What are The Best Times to Eat?: ಇತ್ತೀಚಿನ ದಿನಗಳಲ್ಲಿ ಕೆಲವರು ಕೆಲಸದಲ್ಲಿ ಬ್ಯುಸಿ ಇರುವುದರ ಕಾರಣಕ್ಕೆ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ. ಇನ್ನೂ ಕೆಲವು ಜನರು ವಿವಿಧ ಕಾರಣಗಳಿಂದ ಸರಿಯಾದ ಸಮಯಕ್ಕೆ ಊಟ ಮಾಡುವುದೇ ಇಲ್ಲ. ಅದರಲ್ಲೂ ಮಹಿಳೆಯರು ಮನೆಗೆಲಸದಿಂದಾಗಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಬಹಳ ತಡವಾಗಿ ಸೇವಿಸುತ್ತಾರೆ. ಇದರಿಂದ ಕೆಲವರಿಗೆ ಎದೆಯಲ್ಲಿ ಉರಿ ಮತ್ತು ಇತರ ಸಮಸ್ಯೆಗಳು ಉಂಟಾಗುತ್ತವೆ. ಹಾಗಾದರೆ, ತಡವಾಗಿ ಉಪಾಹಾರ ಮತ್ತು ಊಟ ಮಾಡುವುದರಿಂದ ಎದೆಯುರಿಗೆ ಕಾರಣವಾಗುತ್ತಾ? ಹಾಗಿದ್ದರೆ.. ಯಾವ ಸಮಯದಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು? ಈ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
ಎದೆಯುರಿಗೆ ವಿವಿಧ ಕಾರಣಗಳು ಇರಬಹುವುದು. ಅದರಲ್ಲೂ ಪ್ರಮುಖವಾಗಿ ಆ್ಯಸಿಡಿಟಿಯಿಂದ ಎದೆಯಲ್ಲಿ ಉರಿ ಉಂಟಾಗಬಹುದು ಎನ್ನುತ್ತಾರೆ ಪೌಷ್ಟಿಕತಜ್ಞೆ ಡಾ. ಜಾನಕಿ ಶ್ರೀನಾಥ್. ಹೊಟ್ಟೆಯಲ್ಲಿ ಆಮ್ಲೀಯತೆ, ಸ್ಥೂಲಕಾಯತೆ, ದೈಹಿಕ ಚಟುವಟಿಕೆಯ ಕೊರತೆ ಅಥವಾ ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕಿಗೆ ಹಲವು ಕಾರಣಗಳಿವೆ. ಜೊತೆಗೆ ಅನ್ನನಾಳದ ಬಳಿ ಇರುವ ಸಣ್ಣ ಸ್ನಾಯು ಸಡಿಲವಾದಾಗ ಜೀರ್ಣಾಂಗದಲ್ಲಿ ಇರಬೇಕಾದ ದ್ರವಗಳು ಗಂಟಲು ಮತ್ತು ಮೂಗಿಗೆ ಬರುತ್ತವೆ. ಆದ್ದರಿಂದ ಅಸಿಡಿಟಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಹಾಗೆಯೇ.. ಎಲ್ಲರ ಜೀವನಶೈಲಿ ಎಂದಿಗೂ ಒಂದೇ ರೀತಿ ಇರುವುದಿಲ್ಲ. ಎಚ್ಚರವಾದಾಗ ಏನು ಮಾಡುತ್ತೀರಿ, ಯಾವ ಆಹಾರ ಸೇವಿಸುತ್ತೀರಿ, ಎಷ್ಟು ತಿನ್ನುತ್ತೀರಿ ಎಂಬುದು ತುಂಬಾ ಮುಖ್ಯವಾಗಿದೆ ಎಂದು ಪೌಷ್ಟಿಕತಜ್ಞೆ ಡಾ.ಜಾನಕಿ ಶ್ರೀನಾಥ್ ತಿಳಿಸುತ್ತಾರೆ.
ಮಾಂಸ ಮತ್ತು ಎಣ್ಣೆ ಪದಾರ್ಥಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಈ ವಸ್ತುಗಳು ಹೆಚ್ಚುವರಿ ಆಮ್ಲಗಳ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಮೇಲಾಗಿ.. ಕೆಲವರಿಗೆ ಎಲ್ಲಾ ರೀತಿಯ ಮಸಾಲೆಗಳು ಇಷ್ಟವಾಗದಿರಬಹುದು. ಕರಿಮೆಣಸು, ಮೆಣಸು, ಹಸಿಮೆಣಸು, ಹುಣಸೆಹಣ್ಣಿನಂತಹ ಕೆಲವು ಪದಾರ್ಥಗಳಿಂದ ಆ್ಯಸಿಡಿಟಿ ಸಾಧ್ಯತೆ ಇದೆ ಎಂದು ಸೂಚಿಸಲಾಗುತ್ತದೆ. ಇವುಗಳಲ್ಲಿ ಯಾವುದೂ ಇಲ್ಲದಿದ್ದಲ್ಲಿ.. ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು ಬರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಾಲಿಸುವುದು ಉತ್ತಮ.
ಈ ಸಮಯದಲ್ಲಿ ತಿನ್ನೋದು ಒಳ್ಳೆಯದು: ಪ್ರತಿದಿನ ನಿಗದಿಪಡಿಸಿದ ಸಮಯದಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇಲ್ಲದಿದ್ದರೆ.. ನಿತ್ಯ ಅರ್ಧ ಗಂಟೆ ನಡೆಯುವುದು ಅಥವಾ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳುವಂತೆ ಡಾ. ಜಾನಕಿ ಶ್ರೀನಾಥ್ ಅವರು ಸೂಚಿಸುತ್ತಾರೆ. ನಿಮ್ಮ ದೈನಂದಿನ ಆಹಾರ ಕ್ರಮವನ್ನು ಹೊಂದಿಸಬೇಕಾಗುತ್ತದೆ. ಆದ್ದರಿಂದ ನೀವು ಬೆಳಿಗ್ಗೆ 6 ಗಂಟೆಗೆ ಎದ್ದು 9 ಗಂಟೆಗೆ ಉಪಹಾರ, 1 ಗಂಟೆಗೆ ಊಟ, ಮತ್ತು ಓಟ್ಸ್, ಹಣ್ಣುಗಳನ್ನು ಸೇರಿದಂತೆ ಇತರೆ ಲಘು ಉಪಾಹಾರವನ್ನು ಸಂಜೆ 4 ರಿಂದ 5 ರ ನಡುವೆ ಸೇವಿಸಬೇಕಾಗುತ್ತದೆ. ಅದೇ ರೀತಿ ರಾತ್ರಿ ಏಳರಿಂದ ಎಂಟು ಗಂಟೆಯೊಳಗೆ ಭೋಜನ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಊಟವನ್ನು ಬಿಡದೆ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ದಿನನಿತ್ಯದ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಡಾ.ಜಾನಕಿ ಶ್ರೀನಾಥ್ ಸಲಹೆ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ಸಂರ್ಕಿಸಬಹುದು:
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.