ಕರ್ನಾಟಕ

karnataka

ETV Bharat / international

ಭಾರತ ಸೂಪರ್ ಪವರ್ ಆಗೋ ಗುರಿ ಹೊಂದಿದೆ; ನಾವು ದಿವಾಳಿತನ ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್​​ ಪ್ರತಿಪಕ್ಷ ನಾಯಕ - Maulana Fazlur Rehman

''ಭಾರತ ಸೂಪರ್ ಪವರ್ ಆಗುವ ಗುರಿ ಹೊಂದಿದೆ. ಆದರೆ, ನಾವು ದಿವಾಳಿತನ ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ'' ಎಂದು ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಕಿಡಿಕಾರಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

Maulana Fazlur Rehman PAKISTANI LEADER OF OPPOSITION  India superpower  PAKISTAN  India
ಭಾರತ ಸೂಪರ್ ಪವರ್ ಆಗುವ ಗುರಿ ಹೊಂದಿದೆ, ಆದರೆ ನಾವು ದಿವಾಳಿತನ ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ತಾನದ ವಿರೋಧ ಪಕ್ಷದ ನಾಯಕ

By ANI

Published : Apr 30, 2024, 11:35 AM IST

ಇಸ್ಲಾಮಾಬಾದ್ (ಪಾಕಿಸ್ತಾನ):"ಭಾರತವು ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ. ಆದರೆ, ನಾವು ದಿವಾಳಿತನವನ್ನು ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ. ಇದಕ್ಕೆ ಯಾರು ಹೊಣೆ?" ಎಂದು JUI-F ಮುಖ್ಯಸ್ಥ, ಪಾಕಿಸ್ತಾನಿ ವಿರೋಧ ಪಕ್ಷದ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಕಿಡಿಕಾರಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

''ಚುನಾಯಿತರು ಅಧಿಕಾರಿಗಳನ್ನು ಕೇವಲ ಕೈಗೊಂಬೆಗಳನ್ನಾಗಿಸಿ, ತೆರೆಮರೆಯಲ್ಲಿ ನಿರ್ಧಾರಗಳನ್ನು ರೂಪಿಸುವ ಕಾಣದ ಶಕ್ತಿಗಳು ರಾಷ್ಟ್ರದ ಸಂಕಟಕ್ಕೆ ಕಾರಣ. ಗೋಡೆಗಳ ಹಿಂದೆ ನಮ್ಮನ್ನು ನಿಯಂತ್ರಿಸುವ ಶಕ್ತಿಗಳಿವೆ. ಮತ್ತು ನಾವು ಕೇವಲ ಕೈಗೊಂಬೆಗಳಾಗಿದ್ದಾಗ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂಸತ್ತಿನ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ ರೆಹಮಾನ್ ಅವರು, ''ಸಂಸತ್ತಿನ ಸದಸ್ಯರು ತತ್ವಗಳನ್ನು ತ್ಯಜಿಸಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ಮಾರಾಟ ಮಾಡುತ್ತಿದ್ದಾರೆ'' ಎಂದು ARY ನ್ಯೂಸ್ ವರದಿ ಮಾಡಿದೆ.

ಮೌಲಾನಾ ಫಜ್ಲುರ್ ರೆಹಮಾನ್ ಪ್ರಶ್ನೆ:ಪಾಕಿಸ್ತಾನದಲ್ಲಿ ಪ್ರಾತಿನಿಧ್ಯದ ಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ''ಸಂಸತ್ತು ನಿಜವಾಗಿಯೂ ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆಯೇ? ಅರಮನೆಗಳಲ್ಲಿ ಸರ್ಕಾರಗಳು ರಚನೆಯಾಗುತ್ತವೆ. ಮತ್ತು ಅಧಿಕಾರಶಾಹಿಗಳು ಪ್ರಧಾನ ಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುತ್ತಾರೆ'' ಎಂದು ಆರೋಪಿಸಿದ ಅವರು, "ನಾವು ಎಷ್ಟು ದಿನ ಈ ವ್ಯವಸ್ಥೆ ಜೊತೆಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ? ಶಾಸಕರಾಗಿ ಆಯ್ಕೆಯಾಗಲು ನಾವು ಬಾಹ್ಯ ಶಕ್ತಿಗಳ ಸಹಾಯವನ್ನು ಎಷ್ಟು ದಿನ ಪಡೆಯಬೇಕಾಗುತ್ತದೆ?" ಎಂದು ಮೌಲಾನಾ ಫಜ್ಲುರ್ ರೆಹಮಾನ್ ಪ್ರಶ್ನಿಸಿದ್ದಾರೆ.

2018 ಮತ್ತು 2024 ರ ಎರಡೂ ಚುನಾವಣೆಗಳಲ್ಲಿ ಚುನಾವಣಾ ರಿಗ್ಗಿಂಗ್ ಅನ್ನು ಖಂಡಿಸಿದರು. ಉದ್ದೇಶಪೂರ್ವಕವಾಗಿ ನಕಲಿ ಪ್ರತಿನಿಧಿಗಳು ಅಧಿಕಾರಕ್ಕೆ ಏರಿರುವುದು ಸರಿಯಲ್ಲ ಎಂದು ಅಭದ್ರತೆಯಿಂದ ಜರ್ಜರಿತವಾಗಿರುವ ರಾಷ್ಟ್ರದಲ್ಲಿ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದರು. ಸ್ವತಂತ್ರವಾಗಿ ಶಾಸನ ಜಾರಿಗೊಳಿಸಲು ಶಾಸಕರ ಶಕ್ತಿಹೀನತೆಯ ಬಗ್ಗೆ ರೆಹಮಾನ್ ವಿಷಾದಿಸಿದರು ಎಂದು ARY ನ್ಯೂಸ್ ವರದಿ ತಿಳಿಸಿದೆ.

ಪಾಕಿಸ್ಥಾನದ ಪ್ರಗತಿಗೆ ಅಡ್ಡಿ- ರೆಹಮಾನ್:"ಸೋತವರು ಮತ್ತು ಗೆದ್ದವರು ಇಬ್ಬರೂ ತೃಪ್ತರಾಗಿಲ್ಲದ ಕಾರಣಕ್ಕೆ ನ್ಯಾಷನಲ್​ ಅಸೆಂಬ್ಲಿಯಲ್ಲಿ ಕುಳಿತುಕೊಳ್ಳುವಾಗ ನಮ್ಮ ಆತ್ಮಸಾಕ್ಷಿಯು ಹೇಗೆ ಸ್ಪಷ್ಟವಾಗುತ್ತದೆ" ಎಂದು ಪ್ರಶ್ನಿಸಿದರು. ಪ್ರಸ್ತುತ ಅಸೆಂಬ್ಲಿಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ ರೆಹಮಾನ್ ಅವರು, ಪಾಕಿಸ್ತಾನದ ಸಂಸ್ಥಾಪಕರ ತತ್ವಗಳಿಗೆ ನಿಷ್ಠೆ ಇಲ್ಲದ ವ್ಯಕ್ತಿಗಳ ಉಪಸ್ಥಿತಿಗೆ ವಿಷಾದಿಸಿದರು. ಪ್ರತಿ ಪಾಕಿಸ್ತಾನಿಯ ಮೇಲೆ ರಾಷ್ಟ್ರೀಯ ಸಾಲದ ಹೊರೆಯನ್ನು ಎತ್ತಿ ತೋರಿಸಿದರು. ಜೊತೆಗೆ ರಾಷ್ಟ್ರವನ್ನು ಕಾಡುತ್ತಿರುವ ನಿಶ್ಚಲತೆಯನ್ನು ತೀವ್ರವಾಗಿ ಖಂಡಿಸಿದರು. ಅಂತಹ ಸಂದರ್ಭಗಳು ಪ್ರಗತಿಗೆ ಅಡ್ಡಿಯಾಗುತ್ತವೆ ಎಂದು ರೆಹಮಾನ್ ಪ್ರತಿಪಾದಿಸಿದರು.

"ನಾವು ನಮ್ಮ ದೇಶವನ್ನು ನಿಶ್ಚಲತೆಯ ಬಲಿಪಶು ಮಾಡಿದ್ದೇವೆ. ಅಂತಹ ರಾಷ್ಟ್ರಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲ" ಎಂದು ಅವರು, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡಬೇಕು. ಇದು ಪ್ರಜಾಪ್ರಭುತ್ವ ಹಕ್ಕುಗಳ ಮಹತ್ವವನ್ನು ಒತ್ತಿಹೇಳುತ್ತದೆ'' ಎಂದು ರೆಹಮಾನ್ ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಇದನ್ನೂ ಓದಿ:ರಿಯಾಧ್​ನಲ್ಲಿ ಐಎಂಎಫ್​ ಮುಖ್ಯಸ್ಥೆಯೊಂದಿಗೆ ಪಾಕ್ ಪ್ರಧಾನಿ ಭೇಟಿ: ಮತ್ತಷ್ಟು ಸಾಲ ನೀಡುವಂತೆ ಕೋರಿಕೆ - Shehbaz Sharif

ABOUT THE AUTHOR

...view details