ಕರ್ನಾಟಕ

karnataka

ETV Bharat / health

ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುತ್ತೆ ಈ ಎಲೆ: ಇದನ್ನು ಹೇಗೆ ಬಳಸೋದು ಗೊತ್ತಾ? ಸಂಶೋಧನೆಗಳು ಹೇಳೋದೇನು? - BAY LEAVES HEALTH BENEFITS

ಬೇ ಎಲೆಯನ್ನು ಆಯುರ್ವೇದದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದರಲ್ಲಿರುವ ರಾಸಾಯನಿಕಗಳು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ

tej-patta-bay-leaves-for-diabetes-this-is-helpful-in-controlling-blood-sugar-know
ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುತ್ತೆ ಈ ಎಲೆ: ಇದನ್ನು ಹೇಗೆ ಬಳಸೋದು ಗೊತ್ತಾ? ಸಂಶೋಧನೆಗಳು ಹೇಳೋದೇನು? (ಕೃಪೆ Pexels)

By ETV Bharat Karnataka Team

Published : Nov 4, 2024, 5:34 PM IST

ಮಧುಮೇಹವು ಮೆಟಬಾಲಿಕ್ ಸಿಂಡ್ರೋಮ್ ಆಗಿದೆ. ಇದು ಕ್ರಮೇಣ ದೇಹವನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲ ಇದು ಗುಣಪಡಿಸಲಾಗದ ಕಾಯಿಲೆಯಾಗಿದೆ. ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಕಡಿಮೆ ಮತ್ತು ಅಧಿಕ ರಕ್ತದ ಸಕ್ಕರೆ ಅಪಾಯಕಾರಿ ಪರಿಸ್ಥಿತಿಯನ್ನು ಹೊಂದಿರುತ್ತಾರೆ. ಈ ಕಾಯಿಲೆಯಿಂದ ಇತರ ಆರೋಗ್ಯ ಸಮಸ್ಯೆಗಳು ಕ್ರಮೇಣ ಕಂಡು ಬರಬಹುದು. ಭಾರತದಲ್ಲಿಯೂ ಈ ರೋಗವು ವೇಗವಾಗಿ ಹರಡುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರಸ್ತುತ ಸುಮಾರು 62 ಮಿಲಿಯನ್ ಅಂದರೆ 6.2 ಕೋಟಿ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ, ಇದು ದೇಶದ ಸಂಪೂರ್ಣ ವಯಸ್ಕ ಜನಸಂಖ್ಯೆಯ ಶೇಕಡಾ 7 ರಷ್ಟಿದೆ.

2035ರ ವೇಳೆಗೆ 109 ಮಿಲಿಯನ್‌ಗೆ ಏರಿಕೆ:ಇಂಡಿಯನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ 2035ರ ವೇಳೆಗೆ 109 ಮಿಲಿಯನ್‌ಗೆ ಅಂದರೆ 10ಕೋಟಿಗೆ ಏರುತ್ತದೆ. ಇದಲ್ಲದೇ ಜನರು ಸರಾಸರಿಯಾಗಿ 40 ವರ್ಷವನ್ನು ದಾಟಿದಾಗ ಈ ಸ್ಥಿತಿಯು ಹೆಚ್ಚಳವಾಗುತ್ತಾ ಹೋಗುತ್ತದೆ. ಡಯಾಬಿಟಿಸ್ ನಿರ್ವಹಣೆ ಮತ್ತು ತಡೆಗಟ್ಟುವಿಕೆ ಮತ್ತು ಆರೋಗ್ಯಕರ ಆಹಾರದ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮವು ಈ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಅದರ ಪ್ರಗತಿಯನ್ನು ತಡೆಯುವಲ್ಲಿ ಬಹಳ ದೂರ ಹೋಗಬಹುದು. ನಮ್ಮ ದೈನಂದಿನ ಆಹಾರದಲ್ಲಿ ನಾವು ಸೇರಿಸಬಹುದಾದ ಅನೇಕ ಪದಾರ್ಥಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಅವುಗಳಲ್ಲಿ ಒಂದು ಈ ಬೇ ಎಲೆಗಳು.

ಅನೇಕ ಔಷಧ ಗುಣಗಳಿಂದ ಕೂಡಿದೆ ಬೇ ಎಲೆ: ರುಚಿ ಹೆಚ್ಚಿಸಲು ಮತ್ತು ಪೌಷ್ಟಿಕಾಂಶ ಒದಗಿಸಲು ಬೇ ಎಲೆಗಳನ್ನು ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದನ್ನು ಮಲಬಾರ್ ಲೀಫ್ ಅಂತಲೂ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಲಾರಸ್ ನೋಬಿಲಿಸ್. ಈ ಮೂಲಿಕೆಯು ಭಾರತೀಯ ಅಡುಗೆ ಮನೆಗಳಲ್ಲಿ ಕಂಡು ಬರುವ ಸರ್ವೇ ಸಾಮಾನ್ಯ ಪದಾರ್ಥವಾಗಿದೆ. ವಿಟಮಿನ್ ಎ ಮತ್ತು ಸಿ, ಹಾಗೆಯೇ ಫೋಲಿಕ್ ಆಮ್ಲದಂತಹ ಅನೇಕ ಅಗತ್ಯ ಪೋಷಕಾಂಶಗಳು ಮತ್ತು ಖನಿಜಾಂಶಗಳನ್ನು ಈ ಎಲೆಗಳು ಒಳಗೊಂಡಿವೆ. ಇದನ್ನು ಅನೇಕ ಸೂಪ್‌ಗಳು, ಮೇಲೋಗರಗಳು ಮತ್ತು ಅನ್ನದ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.

ಭಕ್ಷ್ಯಗಳಿಗೆ ವಿಶಿಷ್ಟವಾದ ಮಸಾಲೆಯುಕ್ತ ಪರಿಮಳವನ್ನು ಈ ಎಲೆ ನೀಡುತ್ತದೆ. ಬೇ ಎಲೆಗಳಲ್ಲಿರುವ ಶ್ರೀಮಂತ ಪೋಷಕಾಂಶವು ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಅಷ್ಟೇ ಅಲ್ಲ ಹೃದಯವನ್ನು ರಕ್ಷಿಸುವುದು ಮತ್ತು ಒತ್ತಡವನ್ನು ನಿವಾರಿಸುವಂತಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಈ ಬೇ ಎಲೆ ನೀಡುತ್ತದೆ ಎಂದು ತಜ್ಞರು ಖಚಿತಪಡಿಸಿದ್ದಾರೆ. ಇನ್ನು ಮಧುಮೇಹಿಗಳು ತಮ್ಮ ಪಾಕವಿಧಾನಗಳಲ್ಲಿ ಇದನ್ನು ಸೇರಿಸುವ ಮೂಲಕ ವಿಶೇಷವಾಗಿ ಪ್ರಯೋಜನ ಪಡೆಯಬಹುದು. ಏಕೆಂದರೆ ಇದು ಇನ್ಸುಲಿನ್ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಮತ್ತು ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ 2016 ರ ಅಧ್ಯಯನವು 30 ದಿನಗಳವರೆಗೆ ಕೇವಲ 1 ರಿಂದ 3 ಗ್ರಾಂ ಬೇ ಎಲೆಗಳನ್ನು ತಿನ್ನುವುದರಿಂದ ಟೈಪ್ 2 ಮಧುಮೇಹ ಹೊಂದಿರುವ ಜನರಲ್ಲಿ ಇನ್ಸುಲಿನ್ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಅದರಲ್ಲಿ ಹಲವಾರು ಫೈಟೊಕೆಮಿಕಲ್‌ಗಳು ಮತ್ತು ಸಾರಭೂತ ತೈಲಗಳ ಉಪಸ್ಥಿತಿಯಿಂದಾಗಿ, ಎಲೆಗಳು ಮಧುಮೇಹ ರೋಗಿಗಳ ಮೇಲೆ ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಬೀರಿವೆ ಎಂಬ ಅಂಶ ತಿಳಿದು ಬಂದಿದೆ.

ಬೇ ಎಲೆಗಳ ಸೇವನೆಯು ಇನ್ಸುಲಿನ್ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ ಎಂಬ ಅಂಶವನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಬೇ ಎಲೆಗಳ ಸಕ್ರಿಯ ಘಟಕಾಂಶವೆಂದರೆ ಪಾಲಿಫಿನಾಲ್, ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ರೋಗಿಗಳ ಲಿಪಿಡ್ ಪ್ರೊಫೈಲ್ ಸುಧಾರಿಸಲು ಸಹ ಅವು ಸಹಾಯಕವಾಗಿವೆ.

ಈ ರೀತಿ ಪ್ರಯೋಜನ ಪಡೆಯಿರಿ:ಎಲೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು, ಮಧುಮೇಹ ರೋಗಿಗಳು ತಮ್ಮ ನಿಯಮಿತ ಔಷಧಗಳೊಂದಿಗೆ ಇತರ ಆರೋಗ್ಯಕರ ಆಹಾರ ಮತ್ತು ಜೀವನಶೈಲಿ ನಿಯಮಗಳನ್ನು ಅನುಸರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ನೀವು ಬೇ ಎಲೆಗಳನ್ನು ನಿಮ್ಮ ಸೂಪ್ ಮತ್ತು ಮೇಲೋಗರಗಳ ತಯಾರಿಕೆಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಅಥವಾ ಒಣ ಎಲೆಗಳನ್ನು ಪುಡಿಮಾಡಿ ನಿಮ್ಮ ಆಹಾರದಲ್ಲಿ ಸೇರಿಸಿ ಬಳಸಬಹುದು. ಇದರಿಂದ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ಗಿಡಮೂಲಿಕೆಯ ಒಂದು ಟೀಚಮಚದಷ್ಟು ಬಳಕೆ ಮಾಡಿದರೆ ಸಾಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೂಲ ಮಾಹಿತಿ:https://www.webmd.com/vitamins/ai/ingredientmono-685/bay-leaf

https://biomedpharmajournal.org/vol12no2/antidiabetic-and-antioxidant-activities-of-bay-pandan-citrus-leaves-and-their-combination-in-vitro/

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿಗಳು ಮತ್ತು ಸಲಹೆಗಳು ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಇದನ್ನು ಬಳಕೆ ಮಾಡುವ ಮೊದಲು ಪರಿಣತರನ್ನು ಸಂಪರ್ಕಿಸಿ.

ಇವುಗಳನ್ನು ಓದಿ:ಒಟ್ಟಿಗೆ ಈ ಆಹಾರ ಸೇವಿಸಿದರೆ "ತೂಕ" ಹೆಚ್ಚಾಗುತ್ತೆ ಹುಷಾರ್​​​: ತಜ್ಞರು ಮಾಡಿರುವ ಶಿಫಾರಸುಗಳಿವು!

ಮಧುಮೇಹಿಗಳಿಗೆ ಇಲ್ಲಿದೆ ಗುಡ್ ನ್ಯೂಸ್- ಇನ್ಸುಲಿನ್ ಅಗತ್ಯವಿಲ್ಲ!: ಸಂಶೋಧನೆ

ಕಸ್ಟಮ್ಸ್​, ಜಿಎಸ್​ಟಿ ಕಡಿತ: ಮೂರು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ

ಮಕ್ಕಳಲ್ಲಿ ರಕ್ತಹೀನತೆ; ವೈದ್ಯರು ಸೂಚಿಸುವ ಅತ್ಯುತ್ತಮ​ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ

ABOUT THE AUTHOR

...view details