ನವದೆಹಲಿ: ಕೆಫೀನ್ ಹೆಚ್ಚಾಗಿ ಲಭ್ಯವಾಗುವ ಉತ್ಪನ್ನಗಳ ಸೇವನೆ ಹದಿ ವಯಸ್ಸಿನವರಲ್ಲಿ ಹೆಚ್ಚುತ್ತಿದ್ದು, ನಮ್ಮ ಮಕ್ಕಳು ವಾರದ ಎಲ್ಲ ದಿನ ಕಾಫಿ ಸೇವನೆಗೆ ಮುಂದಾಗುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ, ಹದಿವಯಸ್ಸಿನ ಶೇ 18ರಷ್ಟು ಮಂದಿ ಕೆಫೀನ್ ಸೇವನೆಗೆ ಮುಂದಾಗಲು ಕಾರಣ ಎಚ್ಚರವಾಗಿರುವ ಉದ್ದೇಶದಿಂದ.
ಅಮೆರಿಕ ಮೂಲದ ಮಿಚಿಗನ್ ಯುನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ, ಶೇ 25ರಷ್ಟು ಪೋಷಕರು ತಮ್ಮ ಮಕ್ಕಳು ಪ್ರತಿನಿತ್ಯ ಕೆಫೀನ್ ಸೇವನೆಗೆ ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಹದಿಹರೆಯದವರಿಗೆ ಕೆಫೀನ್ ಸೇವನೆಯನ್ನು ಎಷ್ಟು ಮಿತಿಗೊಳಿಸಬೇಕೆಂದು ಪೋಷಕರು ಯಾವಾಗಲೂ ತಿಳಿದಿರುವುದಿಲ್ಲ ಎಂದು ಅಧ್ಯಯನದ ಸಹ ನಿರ್ದೇಶಕರಾಗಿರುವ ಸೂಸನ್ ಬೂಲ್ಫೋರ್ಡ್ ತಿಳಿಸಿದ್ದಾರೆ.
ಈ ಸಂಬಂಧ ಫೆಬ್ರವರಿಯಲ್ಲಿ 1095 ಹದಿವಯಸ್ಸಿನ ಮಕ್ಕಳನ್ನು ಹೊಂದಿರುವ ಪೋಷಕರನ್ನು ಅಧ್ಯಯನದ ಭಾಗಿಯಾಗಿಸಲಾಗಿದೆ. ತಮ್ಮ ಮಕ್ಕಳು ಈ ಕೆಫೀನ್ ಅನ್ನು ಹಲವು ಉತ್ಪನ್ನಗಳಿಂದ ಸೇವಿಸುತ್ತಾರೆ. ಅದರಲ್ಲಿ ಶೇ 73ರಷ್ಟು ಸೋಡಾದಿಂದ, ಶೇ 32ರಷ್ಟು ಟೀ, ಶೇ 31ರಷ್ಟು ಕಾಫಿ, ಶೇ 22ರಷ್ಟು ಎನರ್ಜಿ ಡ್ರಿಂಕ್ ಸೇವನೆಯಿಂದ ಪಡೆಯುವುದಾಗಿ ತಿಳಿಸಿದ್ದಾರೆ. ಇನ್ನು ಈ ಕೆಫೀನ್ ಸೇವನೆಯನ್ನು ಶೇ 81ರಷ್ಟು ಮನೆಯಲ್ಲಿ ಮಾಡಿದರೆ, ಶೇ 43ರಷ್ಟನ್ನು ಹೊರಗೆ ಹೋದಾಗ, ಶೇ 3ರಷ್ಟು ಮಂದಿ ಸ್ನೇಹಿತರ ಜೊತೆಗೆ ಮತ್ತು ಶೇ 25ರಷ್ಟು ಮಂದಿ ಶಾಲೆಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ.