ಕರ್ನಾಟಕ

karnataka

ETV Bharat / health

ಮಕ್ಕಳಿಗೆ ಲಂಚ್​ ಬಾಕ್ಸ್​ ಕಟ್ಟಲು ಸಮಯವಿಲ್ಲವೇ? ಹಾಗಾದ್ರೆ 10 ನಿಮಿಷದಲ್ಲಿ ಟೊಮೆಟೊ ರೈಸ್ ರೆಡಿ ಮಾಡಿ! - TOMATO RICE RECIPE - TOMATO RICE RECIPE

How to Make Tomato Rice: ಪ್ರತಿ ಮನೆಯಲ್ಲೂ ಪ್ರಮುಖವಾಗಿ ಟೊಮೆಟೊ ಇದ್ದೇ ಇರುತ್ತವೆ. ಕೇವಲ ಹತ್ತು ನಿಮಿಷದಲ್ಲಿ ಇವುಗಳಿಂದ ರುಚಿಕರವಾದ ಟೊಮೆಟೊ ರೈಸ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಈ ರೈಸ್​ ಅನ್ನು ಮಕ್ಕಳ ಊಟದ ಡಬ್ಬಿ(ಲಂಚ್​ ಬಾಕ್ಸ್​) ತಯಾರಿಸಿ ಕಟ್ಟಿದರೆ, ಉಳಿಸಿಕೊಂಡು ಬರದೆ ಎಲ್ಲವನ್ನು ತಿನ್ನುತ್ತಾರೆ ಅನ್ನೋದು ಆಹಾರ ತಜ್ಞರ ಅಭಿಪ್ರಾಯ.

TOMATO RICE  SIMPLE TOMATO RICE RECIPE  TOMATO RICE RECIPE FOR LUNCH  TOMATO RICE IN Kannada
ಟೊಮೆಟೊ ರೈಸ್ (ETV Bharat)

By ETV Bharat Health Team

Published : Sep 26, 2024, 12:10 PM IST

Tomato Rice Recipe: ಬೆಳಗ್ಗೆ ಬೇಗ ಎದ್ದು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟದ ಡಬ್ಬಿ(Lunch box​) ಸಿದ್ಧಪಡಿಸುವುದು ತುಂಬಾ ಕಷ್ಟದ ಕೆಲಸ. ಅನೇಕ ಬಾರಿ ಟಿಫಿನ್‌ಗಳು ಸಿದ್ಧವಾದ ನಂತರ ಬೇರೆ ಅಡುಗೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅನೇಕ ತಾಯಂದಿರು ಈ ಸ್ಥಿತಿಯನ್ನು ಯಾವಾಗಲೂ ಎದುರಿಸುತ್ತಾರೆ. ಇದರೊಂದಿಗೆ.. ಕೆಲವು ಬಾರಿ ಅನ್ನ, ಸಾಂಬಾರ ಅನ್ನು ಮಕ್ಕಳಿಗೆ ಕಟ್ಟಬೇಕಾಗುತ್ತದೆ. ಆದ್ರೆ, ಅವರು ಮಧ್ಯಾಹ್ನದ ಊಟದಲ್ಲಿ ಅರ್ಧದಷ್ಟನ್ನು ಮಾತ್ರ ಸೇವಿಸಿ ಉಳಿದಿದ್ದನ್ನು ಹಾಗೆ ತರುತ್ತಾರೆ. ಅದನ್ನು ಕಂಡು ತಾಯಂದಿರು ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ಕಂಗಾಲಾಗುತ್ತಾರೆ.

ಅದಕ್ಕಾಗಿಯೇ ನಾವು ನಿಮಗಾಗಿ ಈ ಅಡುಗೆ ವಿಧಾನವನ್ನು ನಿಮ್ಮ ಮುಂದೆ ತಂದಿದ್ದೇವೆ. ನಿಮಗೆ ಹೆಚ್ಚು ಸಮಯವಿಲ್ಲದಿದ್ದಾಗ ಈ ರೀತಿ ಟೊಮೆಟೊ ರೈಸ್ ಅನ್ನು ಟ್ರೈ ಮಾಡಿ ನೋಡಿ. ಈ ಅಡುಗೆಯು ಬೇಗ ಮುಗಿಯುವುದಷ್ಟೇ ಅಲ್ಲ.. ರುಚಿಯು ಕೂಡ ಸೂಪರ್ ಆಗಿರುತ್ತದೆ. ಇದು ಮಕ್ಕಳಿಗೂ ಹೊಸದು ಮತ್ತು ವರ್ಣರಂಜಿತವೂ ಆಗಿರುತ್ತದೆ. ಈ ಅಡುಗೆ ವಿಧಾನವನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ನೀಡಬಹುದು. ಉಳಿದ ಅನ್ನದ ಜೊತೆಯೂ ಇದನ್ನು ಬೇಯಿಸಬಹುದು. ಮತ್ತು.. ಈ ಟೊಮೆಟೊ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು? ಇದನ್ನು ತಯಾರಿಸುವ ಪ್ರಕ್ರಿಯೆ ಹೇಗೆ ಎಂಬುದನ್ನು ಒಮ್ಮೆ ನೋಡೋಣ.

ಬೇಕಾಗುವ ಸಾಮಗ್ರಿಗಳೇನು?

  • ಅಕ್ಕಿ - 3 ಕಪ್​
  • ಟೊಮೆಟೊ - 3
  • ಹಸಿಮೆಣಸಿನಕಾಯಿ- 2
  • ಈರುಳ್ಳಿ - 1
  • ಎಣ್ಣೆ - 2 ಟೀ ಸ್ಪೂನ್
  • ಉಪ್ಪು - ರುಚಿಗೆ ತಕ್ಕಷ್ಟು
  • ಖಾರದ ಪುಡಿ - 1 ಟೀ ಸ್ಪೂನ್
  • ಗರಂ ಮಸಾಲಾ - ಒಂದು ಟೀಸ್ಪೂನ್
  • ಧನಿಯಾ ಪುಡಿ - ಒಂದು ಟೀ ಸ್ಪೂನ್
  • ಅರಿಶಿನ- ಒಂದು ಚಿಟಿಕೆ
  • ಕರಿಬೇವಿನ ಎಲೆ - 1
  • ಕೊತ್ತಂಬರಿ ಸೊಪ್ಪು
  • ಪುದಿನಾ

ತಯಾರಿಕೆಯ ವಿಧಾನ:

  • ಮೊದಲು, ಟೊಮೆಟೊಗಳನ್ನು ತೊಳೆದು ತುಂಡುಗಳಾಗಿ ಕತ್ತರಿಸಿ. ಇವುಗಳನ್ನು ಮಿಕ್ಸಿಂಗ್ ಜಾರ್​ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.. ಟೊಮೆಟೊ ಅನ್ನಕ್ಕೆ ಈ ರೀತಿ ಟೊಮೆಟೊ ರಸ ಮಾಡುವುದರಿಂದ ರುಚಿಯೇ ಸೂಪರ್.
  • ಈಗ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ. ಇದಕ್ಕೆ ಎಣ್ಣೆ ಹಾಕಿ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹುರಿಯಿರಿ.
  • ನಂತರ ಬಾಣಲೆಗೆ ರುಬ್ಬಿ ಇಟ್ಟುಕೊಂಡಿರುವ ಟೊಮೆಟೊ ರಸವನ್ನು ಸೇರಿಸಿ. ಜೊತೆಗೆ ಉಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿನ, ಕರಿಬೇವಿನ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
  • ಟೊಮೆಟೊದಲ್ಲಿರುವ ನೀರೆಲ್ಲ ಆವಿಯಾದ ನಂತರ ಕೊತ್ತಂಬರಿ ಸೊಪ್ಪು ಮತ್ತು ಪುದಿನಾ ಹಾಕಿ.
  • ನಂತರ ಈ ಮಿಶ್ರಣಕ್ಕೆ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅನ್ನವನ್ನು ಈ ಒಗ್ಗರಣೆಯಲ್ಲಿ ಸರಿಯಾಗಿ ಮಿಶ್ರಣ ಮಾಡಿ. ಸೂಪರ್ ಟೇಸ್ಟಿಯಾದ ಟೊಮೆಟೊ ರೈಸ್ ನಿಮ್ಮ ಮುಂದೆ ಸವಿಯಲು ಸಿದ್ಧವಾಗಿದೆ.
  • ಈ ಟೊಮೆಟೊ ರೈಸ್ ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗಿದೆ.
  • ಮಕ್ಕಳ ಊಟದ ಬಾಕ್ಸ್​​ಗೆ ತಯಾರಿಸಲು ನಿಮಗೆ ಹೆಚ್ಚು ಸಮಯವಿಲ್ಲದಿದ್ದಾಗ ಈ ಅಡುಗೆ ವಿಧಾನವು ಕೆಲಸ ಮಾಡುವುದು ಖಚಿತ. ನಿಮಗೆ ಇಷ್ಟವಾದರೆ ಟೊಮೆಟೊ ರೈಸ್ ಅನ್ನು ಟ್ರೈ ಮಾಡಿ ನೋಡಿ.

ಇದನ್ನೂ ಓದಿ:

ABOUT THE AUTHOR

...view details