ಹೈದರಾಬಾದ್: ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ಕುರಿತು ಎಷ್ಟೇ ಜಾಹೀರಾತು ನೀಡಿದರೂ ಕುಡಿಯುವವರ ಸಂಖ್ಯೆ ಮಾತ್ರ ಕಡಿಮೆ ಆಗುವ ಬದಲು ಏರಿಕೆಯಾಗುತ್ತಲೇ ಇದೆ. ಇದು ಅವರ ಅನಾರೋಗ್ಯಕ್ಕೂ ಕೂಡ ಕಾರಣವಾಗುತ್ತದೆ. ಆದಾಗ್ಯೂ, ಕೆಲವು ಜನರು ಕುಡಿತದ ಆರಂಭದಲ್ಲಿ ವಾಂತಿಯ ಸಮಸ್ಯೆಗೆ ಒಳಗಾಗುತ್ತಾರೆ.
ಸಾಮಾನ್ಯವಾಗಿ ಆಲ್ಕೋಹಾಲ್ ಸೇವನೆಯಿಂದಾಗಿ ಎರಡು ರೀತಿಯ ಪರಿಣಾಮಗಳನ್ನು ಕಾಣಬಹುದು ಎಂದು ತಜ್ಞರು ತಿಳಿಸುತ್ತಾರೆ. ಅದರಲ್ಲಿ ಒಂದು ಕುಡಿದ ವ್ಯಕ್ತಿ ಅನುಭವಿಸುವ ಮಾನಸಿಕ ನೆಮ್ಮದಿ ಒಂದೆಡೆಯಾದರೆ, ದೇಹದಲ್ಲಿ ಆಗುವ ಬದಲಾವಣೆಗಳು ಇನ್ನೊಂದು ರೀತಿ ಇರುತ್ತದೆ ಎನ್ನುತ್ತಾರೆ. ಕುಡಿತದ ಸಮಯ ಮತ್ತು ಬಳಿಕ ಅಮಲು ಮತ್ತು ನೆಮ್ಮದಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಅವರು ಹಿಂಜರಿಕೆ ಇಲ್ಲದೇ ವರ್ತನೆ ತೋರುತ್ತಾರೆ. ಅವರ ಸಂತೋಷಕ್ಕೆ ಒಂದು ರೀತಿ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಚೆನ್ನಾಗಿದೆ ಎಂದು ಅತಿಯಾಗಿ ಕುಡಿದರೆ, ಅದು ಮಾತು ತೊದಲುವಿಕೆ, ಕಣ್ಣು ಮಂಜು ಮತ್ತು ಕಿವಿ ಕೇಳುವಿಕೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಂತಿ ಕೂಡ ಸಂಭವಿಸುತ್ತದೆ. ಆಲ್ಕೋಹಾಲ್ ಸೇವಿಸಿದ ಬಳಿಕ ವಾಂತಿ ಆಗಲು ಹಲವು ಕಾರಣವಿದೆ. ಅದರಲ್ಲಿ ಒಂದು ಹೀಗಿದೆ.
ಆಲ್ಕೋಹಾಲ್ ಸೇವಿಸಿದ ಬಳಿಕ ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಿಣ್ವಗಳು ಅದನ್ನು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸಲು ಕೆಲಸ ಮಾಡುತ್ತವೆ. ಅಸಿಟಾಲ್ಡಿಹೈಡ್ ಒಂದು ವಿಷಕಾರಿ ವಸ್ತುವಾಗಿದೆ. ಇದು ಯಕೃತ್ತಿನಿಂದ ಒಡೆಯುತ್ತದೆ. ಆದರೂ, ಯಕೃತ್ತು ಈ ಅಸಿಟಾಲ್ಡಿಹೈಡ್ ಅನ್ನು ಸ್ವಲ್ಪ ಮಟ್ಟಿಗೆ ಮಾತ್ರ ಹೀರಿಕೊಳ್ಳುತ್ತದೆ. ಅತಿಯಾದ ಕುಡಿತವನ್ನು ಯಕೃತ ಅನ್ನು ಪ್ರಕ್ರಿಯೆಗೊಳಿಸಲು ವಿಫಲವಾಗುತ್ತದೆ. ಇದರಿಂದ ದೇಹದಲ್ಲಿ ಅಸಿಟಾಲ್ಡಿಹೈಡ್ ಶೇಖರಣೆಯಾಗಿ, ಲಿವರ್ ಮೇಲೆ ಒತ್ತಡ ಹೆಚ್ಚುತ್ತದೆ. ಇದು ದೇಹದ ಅಂಗಾಂಗದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಯಕೃತ್ ಜಾಗೃತವಾಗುತ್ತದೆ. ಆಗ ವಿಷಕಾರಿ ಅಂಶವನ್ನು ವಾಂತಿ ಮೂಲಕ ಹೊರ ಹಾಕುತ್ತದೆ. ಇದೇ ಕಾರಣದಿಂದ ತಜ್ಞರು ಅತಿಯಾದ ಮದ್ಯ ಸೇವನೆ ವಾಂತಿಗೆ ಕಾರಣವಾಗುತ್ತದೆ ಎನ್ನುತ್ತಾರೆ. ಈ ರೀತಿ ಆದಾಗ ಅತಿ ಹೆಚ್ಚು ನೀರು ಸೇವಿಸಬೇಕು. ಈ ಸಂದರ್ಭದಲ್ಲಿ ದೇಹ ನೀರನ್ನು ಹೆಚ್ಚು ಕಳೆದುಕೊಳ್ಳುತ್ತದೆ. ವಾಂತಿ ಬಳಿಕೆ ದೇಹ ನಿರ್ಜಲೀಕರಣದಿಂದ ಬಳಲುತ್ತದೆ.