ಕರ್ನಾಟಕ

karnataka

ETV Bharat / international

ನಾಗಸಾಕಿ ದಿನ 2024: ಪರಮಾಣು ದಾಳಿಯ ಭೀಕರತೆ ನೆನಪಿಸುವ ಈ ದಿನದ ಮಹತ್ವ, ಇತಿಹಾಸವೇನು? - Nagasaki Day 2024 - NAGASAKI DAY 2024

ಪರಮಾಣು ಬಾಂಬ್ ದಾಳಿಯ ಭೀಕರತೆಯನ್ನು ನೆನಪಿಸುವ ನಾಗಸಾಕಿ ದಿನ 2024 ಅನ್ನು ಇಂದು ಆಚರಿಸಲಾಗುತ್ತಿದೆ.

ನಾಗಸಾಕಿ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ದೃಶ್ಯ
ನಾಗಸಾಕಿ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ದೃಶ್ಯ (IANS)

By IANS

Published : Aug 9, 2024, 2:21 PM IST

ನಾಗಸಾಕಿ ದಿನಾಚರಣೆಯ ಇತಿಹಾಸ: ನಾಗಸಾಕಿ ದಿನವನ್ನು ಪ್ರತಿವರ್ಷ ಆಗಸ್ಟ್​ 9 ರಂದು ಆಚರಿಸಲಾಗುತ್ತದೆ. ಇದು 1945 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಜಪಾನ್​ನ ನಾಗಸಾಕಿಯ ಮೇಲೆ ವಿನಾಶಕಾರಿ ಪರಮಾಣು ಬಾಂಬ್ ದಾಳಿ ನಡೆಸಿದ್ದನ್ನು ಸೂಚಿಸುವ ಗಂಭೀರ ಸಂದರ್ಭವಾಗಿದೆ. ಜಪಾನ್​ನ ಹಿರೋಷಿಮಾದ ಮೇಲೆ ಪರಮಾಣು ಬಾಂಬ್ ದಾಳಿ ನಡೆದು ಕೇವಲ ಮೂರು ದಿನಗಳ ಅಂತರದಲ್ಲಿ ನಾಗಾಸಾಕಿ ಮೇಲೆಯೂ ಪರಮಾಣು ಬಾಂಬ್ ದಾಳಿ ನಡೆಸಲಾಗಿತ್ತು. ಇದು ಇತಿಹಾಸದಲ್ಲಿ ನಡೆದ 2ನೇ ಮತ್ತು ಕೊನೆಯ ಪರಮಾಣು ಬಾಂಬ್ ದಾಳಿಯಾಗಿದೆ.

ಪರಮಾಣು ಯುದ್ಧದಿಂದ ಮಾನವ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಸ್ಮರಣಾರ್ಥ ಕಾರ್ಯಕ್ರಮಗಳು, ಶಾಂತಿ ಜಾಗರಣೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನವು ಜಾಗತಿಕ ಪರಮಾಣು ನಿಶ್ಯಸ್ತ್ರೀಕರಣ ಮತ್ತು ಶಾಂತಿಯುತ ಸಂಘರ್ಷ ಪರಿಹಾರ ತಂತ್ರಗಳನ್ನು ಉತ್ತೇಜಿಸುವ ತುರ್ತು ಅಗತ್ಯಕ್ಕೆ ಕರೆ ನೀಡುತ್ತದೆ.

ನಾಗಸಾಕಿ ದಿನ 2024:ದಿನಾಂಕ, ಮೂಲ ಮತ್ತು ಮಹತ್ವ : ಎರಡನೇ ಮಹಾಯುದ್ಧದ ಸಮಯದಲ್ಲಿ ಆಗಸ್ಟ್ 9, 1945 ರಂದು ಜಪಾನ್ ನ ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿಯ ವಾರ್ಷಿಕೋತ್ಸವವನ್ನು ನಾಗಸಾಕಿ ದಿನ ಸೂಚಿಸುತ್ತದೆ. ಆದ್ದರಿಂದ, ಇದನ್ನು ಪ್ರತಿವರ್ಷ ಆಗಸ್ಟ್ 9 ರಂದು ಆಚರಿಸಲಾಗುತ್ತದೆ.

ಈ ವರ್ಷದ ಘೋಷವಾಕ್ಯ (ಥೀಮ್): "ಮಾನವಕುಲದ ಮತ್ತು ನಮ್ಮ ಗ್ರಹದ ಭವಿಷ್ಯಕ್ಕಾಗಿ ನಾವು ಪರಮಾಣು ಶಸ್ತ್ರಾಸ್ತ್ರ ಮುಕ್ತ, ಶಾಂತಿಯುತ ಮತ್ತು ನ್ಯಾಯಯುತ ಜಗತ್ತನ್ನು ನಿರ್ಮಿಸೋಣ" ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.

ಫ್ಯಾಟ್​ಮ್ಯಾನ್​ ಸ್ಫೋಟದಲ್ಲಿ ಲಕ್ಷಾಂತರ ಜನ ಸಾವು: ಆಗಸ್ಟ್ 9, 1945 ರಂದು, ಬೊಕ್ ಸ್ಕರ್ ಎಂಬ ಅಮೆರಿಕದ ಬಿ -29 ಬಾಂಬರ್ ನಾಗಸಾಕಿಯ ಮೇಲೆ "ಫ್ಯಾಟ್ ಮ್ಯಾನ್" ಎಂಬ ಅಡ್ಡಹೆಸರಿನ ಪರಮಾಣು ಬಾಂಬ್ ಅನ್ನು ಹಾಕಿತು. ಬಾಂಬ್ ನಗರದ ಮೇಲೆ ಸ್ಫೋಟಗೊಂಡು ಅಂದಾಜು 40,000 ಜನರು ಸಾವನ್ನಪ್ಪಿದರು. ಮುಂದಿನ ಎರಡರಿಂದ ನಾಲ್ಕು ತಿಂಗಳುಗಳಲ್ಲಿ ಬಾಂಬ್ ದಾಳಿಯ ಪರಿಣಾಮಗಳಿಂದ ಮತ್ತೆ 35,000 ರಿಂದ 40,000 ಜನ ಸಾವಿಗೀಡಾದರು. ನಂತರದ ವರ್ಷಗಳಲ್ಲಿ ಗಾಯಗಳು ಮತ್ತು ವಿಕಿರಣಗಳಿಂದ ಮತ್ತೆ ಸುಮಾರು ಹತ್ತಾರು ಸಾವಿರ ಜನರು ಸಾವನ್ನಪ್ಪಿದರು. ಬಾಂಬ್ ದಾಳಿಯು ಅಪಾರ ವಿನಾಶವನ್ನು ಉಂಟುಮಾಡಿತು.

ಪರಮಾಣು ನಿಶ್ಯಸ್ತ್ರೀಕರಣದ ಮಹತ್ವ:ಹಿಬಾಕುಶಾ ಎಂದು ಕರೆಯಲ್ಪಡುವ ಬದುಕುಳಿದವರು ಭಯಾನಕ ಗಾಯಗಳು ಮತ್ತು ವಿಕಿರಣ ಕಾಯಿಲೆಯನ್ನು ಎದುರಿಸಬೇಕಾಯಿತು. ಎರಡನೇ ಮಹಾಯುದ್ಧದ ನಂತರ, ನಾಗಸಾಕಿ ಪರಮಾಣು ಯುದ್ಧದ ಭೀಕರತೆಯ ಸಂಕೇತವಾಯಿತು ಮತ್ತು ಭವಿಷ್ಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ವೇಗ ನೀಡಿತು. ಒಟ್ಟಾರೆಯಾಗಿ ಈ ದಿನವು ಪರಮಾಣು ಶಸ್ತ್ರಾಸ್ತ್ರಗಳು ಬಿಚ್ಚಿಟ್ಟ ಭಯಾನಕತೆಯ ಮಹತ್ವದ ಜ್ಞಾಪನೆಯಾಗಿದೆ. ಇದು ಶಾಂತಿ ಮತ್ತು ಪರಮಾಣು ನಿಶ್ಯಸ್ತ್ರೀಕರಣದ ಮಹತ್ವವನ್ನು ಒತ್ತಿಹೇಳುತ್ತದೆ.

ಟೋಕಿಯೊದಲ್ಲಿ ಮೌನಾಚರಣೆ: ಜಪಾನ್​ನಲ್ಲಿ ತನ್ನ ಪಶ್ಚಿಮ ನಗರ ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿಯ 79 ನೇ ವಾರ್ಷಿಕೋತ್ಸವವನ್ನು ಇಂದು (ಶುಕ್ರವಾರ) ಆಚರಿಸಲಾಯಿತು. ಟೋಕಿಯೊದಲ್ಲಿ ಸ್ಥಳೀಯ ಸಮಯ ಬೆಳಿಗ್ಗೆ 11.02 ಕ್ಕೆ ಒಂದು ಕ್ಷಣ ಮೌನ ಆಚರಿಸಲಾಯಿತು. ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವಂತೆ ನಗರದ ಮೇಯರ್ ಕರೆ ನೀಡಿದರು.

ಇದನ್ನೂ ಓದಿ : ಹಮಾಸ್​ ನೂತನ ಮುಖ್ಯಸ್ಥ ಸಿನ್ವರ್​ ಗಾಜಾದಲ್ಲಿ ಅಡಗಿರುವ ಶಂಕೆ: ಇಸ್ರೇಲ್​ನಿಂದ ತೀವ್ರ ಹುಡುಕಾಟ - Israel Hamas War

ABOUT THE AUTHOR

...view details