ಕರ್ನಾಟಕ

karnataka

ETV Bharat / international

ಅಧಿಕಾರಕ್ಕಾಗಿ ಇತರ ಪಕ್ಷಗಳ ಜೊತೆ ಕೈ ಜೋಡಿಸಲ್ಲ: ಇಮ್ರಾನ್​ ಖಾನ್​ - Imran Khan

ಪಾಕಿಸ್ತಾನದಲ್ಲಿ ರಾಜಕೀಯ ಅಸ್ತಿರತೆ ಮತ್ತೆ ಮುಂದುವರಿದಿದೆ. ಪಿಟಿಐ ಸಂಸ್ಥಾಪಕ, ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಇತರ ಪಕ್ಷಗಳ ಜೊತೆ ಕೈ ಜೋಡಿಸಲು ಹಿಂದೇಟು ಹಾಕಿದ್ದಾರೆ.

ಇಮ್ರಾನ್​ ಖಾನ್​
ಇಮ್ರಾನ್​ ಖಾನ್​

By ANI

Published : Apr 27, 2024, 8:06 AM IST

ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಬಂದಿಲ್ಲ. ಇದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಸಂಸ್ಥಾಪಕ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಇತರ ಪಕ್ಷಗಳೊಂದಿಗೆ ಸೇರಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮುಗಿದ ಪಕ್ಷದ 28ನೇ ಸಂಸ್ಥಾಪನಾ ದಿನದಂದು ಜೈಲಿನಿಂದ ಸಂದೇಶ ರವಾನಿಸಿರುವ ಇಮ್ರಾನ್​ ಖಾನ್​, ಬೇರೊಂದು ಪಕ್ಷದ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಪಿಟಿಐ ಸಜ್ಜಾಗಿಲ್ಲ. ಯಾವುದೇ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಅತ್ಯಂತ ಕೆಟ್ಟ ಸರ್ವಾಧಿಕಾರಿ ಸರ್ಕಾರ ಆಡಳಿತದಲ್ಲಿದೆ. ಇದು ಆರ್ಥಿಕತೆ, ಆಡಳಿತ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ನಾಶಕ್ಕೆ ಕಾರಣವಾಗುತ್ತಿದೆ. ದೇಶ ವಿನಾಶದತ್ತ ಸಾಗುತ್ತಿದೆ. ಇದನ್ನು ತಡೆಯಲು ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನು ಪಾತ್ರವನ್ನು ನಿರ್ವಹಿಸಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದ್ದಾರೆ.

ನಿಮಗೆ ಸಿಗಬೇಕಾದ ನಿಜವಾದ ಸ್ವಾತಂತ್ರ್ಯಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಆದರೆ, ನನ್ನ ಅಥವಾ ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಕಲಿ ಮತ್ತು ಹುಸಿ ಪ್ರಕರಣಗಳನ್ನು ದಾಖಲಿಸಿ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ನಾನು ಇನ್ನೂ ಒಂಬತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಬೇಕಾಗಿ ಬರಬಹುದು. ಆದರೆ, ನಾನು ಎಂದಿಗೂ ಇತರ ಪಕ್ಷಗಳ ಜೊತೆಗೆ ಡೀಲ್​ ಮಾಡಿಕೊಳ್ಳುವುದಿಲ್ಲ. ನನ್ನ ರಾಷ್ಟ್ರವನ್ನು ಗುಲಾಮಿಯನ್ನಾಗಿ ಮಾಡುವುದಿಲ್ಲ ಎಂದರು.

ಸೇನಾ ಮುಖ್ಯಸ್ಥರ ಜೊತೆ ಮಾತನಾಡುತ್ತೇವೆ. ದೇಶದ ಭದ್ರತೆ ಅಗತ್ಯವಾಗಿದೆ. ಅಧಿಕಾರಲ್ಲಿರುವ ಎರಡೂ ಪಕ್ಷಗಳನ್ನು ಜನರು ಚುನಾವಣೆಯಲ್ಲಿ ತಿರಸ್ಕರಿಸಿದ್ದರು. ಪಾಕಿಸ್ತಾನದ ಸ್ವಾತಂತ್ರ್ಯ ಮತ್ತು ಭವಿಷ್ಯಕ್ಕಾಗಿ ಸೇನಾ ಮುಖ್ಯಸ್ಥರೊಂದಿಗೆ ಪಕ್ಷವು ಮಾತನಾಡಲಿದೆ ಎಂದು ಪುನರುಚ್ಚರಿಸಿದ ಅವರು, ದೇಶಕ್ಕೆ ಇಮ್ರಾನ್​ಖಾನ್​ ಅಗತ್ಯವಿದೆ ಎಂದರು.

ಪಿಟಿಐ ನಾಯಕ ಆಫ್ರಿದಿ ಮಾತನಾಡಿ, ಪಕ್ಷ ಮಿಲಿಟರಿ ನಾಯಕತ್ವದೊಂದಿಗೆ ತೊಡಗಿಸಿಕೊಳ್ಳಲು ಮೊದಲ ದಿನದಿಂದ ಇಮ್ರಾನ್ ಖಾನ್​ ಬಯಸಿದ್ದರು. ಆದರೆ, ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದು ಮುಂದುವರೆದಿದ್ದರೆ, ಎಲ್ಲವೂ ಸಾರ್ವಜನಿಕರ ಮುಂದೆ ತರಲಾಗುತ್ತಿತ್ತು ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ರಿಲೀಫ್​;ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಈಚೆಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ವಿಧಿಸಿದ್ದ 14 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ತೋಷಖಾನಾ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಇದನ್ನೂ ಓದಿ:ನೈಜರ್, ಚಾಡ್​ನಿಂದ ಸೇನಾಪಡೆಗಳನ್ನು ಹಿಂಪಡೆಯಲು ಅಮೆರಿಕ ಸಿದ್ಧತೆ - troops withdrawal from niger

ABOUT THE AUTHOR

...view details