ನವದೆಹಲಿ: ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಜನರ ಅಕಾಲಿಕ ಸಾವಿಗೆ ಕಾರಣವಾಗುತ್ತಿದೆ. ಅಲ್ಪಕಾಲದ ವಾಯುಮಾಲಿನ್ಯದ ಪರಿಣಾಮ ಭಾರತದ 10 ನಗರಗಳಲ್ಲಿ ವಾರ್ಷಿಕ 33 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ವಾಯುಮಾಲಿನ್ಯ ಸಂಬಂಧಿ ಸಮಸ್ಯೆಯಿಂದ 12,000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ವರದಿ ಎಚ್ಚರಿಸಿದೆ.
ಈ ಅಧ್ಯಯನದಲ್ಲಿ ಸಾವಿನ ಅಪಾಯ ಮಾಲಿನ್ಯದ ಪಿಎಂ2.5 ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟವನ್ನು ಒಳಗೊಂಡಿದೆ. ನಗರಗಳಲ್ಲಿ ಪಿಎಂ.2.5 ಸಾಂದ್ರತೆಗೆ ನಿತ್ಯ ಒಡ್ಡಿಕೊಳ್ಳುವಿಕೆ ಸಾವಿನ ಅಪಾಯ ಹೊಂದಿದೆ. ವಾರಣಾಸಿಯ ಬನಾರಸ್ ಯುನಿವರ್ಸಿಟಿ, ದೆಹಲಿ ಮೂಲದ ಸಂಶೋಧನಾ ಸಂಸ್ಥೆ ಎಸ್ಎಫ್ಎಸ್ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನ ನಡೆಸಿದೆ.