ಮಾಂಸಾಹಾರ ಪ್ರಿಯರಲ್ಲಿ ಹೆಚ್ಚಿನವರು ಚಿಕನ್ ಅನ್ನು ಇಷ್ಟಪಡುತ್ತಾರೆ. ಅದು ಎಷ್ಟಂದ್ರೆ.. ಪ್ರತಿದಿನ ಚಿಕನ್ ಫ್ರೈ, ಚಿಕನ್ ಕರಿ, ಬಿರಿಯಾನಿ ಮತ್ತು ಚಿಕನ್ 65 ಮುಂತಾದ ವೆರೈಟಿಗಳನ್ನು ಮಾಡಿ ತಿನ್ನುವಷ್ಟು. ಆದರೂ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಎಷ್ಟು ಮುಖ್ಯವೋ ಮಾಂಸವನ್ನು ತಿನ್ನುವುದು ಅಷ್ಟೇ ಮುಖ್ಯ. ಪ್ರತಿದಿನ ಕೋಳಿ ಮಾಂಸ ತಿಂದರೆ ಅಪಾಯ ತಪ್ಪಿದ್ದಲ್ಲ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ. ದಿನನಿತ್ಯ ಚಿಕನ್ ತಿನ್ನುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಆ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ..
ಅಧಿಕ ರಕ್ತದೊತ್ತಡದ ಸಾಧ್ಯತೆ: ದಿನನಿತ್ಯ ಚಿಕನ್ ತಿನ್ನುವುದರಿಂದ ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ. ನಮ್ಮ ದೇಹದಲ್ಲಿ ಸೋಡಿಯಂನ ಶೇಕಡಾವಾರು ಪ್ರಮಾಣವೂ ಹೆಚ್ಚಾಗುತ್ತದೆ. ಸ್ಕಿನ್ ಲೆಸ್ ಚಿಕನ್ ಗಿಂತ ಸ್ಕಿನ್ ಇರುವ ಚಿಕನ್ ತಿನ್ನುವುದರಿಂದ ಈ ಅಪಾಯ ಇನ್ನೂ ಹೆಚ್ಚು ಎನ್ನುತ್ತಾರೆ ತಜ್ಞರು. ಹೆಚ್ಚು ಸೋಡಿಯಂ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
2017 ರಲ್ಲಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಚಿಕನ್ ತಿನ್ನುವ ಜನರು ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಿಸುವ ಸಾಧ್ಯತೆ 50 ಪ್ರತಿಶತ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಪೌಷ್ಟಿಕಾಂಶದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಫ್ರಾಂಕ್ ಬಾವೋ ಭಾಗವಹಿಸಿದ್ದರು. ದಿನನಿತ್ಯ ಚಿಕನ್ ತಿಂದರೆ ಅಧಿಕ ರಕ್ತದೊತ್ತಡ ಬರಬಹುದು ಎಂದು ತಿಳಿಸಿದ್ದಾರೆ. ಆದ್ದರಿಂದ, ದಿನಕ್ಕೆ 50 ಗ್ರಾಂಗಿಂತ ಹೆಚ್ಚು ಚಿಕನ್ ತಿನ್ನಬಾರದು ಎಂದು ಸೂಚಿಸಿದ್ದಾರೆ.