ವಾಷಿಂಗ್ಟನ್: ಅಮೆರಿಕದ ಹಿರಿಯ ಅಧಿಕಾರಿಗಳು ಧಾರ್ಮಿಕ ಗುರು ದಲೈ ಲಾಮ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿಕೆ ಪ್ರಕಾರ, ದಲೈ ಲಾಮ ಅವರೊಂದಿಗೆ ಅಪರೂಪದ ಉನ್ನತ ಮಟ್ಟದ ನೇರ ಸಭೆ ಇದಾಗಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ನ ಅಧಿಕಾರಿಗಳಾದ ಉಜ್ರಾ ಜೆಯಾ ಮತ್ತು ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿ ಅದಿಕಾರಿ ಕೆಲ್ಲಿ ರಾಜೋಕ್ ನ್ಯೂಯಾರ್ಕ್ನಲ್ಲಿ ಭೇಟಿಯಾಗಿದ್ದಾರೆ. ದಲೈಲಾಮ ಕೂಡ ವೈದ್ಯಕೀಯ ಚಿಕಿತ್ಸೆಯನ್ನು ಇಲ್ಲಿ ಪಡೆಯುತ್ತಿದ್ದು, ಈ ಭೇಟಿ ವೇಳೆ ದಲೈ ಲಾಮಾ ಅವರಿಗೆ ಟಿಬೇಟಿಯನ್ ಮಾನವ ಹಕ್ಕು ಪುನರ್ಸ್ಥಾಪಿಸಲು ಅಮೆರಿಕ ಬದ್ಧವಾಗಿದ್ದು, ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿ, ಭಾಷೆ ಮತ್ತು ಐತಿಹಾಸಿವನ್ನು ಕಾಪಾಡುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಲಾಗಿದೆ.
ಟಿಬೆಟ್ ಮೇಲೆ ಬೀಜಿಂಗ್ ಬಿಗಿ ನಿಯಂತ್ರಣವನ್ನು ಹೇರಿದ್ದು, ಇದು ತಮ್ಮ ಪ್ರದೇಶವಾಗಿದ್ದು ಬೇರ್ಪಡಿಸಲಾಗದು ಎಂಬ ವಾದ ಮಂಡಿಸಿದೆ. ಟಿಬೆಟ್ಗೆ ಹೆಚ್ಚಿನ ಸ್ವಾಯುತತ್ತೆ ಬೇಕು ಎಂದು ವಾದ ಮಂಡಿಸಿದ್ದ ದಲೈ ಲಾಮರನ್ನು ಗಡಿಪಾರು ಮಾಡಲಾಗಿದೆ. ಈ ನಡುವೆ ಟಿಬೆಟಿಯನ್ನರಿಗೆ ತಾಯ್ನಾಡನ್ನು ಮರಳಿಸುವ ಪ್ರಯತ್ನಕ್ಕೆ ಅಮರಿಕ ಮುಂದಾಗಿದೆ. ಇದಕ್ಕಾಗಿ ರಿಸ್ವಾಲ್ ಟಿಬೆಟ್ ಮಸೂದೆಯನ್ನು ಅಮೆರಿಕ ಅಂಗೀಕರಿಸಿದ್ದು, ಟಿಬೆಟ್ಯನ್ನರಿಗೆ ತಮ್ಮ ತಾಯ್ನಾಡನ್ನು ಮರಳಿಸುವ ಪ್ರಯತ್ನ ನಡೆಸಿದೆ.