ಜೆರುಸಲೇಂ (ಇಸ್ರೇಲ್):ಲೆಬನಾನ್ ಮೇಲೆ ಸರಣಿ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನಾಪಡೆಗಳು ಒಬ್ಬೊಬ್ಬರಂತೆ ಹಿಜ್ಬುಲ್ಲಾ ಬಂಡುಕೋರ ನಾಯಕರನ್ನು ಹತ್ಯೆ ಮಾಡುತ್ತಿದೆ. ಎರಡು ದಿನಗಳ ಹಿಂದಷ್ಟೇ ಸಂಘಟನೆಯ ಪ್ರಮುಖ ನಾಯಕ ಹಸನ್ ನಸ್ರಲ್ಲಾ ಅವರನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದ ಬೆನ್ನಲ್ಲೇ, ಶನಿವಾರದ ದಾಳಿಯಲ್ಲಿ ಮತ್ತೊಮ್ಮೆ ಪ್ರಮುಖ ನಾಯಕನನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಹಿಜ್ಬುಲ್ಲಾ ನಾಯಕನಾದ, ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್ನನ್ನು ಬೇಟೆಯಾಡಿರುವವುದಾಗಿ ಇಸ್ರೇಲ್ ಸೇನಾಪಡೆ ಭಾನುವಾರ ಘೋಷಿಸಿದೆ. ಇದಕ್ಕೆ ಲೆಬನಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶುಕ್ರವಾರ ಬೈರುತ್‌ನಲ್ಲಿ ಬಂಡುಕೋರರ ಪ್ರಮುಖ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಲವಾರು ಹಿರಿಯ ಕಮಾಂಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ. ಪೇಜರ್‌ಗಳು ಮತ್ತು ವಾಕಿ-ಟಾಕಿಗಳಿಂದ ಹತ್ಯೆಗೀಡಾಗಿದ್ದಾರೆ. ನೂರಾರು ಕ್ಷಿಪಣಿಗಳು ಮತ್ತು ರಾಕೆಟ್ಗಳನ್ನು ಬಂಡುಕೋರರ ಪ್ರದೇಶಗಳ ಮೇಲೆ ಹಾರಿಸಲಾಗಿದೆ. ಇದರಲ್ಲಿ ಹಲವರು ಸಾವಿಗೀಡಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಹಿಜ್ಬುಲ್ಲಾ ಬಂಡುಕೋರರ ನಾಯಕನಾಗಿದ್ದ ನಬಿಲ್ ಕೌಕ್ 1980 ರ ದಶಕದಲ್ಲಿ ಸಂಘಟನೆಯ ಸದಸ್ಯನಾಗಿದ್ದ. ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾದ ಮಿಲಿಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ. ಅಮೆರಿಕ ಈತನ ಮೇಲೆ 2020 ರಲ್ಲಿ ನಿರ್ಬಂಧಗಳನ್ನು ಹೇರಿತ್ತು.
ಇದನ್ನೂ ಓದಿ:ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಖಂಡಿಸಿ ಚುನಾವಣಾ ಪ್ರಚಾರ ನಿಲ್ಲಿಸಿದ ಮೆಹಬೂಬಾ ಮುಫ್ತಿ - Mehbooba Mufti