ನವದೆಹಲಿ: ಗರ್ಭಕಂಠ ಕ್ಯಾನ್ಸರ್ನ ಮೊದಲ ಮುನ್ನೆಚ್ಚರಿಕೆ ಎಂದರೆ ಅದು ಎಚ್ಪಿವಿ ಲಸಿಕೆ ಆಗಿದೆ. 9 ರಿಂದ 14 ವರ್ಷದೊಳಗೆ ಈ ಲಸಿಕೆಯನ್ನು ನೀಡುವುದರಿಂದ ಈ ಅಪಾಯವನ್ನು ತಡೆಯಬಹುದಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಲಸಿಕೆ ತಪ್ಪಿಸಿದಲ್ಲಿ ಯಾವ ವಯಸ್ಸಿನಲ್ಲಿ ಲಸಿಕೆ ಪಡೆಯಬಹುದು. ಹೇಗೆ ಈ ಗರ್ಭಕಂಠ ಕ್ಯಾನ್ಸರ್ನಿಂದ ರಕ್ಷಣೆ ಪಡೆಯಬಹುದು ಎಂಬ ಕುರಿತು ವೈದ್ಯರು ಸಲಹೆ ನೀಡಿದ್ದಾರೆ.
ಹ್ಯೂಮನ್ ಪ್ಯೂಪಿಲೋವೈರಸ್ (ಎಚ್ಪಿವಿ) ಗರ್ಭಕಂಠಕ್ಕೆ ಕಾರಣವಾಗುವ ಸಾಮಾನ್ಯ ಮತ್ತು ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ಸೋಂಕು ಆಗಿದೆ. ಭಾರತದಲ್ಲಿ 5 ರಲ್ಲಿ 1 ಅಂದರೆ ಶೇ 21ರಷ್ಟು ಮಂದಿ ಈ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೊಂದಿದ್ದಾರೆ ಎಂದು ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ವರದಿ ತಿಳಿಸಿದತು. ಜಾಗತಿಕವಾಗಿ ಈ ಗರ್ಭಕಂಠದ ಕ್ಯಾನ್ಸರ್ನಿಂದಾಗಿ ನಾಲ್ಕರಲ್ಲಿ ಒಬ್ಬರು ಅಥವಾ ಶೇ 23ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ.
ಎಚ್ಪಿವಿ ಲಸಿಕೆಯನ್ನು 9 ರಿಂದ 14 ವರ್ಷದ ಮಕ್ಕಳಿಗೆ ನೀಡಿದಲ್ಲಿ ಅದು ಪರಿಣಾಮಕಾರಿಯಾಗಿರುತ್ತದೆ. ಆದರೂ ಈ ಲಸಿಕೆಯನ್ನೂ ಮಹಿಳೆಯರಿಗೆ 45ವರ್ಷದವರೆಗೆ ಶಿಫಾರಸು ಮಾಡಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.
ಹೆಣ್ಣು ಮಕ್ಕಳು 9 ರಿಂದ 26 ವರ್ಷದೊಳಗೆ ಈ ಗರ್ಭಕಂಠದ ಲಸಿಕೆ ಪಡೆಯುವುದು ಹೆಚ್ಚು ನಿರ್ಣಾಯಕವಾಗಿದೆ. ಈ ಲಸಿಕೆ ಎಚ್ಪಿವಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಆದಾಗ್ಯೂ, ಈ ಲಸಿಕೆ ಪಡೆಯದವರು 26 ಮತ್ತು 45 ವರ್ಷದೊಳಗೆ ಇದರ ಪ್ರಯೋಜನ ಪಡೆಯಬಹುದು ಎಂದು ಗುರುಗ್ರಾಮದ ಕ್ಲೌಡ್ನೈನ್ ಸ್ತ್ರೀರೋಗ ತಜ್ಞೆ ಡಾ ಚೇತ್ನಾ ಜೈನ್ ತಿಳಿಸಿದ್ದಾರೆ.