ಹೈದರಾಬಾದ್:ದೇಹವನ್ನು ಆರೋಗ್ಯಕರವಾಗಿ ಮತ್ತು ಲವವವಿಕೆಯಿಂದ ಇರುವಂತೆ ಮಾಡಲು ಸ್ನಾನ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಸ್ನಾನ ಮಾಡುವುದರಿಂದ ಮನಸ್ಸು ನಿರಾಳವಾಗುವುದಲ್ಲದೆ, ದೇಹದ ಆಯಾಸ ದೂರವಾಗುತ್ತದೆ. ಇದರಿಂದಗಾಗಿ ಕೆಲವರು ಬೆಳಗ್ಗೆ ಸ್ನಾನ ಮಾಡುತ್ತಾರೆ ಮತ್ತು ಇನ್ನೂ ಕೆಲವರು ರಾತ್ರಿ ಸ್ನಾನ ಮಾಡಿದ ನಂತರ ಮಲಗಲು ಇಷ್ಟಪಡುತ್ತಾರೆ.
ಹೆಚ್ಚಿನ ಜನರು ದಿನಕ್ಕೆ ಒಮ್ಮೆ ಸ್ನಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸುತ್ತಾರೆ. ಆದರೆ, ಕೆಲವರು ದಿನಕ್ಕೆ 2 ರಿಂದ 3 ಬಾರಿ ಸ್ನಾನ ಮಾಡುತ್ತಾರೆ. ದೇಹದ ಆರೋಗ್ಯಕ್ಕಾಗಿ ಯಾವ ರೀತಿಯ ನೀರಿನಿಂದ ಮತ್ತು ಎಷ್ಟು ಬಾರಿ ಸ್ನಾನ ಮಾಡಬೇಕು ಎಂದು ನಿಮಗೆ ತಿಳಿದಿದೆಯೇ? ಈ ಕುರಿತು ನಿಮಗೆ ತಿಳಿದಿಲ್ಲವೆಂದರೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವ್ ನೀಡುತ್ತೇವೆ.
ವೈದ್ಯರು, ತಜ್ಞರು ತಿಳಿಸುವುದೇನು:ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ, ನಮ್ಮ ದೇಹದಲ್ಲಿ ಕೆಲವು ನೈಸರ್ಗಿಕ ತೈಲಗಳು ಚರ್ಮವನ್ನು ನಯ ಮತ್ತು ಮೃದುವಾಗಿಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿದರೆ, ಈ ನೈಸರ್ಗಿಕ ತೈಲಗಳು ದೇಹದಿಂದ ಹೊರಬರುತ್ತವೆ ಮತ್ತು ಚರ್ಮವು ಒಣಗುತ್ತದೆ. ತಜ್ಞರ ಪ್ರಕಾರ, ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಮತ್ತು ಬೇಸಿಗೆಯಲ್ಲಿ ತಂಪಾದ ನೀರಿನಿಂದ ಸ್ನಾನ ಮಾಡಬಾರದು ಎಂದು ಹೇಳುತ್ತಾರೆ.
ವಾಸ್ತವವಾಗಿ, ಮಳೆಗಾಲ ಪ್ರಾರಂಭವಾದ ತಕ್ಷಣ, ಜನರಲ್ಲಿ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರ ಸಾಮಾನ್ಯ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಹಲವಾರು ಚರ್ಮದ ಸಮಸ್ಯೆಗಳು ಕಂಡುಬರುತ್ತವೆ. ಇದು ಒಣ ಚರ್ಮ, ಸೋರಿಯಾಸಿಸ್, ಡರ್ಮಟೈಟಿಸ್, ಬಿಳಿ ಚುಕ್ಕೆಗಳು, ಕೆಂಪು ದದ್ದುಗಳು ಮತ್ತು ಇತರ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.
ಚರ್ಮ ವಿಭಾಗದ ಹೆಚ್‌ಒಡಿ ಡಾ. ಮೃತ್ಯುಂಜಯ್ ಸಿಂಗ್ ಮತ್ತು ಹಲವು ತಜ್ಞರ ಪ್ರಕಾರ, ಚಳಿಗಾಲದಲ್ಲಿ ಬಿಸಿ ನೀರಿನೊಂದಿಗೆ ಸ್ನಾನ ಮಾಡಿದರೆ ಚರ್ಮವು ಸೂಕ್ಷ್ಮವಾಗುತ್ತದೆ. ಆದ್ದರಿಂದ ಹೆಚ್ಚು ಬಿಸಿ ನೀರಿನೊಂದಿಗೆ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಅದೇ ಸಮಯದಲ್ಲಿ ಬೇಸಿಗೆಯಲ್ಲಿಯೂ ಸಹ ತುಂಬಾ ತಣ್ಣನೆಯ ನೀರಿನಿಂದ ಸ್ನಾನ ಮಾಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ನೀವು ಉಗುರು ಬೆಚ್ಚಗಿನ ನೀರು ಅಥವಾ ಕೋಣೆಯ ಉಷ್ಣಾಂಶದಲ್ಲಿ ಇರಿಸಲಾದ ಸ್ವಲ್ಪ ಬಿಸಿಯಿರುವ ನೀರಿನಿಂದ ಸ್ನಾನ ಮಾಡಿದರೆ ಸಾಕು ಅಂತಾರೆ.
ಸ್ನಾನಕ್ಕೆ ಯಾವ ನೀರು ಹೆಚ್ಚು ಪ್ರಯೋಜನಕಾರಿ:ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇದಲ್ಲದೆ, ದೇಹದ ರಕ್ತ ಪರಿಚಲನೆಯು ಹೆಚ್ಚಾಗುತ್ತದೆ. ಮತ್ತು ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳು ಸಹ ಬರುವುದಿಲ್ಲ. ತಮ್ಮ ಸ್ನಾಯುಗಳಲ್ಲಿ ಸಾಕಷ್ಟು ಬಿಗಿತ ಅಥವಾ ಒತ್ತಡವನ್ನು ಅನುಭವಿಸುವ ಜನರಿಗೆ ಬಿಸಿ ನೀರಿನೊಂದಿಗೆ ಸ್ನಾನ ಮಾಡುವುದು ಉತ್ತಮವಾಗಿದೆ. ಏಕೆಂದರೆ, ಇದು ಬಿಗಿಯಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ಚಡಪಡಿಕೆ ಕಡಿಮೆಯಾಗುತ್ತದೆ.