ನವದೆಹಲಿ: ವಿಶ್ವ ಸ್ತನ್ಯಪಾನ ಸಪ್ತಾಹವು ಆಗಸ್ಟ್ 1ರಿಂದ 7ರವರೆಗೆ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವುದು. ಈ ಮೂಲಕ ತಿಂಗಳೊಳಗಿನ ಮಕ್ಕಳಿಗೆ ಸ್ತನ್ಯಪಾನದ ಅಗತ್ಯತೆ ಮತ್ತು ಅದನ್ನು ನೀಡಲು ತಾಯಂದಿರಿಗೆ ಉತ್ತೇಜಿಸಲಾಗುವುದು.
ಸಪ್ತಾಹದ ಹಿನ್ನಲೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಯುನಿಸೆಫ್ ಸೈರಾ ಲಿಯೊನ್, 'ಆರಂಭಿಕ ಬಾಲ್ಯದ ಅಭಿವೃದ್ಧಿಯಲ್ಲಿ ಸ್ತನ್ಯಪಾನವೂ ಪ್ರಮುಖವಾಗಿದೆ. ದೇಶದ ಪ್ರಗತಿ ಹೊರತಾಗಿ ಮಕ್ಕಳ ಸ್ತನ್ಯಪಾನವೂ ಇಳಿಕೆಯಾಗುತ್ತಿದೆ. 2030ರ ಹೊತ್ತಿಗೆ ಒಟ್ಟಾಗಿ ಈ ಅಂತರವನ್ನು ಕಡಿಮೆ ಮಾಡಿ ಶೇ 70ರ ದರದಲ್ಲಿ ಸಾಧನೆ ಮಾಡಬೇಕಿದೆ' ಎಂದಿದ್ದಾರೆ.
'ಸ್ತನ್ಯಪಾನವೂ ಮಗುವಿನ ಆರೋಗ್ಯ ಮತ್ತು ಉಳಿಯುವಿಕೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಆದಾಗ್ಯೂ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ವಿರುದ್ಧವಾಗಿ ಆರು ತಿಂಗಳೊಳಗಿನ ಅರ್ಧಕ್ಕಿಂತ ಹೆಚ್ಚಿನ ಮಕ್ಕಳು ಕಡಿಮೆ ಸ್ತನ್ಯಪಾನಕ್ಕೆ ಒಳಗಾಗುತ್ತಿದ್ದಾರೆ' ಎಂದು ಡಬ್ಲ್ಯೂಎಚ್ಒ ತಿಳಿಸಿದೆ.
ಸ್ತನ್ಯಪಾನವೂ ಮಕ್ಕಳಿಗೆ ಆದರ್ಶವಾಗಿರುವ ಆಹಾರವಾಗಿದೆ. ಇದು ಸುರಕ್ಷಿತ, ಶುದ್ಧ ಮತ್ತು ಮಗುವಿಗೆ ಸಾಮಾನ್ಯ ಅನಾರೋಗ್ಯದ ವಿರುದ್ಧ ಹೋರಾಡಲು ಪ್ರತಿರಕ್ಷಣೆ ಒದಗಿಸುತ್ತದೆ. ಸ್ತನ್ಯಪಾನವೂ ಮಗುವಿಗೆ ಬೇಕಾದ ಶಕ್ತಿ ಮತ್ತು ಪೋಷಕಾಂಶವನ್ನು ನೀಡುತ್ತದೆ. ಇದು ಮಗುವಿನ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯಗಳನ್ನು ಮತ್ತು ಮಗುವಿನ ಎರಡನೇ ವರ್ಷದಲ್ಲಿ ಮೂರನೇ ಒಂದು ಭಾಗದಷ್ಟು ಶಕ್ತಿಯನ್ನು ಒದಗಿಸುತ್ತದೆ.
ಸ್ತನ್ಯಪಾನಕ್ಕೆ ಒಳಗಾದ ಮಕ್ಕಳು ಬುದ್ಧಿವಂತಿಕ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸಿದ್ದಾರೆ. ನಂತರ ಜೀವನದಲ್ಲಿ ಅಧಿಕ ತೂಕ, ಸ್ಥೂಲಕಾಯ ಮತ್ತು ಮಧುಮೇಹದಿಂದ ಬಳಲುವ ಸಾಧ್ಯತೆ ಕಡಿಮೆ ಇದೆ ಎಂದಿದೆ.
ಸ್ತನ್ಯಪಾನವನ್ನು ಮಾಡುವ ಮಹಿಳೆ ಕೂಡ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಇದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ಅನುಚಿತ ಎದೆ ಹಾಲಿನ ಪೂರಕಗಳು ಸ್ತನ್ಯಪಾನದ ದರ ಮತ್ತು ಅವಧಿಯನ್ನು ಪ್ರಯತ್ನವನ್ನು ದುರ್ಬಲಗೊಳಿಸುತ್ತಿದೆ ಎಂದು ಉಲ್ಲೇಖಿಸಿದೆ.
ಯುನಿಸೆಫ್ನ ಉಜ್ಜಬೆಕಿಸ್ತಾನ್ ಪೋಸ್ಟ್ನಲ್ಲಿ, ಪ್ರತಿವರ್ಷ ಆಗಸ್ಟ್ ಮೊದಲ ವಾರವನ್ನು ಸ್ತನ್ಯಪಾನದ ಸಪ್ತಾಹವಾಗಿ ಆಚರಿಸಲಾಗುವುದು. ಈ ಹಿನ್ನಲೆ ಡಬ್ಲ್ಯೂಬಿಡಬ್ಲ್ಯೂ, ಯುನಿಸೆಫ್ ಯುಜೆಡ್ ಬಿ ಮತ್ತು ಎಸ್ಎಸ್ವಿ ಯುಜೆಡ್ 'ಅಂತರ ಕೊನೆಗೊಳಿಸಿ, ಸ್ತನ್ಯಪಾನದ ಎಲ್ಲರ ಬೆಂಬಲ' ಎಂಬ ವಿಷಯದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದೆ ಎಂದು ತಿಳಿಸಿದೆ.
ಇದೇ ರೀತಿಯಲ್ಲಿ ರಾಷ್ಟ್ರೀಯ ಮಕ್ಕಳ ಅಭಿವೃದ್ಧಿ ಏಜೆನ್ಸಿ, ರುವಾಂಡಾ, ಎಕ್ಸ್‌ನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಹಿನ್ನೆಲೆ ಸ್ತನ್ಯಪಾನ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಮಾಧ್ಯಮ ಸಿಬ್ಬಂದಿ ಮತ್ತು ವೈದ್ಯರ ಪಾತ್ರವನ್ನು ವಿವರಿಸಿದೆ.
2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಈ ಸ್ತನ್ಯಪಾನದ ಸಪ್ತಾಹದ ಆಚರಣೆ ಕುರಿತು ನಿರ್ಣಯ ನಡೆಸಲಾಯಿತು. ಇದರಲ್ಲಿ ಪ್ರಮುಖ ಆರೋಗ್ಯಯುತ ತಂತ್ರಗಳನ್ನು ಉತ್ತೇಜಿಸಲಾಯಿತು. ಪ್ರತಿ ವರ್ಷ ವಿಭಿನ್ನ ಧ್ಯೇಯದೊಂದಿಗೆ ಈ ದಿನಾಚರಣೆ ಮಾಡಲಾಗುತ್ತಿದೆ. ಇದರ ಹಿಂದಿನ ಉದ್ದೇಶ ಸಮುದಾಯ ಸೇರಿದಂತೆ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಸರ್ಕಾರದ ಕಾನೂನು ಮತ್ತು ನೀತಿಯಲ್ಲಿನ ಅಗತ್ಯ ರಕ್ಷಣೆಗೆ ಜೊತೆಗೆ ಸ್ತನ್ಯಪಾನಕ್ಕೆ ಉತ್ತೇಜಿಸುವ ಪರಿಸರ ನಿರ್ಮಾಣ ಮಾಡುವುದು. ಜೊತೆಗೆ ಸ್ತನ್ಯಪಾನದ ಪ್ರಯೋಜನ ಮತ್ತು ತಂತ್ರಗಳ ಮಾಹಿತಿ ಹಂಚುವುದಾಗಿದೆ ಎಂದು ಡಬ್ಲ್ಯೂಹೆಚ್ಒ ತಿಳಿಸಿದೆ.
ಇದನ್ನೂ ಓದಿ: ಎಚ್ಐವಿ ಸೋಂಕಿತ ತಾಯಂದಿರು ಮಗುವಿಗೆ ನೀಡಬಹುದು ಸ್ತನ್ಯಪಾನ; ಅಮೆರಿಕ ಮಕ್ಕಳ ತಜ್ಞರ ಗುಂಪಿನ ಶಿಫಾರಸು