ಕರ್ನಾಟಕ

karnataka

ETV Bharat / international

ಗಣಿ ಸ್ಫೋಟದಲ್ಲಿ ನಾಲ್ವರು ಸಾವು: ಎಂಟು ಮಂದಿ ರಕ್ಷಣೆಗೆ ಪ್ರಯತ್ನ - GAS EXPLOSION AT A COAL MINE

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ ಎಂಟು ಮಂದಿ ಗಣಿಯೊಳಗೆ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Pakistan: Four dead, eight still trapped
ಗಣಿ ಸ್ಫೋಟದಲ್ಲಿ ನಾಲ್ವರು ಸಾವು: ಎಂಟು ಮಂದಿ ರಕ್ಷಣೆಗೆ ಪ್ರಯತ್ನ (ETV Bharat)

By ETV Bharat Karnataka Team

Published : Jan 11, 2025, 6:27 AM IST

ಕ್ವೆಟ್ಟಾ, ಪಾಕಿಸ್ತಾನ:ಕ್ವೆಟ್ಟಾದ ಸಂಜ್ಡಿ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿ ನಾಲ್ವರು ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ. ಗಣಿಯೊಳಗೆ ಇನ್ನೂ ಎಂಟು ಮಂದಿ ಸಿಲುಕಿರುವ ಶಂಕೆ ಇದ್ದು, ಅವರೆಲ್ಲರನ್ನೂ ರಕ್ಷಣೆ ಮಾಡುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಲ್ಲಿನ ರಕ್ಷಣಾ ತಂಡಗಳು ಹೇಳಿವೆ ಎಂದು ಅಲ್ಲಿನ ಸುದ್ದಿ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಸ್ಫೋಟ ಸಂಭವಿಸಿದ ತಕ್ಷಣಾ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 27 ಗಂಟೆಗಳಿಗೂ ಹೆಚ್ಚು ಕಾಲದಿಂದ ಕಾರ್ಯಾಚರಣೆ ಮುಂದುವರೆದಿದೆ. ಗಣಿಯೊಳಗೆ ಸಿಕ್ಕಿಬಿದ್ದ ಗಣಿಗಾರರನ್ನು ತಲುಪಲು ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗಣಿಯಿಂದ ಮೂರು ಮೃತದೇಹಗಳನ್ನು ವಶಕ್ಕೆ ಪಡೆದಿದೆ ಎಂದು ದೃಢಪಡಿಸಿದೆ. ಒಟ್ಟು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಸ್ಥಳೀಯ ಕಾಲಮಾನ ಗುರುವಾರ ಸಂಜೆ 4:00 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಅನಿಲ ಸ್ಫೋಟದಿಂದಾಗಿ ಕಲ್ಲಿದ್ದಲು ಗಣಿಯ ಒಂದು ಭಾಗ ಕುಸಿದು 12 ಕಾರ್ಮಿಕರು ಸಿಲುಕಿಕೊಂಡಿದ್ದರು. ಈ ಎಲ್ಲ ಕಾರ್ಮಿಕರು ಗಣಿಯ ಸುಮಾರು 4300 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದರು.ಗಣಿಯೊಳಗೆ ದೊಡ್ಡ ಸ್ಫೋಟ ಸಂಭವಿಸಿದ್ದರಿಂದ ಅಲ್ಲಿ ಸಿಲುಕಿದವರ ರಕ್ಷಣೆಗೆ ಪರ್ಯಾಯ ಮಾರ್ಗ ರಚನೆಗೆ ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ.

ಗಣಿಯೊಳಗಿನ ಅನಿಲ ಮತ್ತು ಸವಾಲಿನ ಹವಾಮಾನದ ಕಾರಣದಿಂದಾಗಿ ಕಾರ್ಯಾಚರಣೆ ಕಷ್ಟಕರವಾಗಿದ್ದು, ಸ್ಥಳೀಯ ಗಣಿ ಕೆಲಸಗಾರರು PDMA ತಂಡಗಳಿಗೆ ಸಹಾಯ ಮಾಡುತ್ತಿದ್ದಾರೆ. ಮಾರ್ಚ್ 2024 ರಲ್ಲಿ, ಬಲೂಚಿಸ್ತಾನದ ಹರ್ನೈನಲ್ಲಿ ಕಲ್ಲಿದ್ದಲು ಗಣಿಯಲ್ಲಿ 18 ಗಣಿಗಾರರು ಸಿಕ್ಕಿಬಿದ್ದಾಗ ಇದೇ ರೀತಿಯ ಘಟನೆ ನಡೆದಿತ್ತು. ಪಾರುಗಾಣಿಕಾ ತಂಡಗಳು 12 ಶವಗಳನ್ನು ಯಶಸ್ವಿಯಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರೆ, ಗಾಯಗೊಂಡ ಸ್ಥಿತಿಯಲ್ಲಿದ್ದ ಆರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿತ್ತು.

ಇದನ್ನು ಓದಿ:1850ರ ನಂತರ 2024ನೇ ಇಸ್ವಿ ಅತ್ಯಧಿಕ ತಾಪಮಾನದ ವರ್ಷ: ಕೋಪರ್ನಿಕಸ್ ವರದಿ

ABOUT THE AUTHOR

...view details