Dasara Special Karchikai Recipe:ಎಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ನಾಡ ಹಬ್ಬ ದಸರಾ ಸಂದರ್ಭದಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳು ಸಿದ್ಧಪಡಿಸಲಾಗುತ್ತದೆ. ದೊಡ್ಡ ಹಬ್ಬಗಳು ಬಂದಾಗ ಖಂಡಿತವಾಗಿಯೂ ಪ್ರತಿ ಮನೆಯಲ್ಲೂ ಹಲವು ಪ್ರಕಾರ ಸಿಹಿ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಸಿಹಿತಿಂಡಿಗಳ ವಿಷಯಕ್ಕೆ ಬಂದರೆ, ಮನೆಯಲ್ಲಿ ಸಾಮಾನ್ಯವಾಗಿ ಕರ್ಚಿಕಾಯಿಗಳನ್ನು ರೆಡಿ ಮಾಡುತ್ತಾರೆ. ಈ ಕರ್ಚಿಕಾಯಿಗಳಂತೂ ತುಂಬಾ ರುಚಿಕರವಾಗಿರುತ್ತವೆ. ಮಕ್ಕಳು ಅವುಗಳನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಹಾಗಾದ್ರೆ ರುಚಿಕರವಾದ ಕರ್ಚಿಕಾಯಿಗಳನ್ನು ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು? ಎಂಬುದನ್ನು ತಿಳಿಯೋಣ.
ಕರ್ಚಿಕಾಯಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು?:
- ಮೈದಾ ಹಿಟ್ಟು - ಕಾಲು ಕೆ.ಜಿ
- ಕರಗಿದ ತುಪ್ಪ - 3 ಟೀಸ್ಪೂನ್
- ಶೇಂಗಾ - 1 ಕಪ್
- ಎಳ್ಳು - ಅರ್ಧ ಕಪ್
- ಒಣ ಕೊಬ್ಬರಿ ಪುಡಿ - ಅರ್ಧ ಕಪ್
- ಪುಟಾಣಿ - 1 ಕಪ್
- ಬೆಲ್ಲ - 300 ಗ್ರಾಂ
- ಏಲಕ್ಕಿ ಪುಡಿ - 1 ಟೀಸ್ಪೂನ್
- ಎಣ್ಣೆ - ಡೀಪ್ ಪ್ರೈ ಮಾಡಲು ಬೇಕಾಗುವಷ್ಟು