ಕರ್ನಾಟಕ

karnataka

ETV Bharat / international

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ: ಹೌತಿ ಬಂಡುಕೋರರಿಂದ ಬ್ರಿಟಿಷ್ ಹಡಗಿನ ಮೇಲೆ ದಾಳಿ

Houthis Missile Attack On UK Ship : ಯೆಮೆನ್‌ನ ಹೌತಿ ಬಂಡುಕೋರರು ಶುಕ್ರವಾರ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಗಲ್ಫ್ ಆಫ್ ಅಡೆನ್‌ನಲ್ಲಿ ತೈಲ ಟ್ಯಾಂಕ್‌ಗಳನ್ನು ಸಾಗಿಸುತ್ತಿದ್ದ ಬ್ರಿಟಿಷ್ ಹಡಗಿನ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾರೆ. ಇನ್ನೊಂದೆಡೆ ಅಮೆರಿಕದ ಗಸ್ತು ನೌಕೆಯ ಮೇಲೂ ಕ್ಷಿಪಣಿ ದಾಳಿ ನಡೆದಿದೆ.

Yemeni Houthi leaders  Red Sea shipping attacks  Houthis Missile Attack  Houthis Missile Attack On Ship  ಯೆಮೆನ್‌ನ ಹೌತಿ ಬಂಡುಕೋರರು  ಗಲ್ಫ್ ಆಫ್ ಅಡೆನ್‌  ಬ್ರಿಟಿಷ್ ಹಡಗಿನ ಮೇಲೆ ಕ್ಷಿಪಣಿ ದಾಳಿ
ಹೌತಿ ಬಂಡುಕೋರರಿಂದ ಬ್ರಿಟಿಷ್ ಹಡಗಿನ ಮೇಲೆ ದಾಳಿ!

By PTI

Published : Jan 27, 2024, 10:47 AM IST

ವಾಷಿಂಗ್ಟನ್​ (ಅಮೆರಿಕ):ಯೆಮೆನ್‌ನ ಹೌತಿ ಬಂಡುಕೋರರು ಗಲ್ಫ್ ಆಫ್ ಅಡೆನ್‌ನಲ್ಲಿ ಹಡಗುಗಳ ಮೇಲೆ ದಾಳಿ ಮುಂದುವರೆಸಿದ್ದಾರೆ. ಶುಕ್ರವಾರ, ತೈಲ ಟ್ಯಾಂಕ್‌ಗಳನ್ನು ಸಾಗಿಸುತ್ತಿದ್ದ ಬ್ರಿಟಿಷ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ, ಮಾರ್ಲಿನ್ ಲಾಂಡಾದ ಕಾರ್ಗೋ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಕ್ರಮಕೈಗೊಂಡರು. ಅದೃಷ್ಟವಶಾತ್​ ಈ ದಾಳಿಯಲ್ಲಿ ಯಾರಿಗೂ ಏನು ಆಗಿಲ್ಲ ಎಂದು ವೆಸೆಲ್ ಆಪರೇಟರ್ ಟ್ರಾಫಿಗುರಾ ತಿಳಿಸಿದ್ದಾರೆ.

ಕ್ಷೀಪಣಿ ದಾಳಿ:ಆಗ್ನೇಯ ಈಡನ್ ನಿಂದ 60 ನಾಟಿಕಲ್ ಮೈಲಿ ದೂರದಲ್ಲಿ ಕ್ಷೀಪಣಿ ದಾಳಿ ನಡೆದಿದೆ. ದಾಳಿಯ ನಂತರ ತಕ್ಷಣವೇ ಆ ಪ್ರದೇಶಕ್ಕೆ ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ಯುಕೆ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಹೇಳಿದೆ. ಅಲ್ಲದೇ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದ್ದು, ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳು ಜಾಗೃತವಾಗಿರಬೇಕು. ಮತ್ತೊಂದೆಡೆ, ಹೌತಿ ಬಂಡುಕೋರರು ಉಡಾಯಿಸಿದ ಕ್ಷಿಪಣಿಯನ್ನು ತನ್ನ ಯುದ್ಧನೌಕೆಗಳು ಹೊಡೆದುರುಳಿಸಿದವು ಎಂದು ಅಮೆರಿಕ ಮಿಲಿಟರಿ ಹೇಳಿದೆ.

ಅಮೆರಿಕ ಗಸ್ತು ದೋಣಿ ಮೇಲೆ ದಾಳಿ:ಮತ್ತೊಂದೆಡೆ ಶುಕ್ರವಾರ ಗಲ್ಫ್ ಆಫ್ ಅಡೆನ್‌ನಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕ ಯುದ್ಧನೌಕೆ ಇಎಸ್‌ಎಸ್ ಕಾರ್ನೆ ಮೇಲೆ ಹೌತಿ ಬಂಡುಕೋರರು ಕ್ಷಿಪಣಿಯನ್ನು ಹಾರಿಸಿದರು. ತನ್ನ ಪಡೆಗಳು ಅದನ್ನು ಹೊಡೆದುರುಳಿಸಿವೆ ಎಂದು ಯುಎಸ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ. ಆದರೂ ಕೆಂಪು ಸಮುದ್ರದಲ್ಲಿ ಸಾಗಣೆ ಹಡಗುಗಳ ಮೇಲೆ ಹೌತಿ ದಾಳಿಯ ನಂತರ ಅಮೆರಿಕದ ಹಡಗು ನೇರವಾಗಿ ಗುರಿಯಾಗಿರುವುದು ಇದೇ ಮೊದಲು.

ಚೀನಾ ಎಚ್ಚರಿಕೆ!:ಗಾಜಾದ ಮೇಲೆ ಇಸ್ರೇಲ್ ದಾಳಿಯ ನಂತರ, ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಗಾಜಾವನ್ನು ಬೆಂಬಲಿಸಿ, ಹೌತಿ ಬಂಡುಕೋರರು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಇಸ್ರೇಲ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ವಿದೇಶಿ ವ್ಯಾಪಾರಿ ಹಡಗುಗಳು ಆ ಮಾರ್ಗದಲ್ಲಿ ಸಂಚರಿಸಲು ಹೆದರುತ್ತವೆ. ಹಿಂದೆ ಮುಂದೆ ಹೋಗುವುದರಿಂದ ಪ್ರಯಾಣದ ವೆಚ್ಚ ಅಗಾಧವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಬ್ರಿಟನ್ ಮತ್ತು ಯೆಮೆನ್ ನಲ್ಲಿರುವ ಹೌತಿ ಬಂಡುಕೋರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗುತ್ತಿದೆ. ಈ ಪಟ್ಟಿಗೆ ಪರೋಕ್ಷವಾಗಿ ಚೀನಾ ಸೇರಿಕೊಂಡಿದೆ. ಸಂಬಂಧಿತ ಮೂಲಗಳ ಪ್ರಕಾರ, ಯೆಮೆನ್‌ನಲ್ಲಿ ಹೌತಿಗಳೊಂದಿಗೆ ಅನೇಕ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಇರಾನ್‌ಗೆ ಚೀನಾ ಎಚ್ಚರಿಕೆ ನೀಡಿದೆ. ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ ಇರಾನ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಲು ಡ್ರ್ಯಾಗನ್ ಸಿದ್ಧವಾಗಿದೆ ಎಂದು ತೋರುತ್ತದೆ.

ಓದಿ:ನ್ಯುಮೋನಿಯಾದಿಂದ 220 ಮಕ್ಕಳು ಸಾವು; ಪಾಕಿಸ್ತಾನದಲ್ಲಿ ದುರಂತ

ABOUT THE AUTHOR

...view details