Rice Vs Chapati Which is Better for Diabetes:ಮಧುಮೇಹವು ಇಂದಿನ ಆಧುನಿಕ ಒತ್ತಡದ ಜೀವನ ಶೈಲಿಗೆ ಹೊಂದಿಕೊಂಡಿರುವವರಿಗೆ ಯಾವುದೇ ವಯಸ್ಸಿನ ಭೇದವಿಲ್ಲದೇ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಒಮ್ಮೆ ನಿಮಗೆ ಶುಗರ್ ಅಟ್ಯಾಕ್ ಆಗಿದ್ದರೆ, ನೀವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಆಹಾರ ಸೇವನೆ ಸಂಪೂರ್ಣವಾಗಿ ಕಡಿಮೆ ಮಾಡಬೇಕು. ನೀವು ಏನನ್ನಾದರೂ ತಿನ್ನಲು ಬಯಸಿದರೆ, ಎರಡು ಬಾರಿ ಯೋಚಿಸಬೇಕಾಗುತ್ತದೆ. ನೀವು ಏನು ತಿನ್ನುತ್ತೀರಿ ಎಂದು ನಿಮಗೆ ತಿಳಿಯದೇ ಇದ್ದರೆ, ಶುಗರ್ ಹೆಚ್ಚು, ಕಡಿಮೆ ಆಗುತ್ತದೆ. ಇದರಿಂದಾಗಿ ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಇದೇ ವೇಳೆ, ಮಧುಮೇಹದಿಂದ ಬಳಲುತ್ತಿರುವ ಅನೇಕರು ಒಂದು ಹೊತ್ತಿನ ಊಟಕ್ಕೆ ಅನ್ನ, ಇನ್ನೆರಡು ಹೊತ್ತಿನ ಊಟಕ್ಕೆ ಚಪಾತಿ ಸೇವನೆ ಮಾಡುತ್ತಾರೆ. ಈ ರೀತಿ ಚಪಾತಿ ಸೇವನೆ ಮಾಡುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮತ್ತು ಶುಗರ್ ಕಾಯಿಲೆ ಇರುವವರು ಅನ್ನದ ಬದಲು ಚಪಾತಿ ತಿನ್ನುವುದು ನಿಜಕ್ಕೂ ಒಳ್ಳೆಯದೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂಬುದನ್ನು ತಿಳಿಯೋಣ.
ಹೀಗೆ ಮಾಡಿದರೆ ಉತ್ತಮವೇ?: ಶಿಸ್ತುಬದ್ಧ ಜೀವನಶೈಲಿ, ಸರಿಯಾದ ಪೋಷಣೆ, ದೈಹಿಕ ಚಟುವಟಿಕೆಯಿಂದ ಮಧುಮೇಹದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಮಧುಮೇಹ ರೋಗಿಗಳು ತಮಗಾಗಿ ವಿಶೇಷ ಆಹಾರದ ಪ್ಲಾನ್ ತಯಾರಿಸಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಎತ್ತರಕ್ಕೆ ಅನುಗುಣವಾಗಿ ತೂಕ ಕಡಿಮೆಯಾಗಿದೆಯೇ ಎಂದು ಮೊದಲು ಪರೀಕ್ಷಿಸಬೇಕಾಗುತ್ತದೆ ಎಂದು ಪೌಷ್ಟಿಕತಜ್ಞೆ ಡಾ.ಜಾನಕಿ ಶ್ರೀನಾಥ್ವಿವರಿಸುತ್ತಾರೆ.
ದೇಹದ ತೂಕ ಕಡಿಮೆಯಾದರೆ... ನಾರ್ಮಲ್ ಲೆವೆಲ್ಗೆ ಹೆಚ್ಚಿಸಿಕೊಳ್ಳಿ. ಜಾಸ್ತಿಯಾದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ. ಅಲ್ಲದೆ ದಿನವಿಡೀ ನೀವು ಯಾವ ರೀತಿಯ ದೈಹಿಕ ಚಟುವಟಿಕೆಯನ್ನು ಮಾಡುತ್ತೀರಿ? ಅದಕ್ಕಾಗಿ ಎಷ್ಟು ಶಕ್ತಿಯ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಮತ್ತು ಕ್ಯಾಲೋರಿಗಳ ವಿಷಯದಲ್ಲಿ ಆಹಾರದ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹ ರೋಗಿಗಳು ಬಳಸುವ ಮಾತ್ರೆಗಳು ಮತ್ತು ಇನ್ಸುಲಿನ್ ಡೋಸ್ ಎಲ್ಲರಿಗೂ ಒಂದೇ ಆಗಿರುವುದಿಲ್ಲ ಎಂದು ಅವರು ಹೇಳುತ್ತಾರೆ