ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಭೀಕರ ಹೀಟ್​ವೇವ್​: ಕರಾಚಿಯಲ್ಲಿ 36 ಜನ ಸಾವು - Heat Wave In Pakistan - HEAT WAVE IN PAKISTAN

ಪಾಕಿಸ್ತಾನದ ಕರಾಚಿಯಲ್ಲಿ ಹೀಟ್​ ವೇವ್​ನಿಂದಾಗಿ ಕನಿಷ್ಠ 36 ಜನ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದಲ್ಲಿ ಭೀಕರ ಹೀಟ್​ವೇವ್​
ಪಾಕಿಸ್ತಾನದಲ್ಲಿ ಭೀಕರ ಹೀಟ್​ವೇವ್​ (IANS)

By ETV Bharat Karnataka Team

Published : Jun 26, 2024, 4:16 PM IST

ಕರಾಚಿ: ಪಾಕಿಸ್ತಾನದ ಹಲವಾರು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿದೆ. ಕಳೆದ ಎರಡು ದಿನಗಳಲ್ಲಿ ಅನೇಕ ನಾಗರಿಕರು ಮೃತಪಟ್ಟಿದ್ಧಾರೆ. ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಬಿಸಿಲಿನ ತೀವ್ರತೆ ವಿಪರೀತವಾಗಿದೆ. ನಗರದ ಹಲವೆಡೆ ಹೀಟ್​ ವೇವ್​ ತಾಳಲಾಗದೆ ಮೃತಪಟ್ಟವರ ಶವಗಳು ಕಂಡುಬರುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಈವರೆಗೆ ಇಂಥ 36 ಶವಗಳು ಸಿಕ್ಕಿವೆ. ಅಪರಿಚಿತ ಶವಗಳು ಪತ್ತೆಯಾದ ನಂತರ ಸಿಂಧ್ ಪ್ರಾಂತೀಯ ಸರ್ಕಾರವು ಕರಾಚಿಯಾದ್ಯಂತ ಕನಿಷ್ಠ 77 ಬಿಸಿಲು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ.

ಭಾನುವಾರ, ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ಕನಿಷ್ಠ 10, 15 ಮತ್ತು 11 ಶವಗಳು ಪತ್ತೆಯಾಗಿರುವುದನ್ನು ಕಂಡು ಸ್ಥಳೀಯ ಆಡಳಿತವೇ ಆಘಾತಕ್ಕೊಳಗಾಗಿದೆ. ಕಲ್ಯಾಣ ಸಂಸ್ಥೆಗಳು ಶವಗಳನ್ನು ಪತ್ತೆಹಚ್ಚಿದ್ದು, ಈ ಸಂಸ್ಥೆಗಳ ಆಂಬ್ಯುಲೆನ್ಸ್​ಗಳು ಶವಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಲೇ ಇದ್ದವು.

ಈಧಿ ಫೌಂಡೇಶನ್ ಪ್ರತಿನಿಧಿಯೊಬ್ಬರ ಪ್ರಕಾರ, ಹೆಚ್ಚಿನ ಮೃತದೇಹಗಳು ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾದ ಜನರದ್ದಾಗಿವೆ. ಮಾದಕ ವಸ್ತುಗಳ ಸೇವನೆ ಮತ್ತು ಹೀಟ್​ ವೇವ್​ ಎರಡರ ಸಂಯೋಜನೆಯು ಮಾರಣಾಂತಿಕವಾಗಿದೆ ಎಂದು ಅವರು ಹೇಳಿದರು. "ಮೃತ ವ್ಯಕ್ತಿಗಳಲ್ಲಿ ಅನೇಕರು ಸಾವಿನ ಸಮಯದಲ್ಲಿ ಮಾದಕವಸ್ತುಗಳ ಪ್ರಭಾವದಲ್ಲಿದ್ದರು ಎಂದು ವರದಿಯಾಗಿದೆ. ಇದು ತೀವ್ರ ಶಾಖ ಮತ್ತು ಮಾದಕ ದ್ರವ್ಯಗಳ ದುರುಪಯೋಗದ ಮಾರಕ ಸಂಯೋಜನೆಯಾಗಿದೆ "ಎಂದು ಈಧಿ ಫೌಂಡೇಶನ್ ಪ್ರತಿನಿಧಿ ಅಜೀಮ್ ಖಾನ್ ಹೇಳಿದರು.

ಮೃತ ವ್ಯಕ್ತಿಗಳಲ್ಲಿ ಹೆಚ್ಚಿನವರ ಗುರುತು ಈಗಲೂ ಪತ್ತೆಯಾಗಿಲ್ಲ ಅಥವಾ ಇವರ ಕುಟುಂಬದ ಯಾವುದೇ ಸದಸ್ಯರು ಶವಗಳನ್ನು ಪಡೆಯಲು ಬಂದಿಲ್ಲ. ಕರಾಚಿಯಾದ್ಯಂತದ ಆಸ್ಪತ್ರೆಗಳಲ್ಲಿ ಪ್ರತಿದಿನ ಭಾರಿ ಪ್ರಮಾಣದ ರೋಗಿಗಳು ದಾಖಲಾಗುತ್ತಿದ್ದಾರೆ. ಕರಾಚಿಯ ಜಿನ್ನಾ ಆಸ್ಪತ್ರೆಯ ಮೂಲಗಳ ಪ್ರಕಾರ, ಶಾಖದ ಅಲೆಗೆ ಸಂಬಂಧಿಸಿದ ಅನಾರೋಗ್ಯಕ್ಕೀಡಾದ ನೂರಾರು ರೋಗಿಗಳಿಗೆ ಪ್ರತಿದಿನ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಪಾಕಿಸ್ತಾನದ ಹವಾಮಾನವು ಜಾಗತಿಕ ಸರಾಸರಿಗಿಂತ ವೇಗವಾಗಿ ಬಿಸಿಯಾಗುತ್ತಿದೆ. 1986-2005ರ ಬೇಸ್ ಲೈನ್​ಗಿಂತ 2090ರ ವೇಳೆಗೆ 2.3 ರಿಂದ 8.8 ಡಿಗ್ರಿ ಫ್ಯಾರನ್​ ಹೀಟ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆಯ ವಿಶ್ವ ಬ್ಯಾಂಕ್ ತಜ್ಞರ ಸಮಿತಿ ತಿಳಿಸಿದೆ. ಕರಾಚಿ ಮತ್ತು ಸಿಂಧ್ ಪ್ರಾಂತ್ಯದಾದ್ಯಂತದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸಿದ್ಧತೆಗಳನ್ನು ಹೆಚ್ಚಿಸಲಾಗಿದ್ದು, ನಗರದಾದ್ಯಂತ ಸ್ಥಾಪಿಸಲಾದ 77 ಪರಿಹಾರ ಕೇಂದ್ರಗಳ ಮೂಲಕ ಆಸ್ಪತ್ರೆಗಳಿಗೆ ರೋಗಿಗಳ ಹರಿವನ್ನು ತಗ್ಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: 14 ವರ್ಷಗಳ ಬಳಿಕ ಬಂಧನದಿಂದ ಮುಕ್ತಿ ಪಡೆದ ಜೂಲಿಯನ್ ಅಸ್ಸಾಂಜೆ ತಾಯ್ನಾಡಿಗೆ ವಾಪಸ್​ - Julian Assange Released

ABOUT THE AUTHOR

...view details