮಾಡಿ! - TOMATO RICE RECIPE