ನವದೆಹಲಿ: ಸಮೃದ್ಧವಾದ ಒಮೆಗಾ -3 ಫ್ಯಾಟಿ ಆಸಿಡ್ಗಳನ್ನು ಮೀನಿನ ಎಣ್ಣೆ ಪೂರಕಗಳಿಂದ ಪಡೆಯಬಹುದಾಗಿದೆ. ಮೀನು ಮತ್ತು ಮೀನಿನ ಎಣ್ಣೆಯು ಒಮೆಗಾ 3 ಫ್ಯಾಟಿ ಆಮ್ಲದ ಅಗರವಾಗಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಮೆದುಳಿನ ಆರೋಗ್ಯವನ್ನು ಹೆಚ್ಚಿಸಿ, ಅಸ್ಥಿ ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡಿ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಂದ ಮಾತ್ರಕ್ಕೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನಯೊಂದು ಎಚ್ಚರಿಸಿದೆ.
ಹೌದು.., ಚೀನಾ, ಯುಕೆ ಮತ್ತು ಯುಎಸ್ನ ಅಂತಾರಾಷ್ಟ್ರೀಯ ತಂಡ ಈ ಕುರಿತು ಅಧ್ಯಯನ ನಡೆಸಿದೆ. ಇದಕ್ಕಾಗಿ 40 ರಿಂದ 69 ವರ್ಷ ವಯೋಮಾನದ ನಿಯಮಿತರವಾಗಿ ಎಣ್ಣೆ ಅಥವಾ ಎಣ್ಣೆ ಹೊರತಾದ ಮೀನು ಅಥವಾ ಮೀನಿನ ಎಣ್ಣೆ ಪೂರಕ ಸೇವಿಸುವ 4,15,737 (ಮಹಿಳೆಯರ ಪ್ರಮಾಣ ಶೇ. 5ರಷ್ಟು) ಮಂದಿಯನ್ನು ಅಧ್ಯಯನದ ಭಾಗವಾಗಿಸಲಾಗಿದೆ.
ಇವರನ್ನು 2006 ರಿಂದ 2010ರ ವರೆಗೆ ಸಮೀಕ್ಷೆಗೆ ಒಳಪಡಿಸಲಾಗಿದೆ. 2021ರಲ್ಲಿ ಇವರ ವೈದ್ಯಕೀಯ ದಾಖಲೆಗಳ ದತ್ತಾಂಶವನ್ನು ಗಮನಿಸಲಾಗಿದೆ.
ಈ ಅಧ್ಯಯನದ ಫಲಿತಾಂಶವು ಬಿಎಂಜೆ ಜರ್ನಲ್ನಲ್ಲಿ ಪ್ರಕಟವಾಗಿದ್ದು, ಮುಕ್ತ ಓದುವಿಕೆಗೆ ಲಭ್ಯವಿದೆ. ಇದರಲ್ಲಿ ಕಂಡು ಬಂದಂತೆ ನಿಯಮಿತವಾಗಿ ಮೀನಿನ ಎಣ್ಣೆ ಪೂರಕಗಳ ಸೇವನೆಯು ಹೃದಯ ರಕ್ತನಾಳದ ಸಮಸ್ಯೆ ಹೆಚ್ಚಳ ಮತ್ತು ಸಾವಿಗೆ ಎಡೆಮಾಡಿಕೊಟ್ಟಿರುವುದು ಕಂಡುಬಂದಿದೆ.