ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಬಿಡಿಭಾಗಗಳನ್ನು ಪೂರೈಸಿದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ - America imposed sanctions - AMERICA IMPOSED SANCTIONS

ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಬಿಡಿಭಾಗಗಳನ್ನು ಪೂರೈಸಿದ ನಾಲ್ಕು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

US Department of State  Pakistan  China  ballistic missile
ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಬಿಡಿಭಾಗಗಳನ್ನು ಪೂರೈಸಿದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ

By ETV Bharat Karnataka Team

Published : Apr 20, 2024, 11:24 AM IST

ವಾಷಿಂಗ್ಟನ್ (ಅಮೆರಿಕ):ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಅಗತ್ಯವಿರುವ ವಸ್ತುಗಳನ್ನು ಪೂರೈಸಿದ ಚೀನಾದ ಮೂರು ಕಂಪನಿಗಳು ಮತ್ತು ಬೆಲಾರಸ್ ಮೂಲದ ಸಂಸ್ಥೆಯ ವಿರುದ್ಧ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಶುಕ್ರವಾರ ತಿಳಿಸಿದೆ.

ಮೂರು ಚೀನಾದ ಕಂಪನಿಗಳಾದ ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್, ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್‌ನ್ಯಾಶನಲ್ ಟ್ರೇಡ್ ಕಂ ಲಿಮಿಟೆಡ್ ಮತ್ತು ಗ್ರಾನ್‌ಪೆಕ್ಟ್ ಕಂಪನಿ ಲಿಮಿಟೆಡ್, ಜೊತೆಗೆ ಬೆಲಾರಸ್ ಮೂಲದ ಮಿನ್ಸ್ಕ್ ವೀಲ್ ಟ್ರ್ಯಾಕ್ಟರ್ ಪ್ಲಾಂಟ್ ಕಂಪನಿಯ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

ನಾಲ್ಕು ಕಂಪನಿಗಳು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಸರಬರಾಜು ಹಾಗೂ ಅವುಗಳ ವಿತರಣಾ ವಿಧಾನಗಳನ್ನು ಗುರಿಯಾಗಿಸಿ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಆದೇಶ ಹೊರಡಿಸಿದೆ. ಈ ಕಂಪನಿಗಳು ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಬಿಡಿಭಾಗಗಳನ್ನು ಪೂರೈಸಿವೆ. ಅದರಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿ ಪ್ರೋಗ್ರಾಂ ಸೇರಿದೆ" ಎಂದು ಹೇಳಿದೆ.

ಬೆಲಾರಸ್ ಮೂಲದ ಮಿನ್ಸ್ಕ್ ವೀಲ್ ಟ್ತ್ಯಾಕ್ಟರ್ ಪ್ಲಾಂಟ್ ಪಾಕಿಸ್ತಾನದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ವಿಶೇಷ ವಾಹನ ಚಾಸಿಸ್ ಅನ್ನು ಪೂರೈಸಲು ಕೆಲಸ ಮಾಡಿದೆ. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ ವರ್ಗ (MTCR) I ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗೆ ಜವಾಬ್ದಾರರಾಗಿರುವ ಪಾಕಿಸ್ತಾನದ ನ್ಯಾಷನಲ್ ಡೆವಲಪ್‌ಮೆಂಟ್ ಕಾಂಪ್ಲೆಕ್ಸ್ (NDC) ಯಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಉಡಾವಣಾ ಪೂರಕವಾದ ಸಾಧನವಾಗಿ ಚಾಸಿಸ್ ಅನ್ನು ಬಳಸಲಾಗುತ್ತದೆ.

ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಹೇಳಿಕೆ ಪ್ರಕಾರ, "ಗ್ರಾನ್‌ಪೆಕ್ಟ್ ಕಂಪನಿ ಲಿಮಿಟೆಡ್, ಪಾಕಿಸ್ತಾನದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಫಿಲಮೆಂಟ್ ವಿಂಡಿಂಗ್ ಯಂತ್ರ ಸೇರಿದಂತೆ ಕ್ಷಿಪಣಿ-ಸಂಬಂಧಿತ ಉಪಕರಣಗಳನ್ನು ಪೂರೈಸಿದೆ. ಫಿಲಮೆಂಟ್ ವಿಂಡಿಂಗ್ ಯಂತ್ರಗಳು ರಾಕೆಟ್ ಮೋಟಾರು ಪ್ರಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ" ಎಂದು ತಿಳಿಸಿದೆ.

ಗ್ರಾನ್‌ಪೆಕ್ಟ್ ಕಂಪನಿ ಲಿಮಿಟೆಡ್ ಪಾಕಿಸ್ತಾನದ SUPARCO ನೊಂದಿಗೆ ದೊಡ್ಡ ಗಾತ್ರದ ರಾಕೆಟ್ ಮೋಟಾರ್‌ಗಳ ಪರೀಕ್ಷೆಗೆ ಉಪಕರಣಗಳನ್ನು ಪೂರೈಸಲು ಕೆಲಸ ಮಾಡಿದೆ. ಇದಲ್ಲದೇ, Granpect Co Ltd ಪಾಕಿಸ್ತಾನದ ಎನ್​ಡಿಸಿಗೆ ದೊಡ್ಡ ಗಾತ್ರದ ರಾಕೆಟ್ ಮೋಟಾರ್‌ಗಳನ್ನು ಪರೀಕ್ಷಿಸಲು ಉಪಕರಣಗಳನ್ನು ಒದಗಿಸಲು ಕೆಲಸ ಮಾಡಿದೆ.

ಪಿಆರ್​ಸಿ ಆಧಾರಿತ ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್ನ್ಯಾಷನಲ್ ಟ್ರೇಡ್ ಕಂ ಲಿಮಿಟೆಡ್ ಪಾಕಿಸ್ತಾನದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಕ್ಷಿಪಣಿ - ಸಂಬಂಧಿತ ಉಪಕರಣಗಳನ್ನು ಪೂರೈಸಿದೆ. ಇದರಲ್ಲಿ ಸ್ಟಿರ್ ವೆಲ್ಡಿಂಗ್ ಉಪಕರಣಗಳು ಸೇರಿವೆ. ಟಿಯಾಂಜಿನ್ ಕ್ರಿಯೇಟಿವ್​ನ ಸಂಗ್ರಹವು ಪಾಕಿಸ್ತಾನದ MTCR ವರ್ಗ I ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಚಿಸಲು ಮತ್ತು ಉತ್ಪಾದಿಸಲು ಪಾಕಿಸ್ತಾನದ SUPARCO ಸಂಸ್ಥೆ ಉದ್ದೇಶಿಸಿದೆ.

ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಆದೇಶದ ಪ್ರಕಾರ, ಅಮೆರಿಕದಲ್ಲಿ ಈ ನಾಲ್ಕು ಕಂಪನಿಗಳ ಎಲ್ಲ ವಹಿವಾಟುಗಳು ನಿರ್ಬಂಧಿಸಲಾಗಿದೆ. ನಿರ್ಬಂಧಿಸಲಾದ ಕಂಪನಿಗಳ ವ್ಯಕ್ತಿಗಳಿಗೆ ಒಎಫ್​ಎಸಿ ನೀಡಿದ ಸಾಮಾನ್ಯ ಅಥವಾ ನಿರ್ದಿಷ್ಟ ಪರವಾನಗಿ ಅಥವಾ ವಿನಾಯಿತಿಯನ್ನು ನಿಷೇಧಿಸಲಾಗಿದೆ. ಇದಲ್ಲದೇ, ಅಮೆರಿಕಕ್ಕೆ ಈ ಕಂಪನಿಗಳ ವ್ಯಕ್ತಿಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಗಣನೀಯ ಹೆಚ್ಚಳ, ಕ್ರಮಕ್ಕೆ ಭಾರತೀಯ ಮೂಲದ ​ಸಂಸದರ ಆಗ್ರಹ - attack on Hindus

ABOUT THE AUTHOR

...view details