ನವದೆಹಲಿ: ಭಾರತದ ಮೇಲಿರುವ ಕ್ಷಯ ರೋಗ (ಟಿಬಿ) ಹೊರೆಯನ್ನು ಸಮರ್ಥವಾಗಿ ನಿರ್ಮೂಲನೆ ಮಾಡುವಲ್ಲಿ 'ಟಿಬಿ ಮುಕ್ತ ಪಂಚಾಯತ್' ಕಾರ್ಯಕ್ರಮಗಳು ಸಹಾಯಕವಾಗಲಿವೆ. ಇದರ ಮೂಲಕ ಸ್ಥಳೀಯ ಸಮುದಾಯದಲ್ಲಿ ಮಾರಣಾಂತಿಕ ರೋಗದ ಬಗ್ಗೆ ವಿಶಾಲ ದೃಷ್ಟಿಕೋನದಿಂದ ಜಾಗೃತಿ ಮೂಡಿಸಬಹುದು. ಆದಾಗ್ಯೂ ಅದರ ಕೊರತೆಗಳನ್ನು ನಿಭಾಯಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.
ಜಗತ್ತಿನ ಟಿಬಿ ಪ್ರಕರಣಗಳಲ್ಲಿ ಶೇ.27ರಷ್ಟು ಭಾರತದಲ್ಲಿದೆ. 2030ಕ್ಕೆ ಜಗತ್ತನ್ನು ಟಿಬಿ ಮುಕ್ತಗೊಳಿಸಲು ಕಳೆದ ವರ್ಷ ವಿಶ್ವ ಸಂಸ್ಥೆ 'ಟಿಬಿ ಮುಕ್ತ ಸುಸ್ಥಿರ ಅಭಿವೃದ್ಧಿ ಗುರಿ'ಗಳನ್ನು ರೂಪಿಸಲಾಗಿದೆ. ಭಾರತ ಕೂಡಾ 2025ರ ಹೊತ್ತಿಗೆ ಟಿಬಿ ಮುಕ್ತ ದೇಶದ ಗುರಿ ಹೊಂದಿದೆ.
ಟಿಬಿ ಪಂಚಾಯತ್ ಅಭಿಯಾನ ಎಂಬುದು ಸಮುದಾಯ ಕಾರ್ಯಕ್ರಮವಾಗಿದೆ. ಈ ಮುಖೇನ ರಾಷ್ಟ್ರೀಯ ಟಿಬಿ ಮುಕ್ತ ಕಾರ್ಯಕ್ರಮವನ್ನು ಗ್ರಾಮದ ಮಟ್ಟಕ್ಕೂ ಕೊಂಡೊಯ್ಯಲಾಗುತ್ತದೆ. ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಗಳಾದ ಪಂಚಾಯತ್ ರಾಜ್ ವ್ಯವಸ್ಥೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಪುಣೆಯ ಭಾರತಿ ವಿದ್ಯಾಪೀಠ ಮೆಡಿಕಲ್ ಕಾಲೇಜ್ನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ.ಸ್ವಾತಿ ಕೃಷ್ಣನ್ ನ್ಜಜರೆಕ್ಕಟ್ಟುವಳಪ್ಪಿಲ್ ತಿಳಿಸಿದರು.