ವಾಷಿಂಗ್ಟನ್ (ಅಮೆರಿಕ): ''ತಾವು ಅಧ್ಯಕ್ಷರಾಗಿ ಮರು ಆಯ್ಕೆಯಾದರೆ, ಅಮೆರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿದ ವಿದೇಶಿ ವಿದ್ಯಾರ್ಥಿಗಳಿಗೆ ಸ್ವಯಂಚಾಲಿತವಾಗಿ ಗ್ರೀನ್ ಕಾರ್ಡ್‌ಗಳನ್ನು ನೀಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ನಿಜವಾಗಿಯೂ ಮರು ಆಯ್ಕೆಯಾದರೆ ಮತ್ತು ಅವರ ಭರವಸೆಯನ್ನು ಪೂರೈಸಿದರೆ, ಭಾರತದ ವಿದ್ಯಾರ್ಥಿಗಳು ಅತಿದೊಡ್ಡ ಫಲಾನುಭವಿಗಳಾಗಲಿದ್ದಾರೆ. ಅಮರಿಕದಲ್ಲಿ ಚೀನಾದ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. 2023ರಲ್ಲಿ ಅಮೆರಿಕದಲ್ಲಿ ದಾಖಲಾದ ಎಲ್ಲಾ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಶೇ. 53ರಷ್ಟಿದೆ.
ಗುರುವಾರ, ಇಬ್ಬರು ಸಿಲಿಕಾನ್ ವ್ಯಾಲಿ ಹೂಡಿಕೆದಾರರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಅವರು, "ನಾನು ಭರವಸೆ ನೀಡುತ್ತೇನೆ, ಜೊತೆಗೆ ನಾನು ಅದನ್ನು ಒಪ್ಪುತ್ತೇನೆ. ಪ್ರಮುಖವಾಗಿ ನಾನು ಏನು ಮಾಡುತ್ತೇನೆಂದ್ರೆ, ನೀವು ಅಮೆರಿಕದ ಕಾಲೇಜಿನಿಂದ ಪದವಿ ಪೂರ್ಣಗೊಳಿಸಿದ ನಂತರ, ಈ ದೇಶದಲ್ಲಿ ಉಳಿಯಲು ಗ್ರೀನ್ ಕಾರ್ಡ್ ಅನ್ನು ನೀವು ಸ್ವಯಂಚಾಲಿತವಾಗಿ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ'' ಎಂದು ಭರವಸೆ ನೀಡಿದರು.
ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ಅಮೆರಿಕದಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಅನುಮತಿಸಲಾಗುತ್ತದೆ. ಶಾಶ್ವತ ನಿವಾಸ ಮತ್ತು ಇದು ಪೂರ್ಣ ಪೌರತ್ವದಿಂದ ಒಂದು ಹೆಜ್ಜೆ ದೂರದಲ್ಲಿರಲಿದೆ. ಅಮೆರಿಕ ಪ್ರತಿ ವರ್ಷ ಅಂದಾಜು 1 ಮಿಲಿಯನ್ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ ಮತ್ತು ಹೆಚ್ಚಾಗಿ ಚೀನಾ ಮತ್ತು ಭಾರತದಿಂದ ಪ್ರತಿ ವರ್ಷ 1 ಮಿಲಿಯನ್ ವಿದೇಶಿ ವಿದ್ಯಾರ್ಥಿಗಳಿಗೆ ಈ ಲಾಭ ದೊರೆಯಲಿದ್ದಾರೆ. ಮಾಜಿ ಅಧ್ಯಕ್ಷ ಟ್ರಂಪ್ ಚುನಾಯಿತರಾದರೆ ಈ ಭರವಸೆಯನ್ನು ನಿಜವಾಗಿ ಪೂರೈಸಿದರೆ, ಇದು ಕಾರ್ಯಕ್ರಮದ ಪ್ರಮುಖ ವಿಸ್ತರಣೆ ಆಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ವಾರ್ಷಿಕವಾಗಿ ನೀಡಲಾಗುವ ಗ್ರೀನ್ ಕಾರ್ಡ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಆದರೆ, ಅವರು ನಿಜವಾಗಿಯೂ ಈ ಭರವಸೆಯನ್ನು ಈಡೇರಿಸುತ್ತಾರೆಯೇ ಎಂಬುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ.