ವೆಲ್ಲಿಂಗ್ಟನ್: ಭಾರತದಿಂದ ಆಮದು ಮಾಡಿಕೊಂಡು ಬೆಣ್ಣೆಯನ್ನು ತನ್ನ ದೇಶದ ಬೆಣ್ಣೆ ಎಂದು ಮಾರಾಟ ಮಾಡುತ್ತಿದ್ದ ನ್ಯೂಜಿಲ್ಯಾಂಡ್ನ ಡೈರಿ ಘಟಕ ಮಿಲ್ಕಿಯೊ ಫುಡ್ಸ್ ಲಿಮಿಟೆಡ್ಗೆ ನ್ಯೂಜಿಲ್ಯಾಂಡ್ನ ವಾಣಿಜ್ಯ ಆಯೋಗ 261.452 ಡಾಲರ್ ಅಂದರೆ 2.19 ಕೋಟಿ ರೂ ದಂಡವನ್ನು ವಿಧಿಸಿದೆ.
ಮಿಲ್ಕಿಯೊ ಭಾರತದಿಂದ ಆಮದು ಮಾಡಿದ ಬೆಣ್ಣೆಯನ್ನು ಎಂದು ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪ ಅಲ್ಲಗಳೆದ ಸಂಸ್ಥೆ, ನಮ್ಮ ಘಟಕದಿಂದ ಮಾರಾಟವಾಗುತ್ತಿರುವ ಬೆಣ್ಣೆ ಶೇ 100ರಷ್ಟು ಶುದ್ಧ ನ್ಯೂಜಿಲ್ಯಾಂಡ್ ಉತ್ಪನ್ನವಾಗಿದೆ ಎಂದು ವಾದ ಮಂಡಿಸಿತು.
ಇದೀಗ ಹ್ಯಾಮಿಲ್ಟೊನ್ ಮೂಲದ ಈ ಡೈರಿ ಘಟಕ ಮಿಲ್ಕಿಯೊ ಚಾಟಿ ಬೀಸಿರುವ ವಾಣಿಜ್ಯ ಆಯೋಗ, ಕಂಪನಿ ಗ್ರಾಹಕರನ್ನು ತಪ್ಪು ದಾರಿಗೆ ಏಳೆಯುತ್ತಿದೆ. ಶೇ 100ರಷ್ಟು ಶುದ್ಧ ನ್ಯೂಜಿಲ್ಯಾಂಡ್ ಉತ್ಪನ್ನವನ್ನು ತುಪ್ಪದ ಉತ್ಪನ್ನವಾಗಿ ಬಳಕೆ ಮಾಡುತ್ತಿದೆ ಎಂದು ಬಿಂಬಿಸಿಕೊಂಡಿದೆ. ಆದರೆ, ಪ್ರಮುಖ ಉತ್ಪನ್ನಗಳನ್ನು ಭಾರತದಿಂದ ಅಮದು ಮಾಡಿಕೊಳ್ಳುತ್ತಿದೆ. ಈ ಹಿನ್ನಲೆ ದಂಡ ವಿಧಿಸಲಾಗಿದೆ ಎಂದು ಹೇಳಿಕೆಯಲ್ಲಿ ಪ್ರಕಟಿಸಿದೆ.
ನ್ಯೂಜಿಲ್ಯಾಂಡ್ ಕೃಷಿ ಚಾಲಿತ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಇದು ಅತ್ಯುತ್ತಮ ಗುಣಮಟ್ಟದ ಡೈರಿ ಉತ್ಪನ್ನವನ್ನು ರಫ್ತು ಮಾಡುತ್ತದೆ. ಇಲ್ಲಿನ ಸಮೃದ್ದ ಪಾಶ್ಚರಿಕೃತ ಬೆಣ್ಣೆ ಮತ್ತು ಹಾಲಿಗೆ ಸಾಗರೋತ್ತರ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಮಿಲ್ಕಿಯೊ ತನ್ನ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ ಎಂದು ವಾಣಿಜ್ಯ ಆಯುಕ್ತರ ವಕ್ತಾರ ವನೀಸಾ ಹೊರ್ನೆ ತಿಳಿಸಿದ್ದಾರೆ.