ನವದೆಹಲಿ:ಬಾಲಿವುಡ್ನ ಗಾಯಕಿ ಅಲ್ಕಾ ಯಾಗ್ನಿಕ್ ತಾವು ಅಪರೂಪದ ಶ್ರವಣ ದೋಷದ ಸಮಸ್ಯೆಗೆ ಒಳಗಾಗಿರುವುದಾಗಿ ದೃಢಪಡಿಸಿದ್ದಾರೆ. ವೈರಲ್ ಸೋಂಕಿನಿಂದ ಈ ರೀತಿ ಸಮಸ್ಯೆಗೆ ಒಳಗಾಗಿದ್ದು, ತಮಗೆ ಹಠಾತ್ ಕಿವುಡುತನಕ್ಕೆ ಗುರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಾದ್ರೆ ಈ ಅಪರೂಪದ ಸಂವೇದನಾ ಶ್ರವಣ ದೋಷ (rare sensory hearing loss) ಎಂದರೇನು? ಇದಕ್ಕೆ ಕಾರಣವೇನು ಎಂಬ ಕುರಿತ ತಜ್ಞರ ಮಾತು ಇಲ್ಲಿದೆ.
ಕಿವಿಯ ಒಳಾಂಗಣದಲ್ಲಿ ಆಗುವ ಶ್ರವಣ ದೋಷ ಅಥವಾ ಕಿವಿಯಿಂದ ಮಿದುಳಿಗೆ ಶಬ್ಧವನ್ನು ಸಾಗಿಸುವ ನರಗಳಿಂದ ಉಂಟಾಗುವ ದೋಷ ಇದಾಗಿದೆ
ಈ ಕುರಿತು ಮಾತನಾಡಿರುವ ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯ ಇಎನ್ಟಿ ವಿಭಾಗದ ಉಪಾಧ್ಯಕ್ಷರಾಗಿರುವ ಡಾ ಮನೀಷ್ ಮುಂಜಲ್, ಧಿಡೀರ್ ಸಂವೇದನಾ ಶ್ರವಣ ದೋಷವು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ. ಇದು ಹೆಚ್ಚ ಆಕ್ರಮಣಕಾರಿಯಾಗಿದ್ದಲ್ಲಿ 48 ರಿಂದ 72ಗಂಟೆಯೊಳಗೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಗುಣಪಡಿಸಲಾಗದ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.
ಕಿವಿಯ ಒಳಾಂಗವಾಗಿರುವ ಕೊಕ್ಲಿಯಾದ ಸಮಸ್ಯೆ ಇದಾಗಿದೆ. ಕೂದಲಿನ ಕೋಶಗಳಿಗೆ ಹಾನಿಯಾಗುವುದರಿಂದ ಇದು ಸಂಭವಿಸುತ್ತದೆ ಎಂದಿದ್ದಾರೆ. ಹೆರ್ಪೆಸ್, ವರಿಸೆಲ್ಲ, ಮಂಪ್ಸ್ ಎಂಬ ಸಾಮಾನ್ಯ ವೈರಸ್ ಅಥವಾ ದಿಢೀರ್ ಎಂದು 85 ಡೆಸಿಬಲ್ಗಿಂತಹ ಹೆಚ್ಚಿನ ಶಬ್ಧ ಮಟ್ಟಕ್ಕೆ ತೆರೆದುಕೊಂಡಾಗ ಈ ರೀತಿಯ ಶ್ರವಣ ಸಮಸ್ಯೆ ಉಂಟಾಗಬಹುದು. ಅಷ್ಟೇ ಅಲ್ಲದೇ ಈ ಸಮಸ್ಯೆಗೆ ನೋವು ನಿವಾರಕ ಮಾತ್ರೆಗಳ ಅತಿಯಾದ ಬಳಕೆ, ಕಿಮೋಥೆರಪಿ, ಗಡ್ಡೆಗಳ ಸಂಕೋಚನೆ, ಮಿದುಳಿನ ಊರಿಯುತವಾಗಿರುವ ಮೆನಿಂಜೈಟಿಸ್ ಅಥವಾ ಪಾರ್ಶ್ವವಾಯುವೂ ಕಾರಣವಾಗಬಹುದು.
ಈ ರೀತಿ ದಿಢೀರ್ ಶ್ರವಣ ನಷ್ಟ ಉಂಟಾದಾಗ ತಕ್ಷಣಕ್ಕೆ ಇಎನ್ಟಿ ವೈದ್ಯರ ಸಂಪರ್ಕಕ್ಕೆ ಬರುವುದು ಅಗತ್ಯ. ಇದಕ್ಕೆ ಸಂಬಂದಿಸಿದ ಅಗತ್ಯ ಚಿಕಿತ್ಸೆ,ಗಳನ್ನು ನಡೆಸಿ, ಸಮಸ್ಯೆ ಪತ್ತೆಯಾದಾಗ ಚಿಕಿತ್ಸೆ ಆರಂಭಿಸಬಹುದು. ಆಂಟಿವೈರಲ್‌ಗಳು, ಮೌಖಿಕ ಮತ್ತು ಇಂಟ್ರಾಟಿಂಪನಿಕ್ ಸ್ಟೀರಾಯ್ಡ್‌ಗಳ ಕಾಕ್‌ಟೈಲ್ ಚಿಕಿತ್ಸೆ ಅಗತ್ಯವಿರುತ್ತದೆ. ಜೊತೆಗೆ ಗದ್ದಲದ ವಾತಾವರಣದಿಂದ ವಿಶ್ರಾಂತಿ ಪಡೆಯಬಹುದು.
ವೈದ್ಯರ ಪ್ರಕಾರ, ಆರಂಭದಲ್ಲೇ ಈ ಸಮಸ್ಯೆಗೆ ಚಿಕಿತ್ಸೆ ಆರಂಭಿಸಿದಲ್ಲಿ, ಇದರಿಂದ ಗುಣಮುಖವಾಗುವ ಸಮಸ್ಯೆ ಶೇ 70ರಷ್ಟಿದೆ. ಒಂದು ಕಿವಿಗೆ ಹೋಲಿಕೆ ಮಾಡಿದಾಗ ಎರಡು ಕಿವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಶೇ 1ರಷ್ಟು ಎಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಅಪರೂಪದ ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್