ಸಿಡ್ನಿ, ಆಸ್ಟ್ರೇಲಿಯಾ:ಸಾಮಾನ್ಯವಾಗಿ ವ್ಯಾಯಾಮ ಮಾಡಲು ಬೆಳಗಿನ ಸಮಯ ಉತ್ತಮ ಎಂದು ಭಾವಿಸುತ್ತೇವೆ. ಆದರೆ, ಸಂಜೆ ಸಮಯದಲ್ಲಿ ದೈಹಿಕ ಚಟುವಟಿಕೆ ನಡೆಸುವುದರಿಂದ ಸ್ಥೂಲಕಾಯ ಹೊಂದಿರುವವರು ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ಅಧ್ಯಯನ ತಿಳಿಸಿದೆ.
ಈ ಅಧ್ಯಯನವನ್ನು ಜರ್ನಲ್ ಡಯಾಬೀಟಿಸ್ ಕೇರ್ನಲ್ಲಿ ಪ್ರಕಟಿಸಲಾಗಿದೆ. 8 ವರ್ಷಗಳ ಕಾಲ 30 ಸಾವಿರ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಿ, ಈ ಬಗ್ಗೆ ಉತ್ತರ ಕಂಡುಕೊಳ್ಳಲಾಗಿದೆ. ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಅಕಾಲಿಕ ಮರಣ ಮತ್ತು ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಏರೋಬಿಕ್ ಚಟುವಟಿಕೆಯನ್ನು ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆ ಮಾಡುವ ಜನರಲ್ಲಿ ಕಡಿಮೆಯಾಗಿದೆ ಎಂದು ಕಂಡು ಕೊಂಡಿದ್ದಾರೆ. ಸಂಜೆ 6 ರಿಂದ ಮಧ್ಯರಾತ್ರಿ ನಡುವೆ ನಮ್ಮ ಹೃದಯ ಬಡಿತವನ್ನು ಹೆಚ್ಚಿರುತ್ತದೆ. ಈ ಸಮಯದಲ್ಲಿ ನಡೆಸುವ ವ್ಯಾಯಾಮ ಚಟುವಟಿಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದಿದ್ದಾರೆ
ಆಸ್ಟ್ರೇಲಿಯಾದಲ್ಲಿ ಹಲವಾರು ಕ್ಲಿಷ್ಟ ಸಾಮಾಜಿಕ ಅಂಶಗಳ ಕಾರಣದಿಂದಾಗಿ ಮೂವರಲ್ಲಿ ಇಬ್ಬರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮತ್ತು ಅಕಾಲಿಕ ಮರಣದಂತಹ ಆಪತ್ತು ತರುವ ಹೃದಯರಕ್ತನಾಳದ ಸಮಸ್ಯೆ ಹೆಚ್ಚಿಸಿ ಅಪಾಯವನ್ನುಂಟು ಮಾಡುತ್ತದೆ ಎಂದು ಸಿಡ್ನಿ ಯೂನಿವರ್ಸಿಟಿಯ ವ್ಯಾಯಾಮ ಶರೀರಶಾಸ್ತ್ರದ ಉಪನ್ಯಾಸಕರು ಡಾ ಏಂಜೆಲೊ ಸಬಾಗ್ ತಿಳಿಸಿದ್ದಾರೆ.