ಕರ್ನಾಟಕ

karnataka

ETV Bharat / health

ಕೀಲಿನ ಆರೋಗ್ಯ ಸುಧಾರಣೆಗೆ ಆರಂಭಿಕ ಹಂತದಲ್ಲೇ ಅಸ್ಥಿಸಂಧಿವಾತ ಪತ್ತೆ ಮುಖ್ಯ; ಸಂಶೋಧನೆ - Early detection of osteoarthritis - EARLY DETECTION OF OSTEOARTHRITIS

ಸದ್ಯ ಇರುವ ಪತ್ತೆ ರೋಗ ಪತ್ತೆ ವಿಧಾನಕ್ಕಿಂತ ಈ ರಕ್ತದ ಪರೀಕ್ಷೆಗಳು ಮುಂಚಿತವಾಗಿ ರೋಗವನ್ನು ಪತ್ತೆ ಮಾಡುತ್ತದೆ

predicted knee osteoarthritis via a blood test at least eight years  before
predicted knee osteoarthritis via a blood test at least eight years before

By ETV Bharat Karnataka Team

Published : Apr 27, 2024, 5:30 PM IST

ಸ್ಯಾನ್​ ಫ್ರಾನ್ಸಿಸ್ಕೋ: ಮೊಣಕಾಲಿನ ಅಸ್ಥಿಸಂಧಿವಾತವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದರಿಂದ ರೋಗ ಅಭಿವೃದ್ಧಿ ತಡೆ ಜೊತೆಗೆ ಕೀಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಸಂಶೋಧನೆ ತಿಳಿಸಿದೆ.

ಅಮೆರಿಕ ಮೂಲದ ಡ್ಯೂಕ್​ ಯುನಿವರ್ಸಿಟಿ ಮೆಡಿಕಲ್​ ಸೆಂಟರ್​​ ಈ ಸಂಶೋಧನೆಯನ್ನು ಯಶಸ್ವಿಯಾಗಿ ಮಾಡಿದೆ. ಇದರಲ್ಲಿ ಎಕ್ಸ್​​ ರೇ ಬದಲಾಗಿ ರಕ್ತದ ಬಯೋಮಾರ್ಕರ್‌ಗಳ ಮೂಲ ಅಸ್ಥಿಸಂಧಿವಾತದ ಚಿಹ್ನೆಗಳನ್ನು ಎಂಟು ವರ್ಷಗಳವರೆಗೆ ಪತ್ತೆಹಚ್ಚಿದ್ದಾರೆ.

ಅಧ್ಯಯನವನ್ನು ಜರ್ನಲ್​ ಸೈನ್ಸ್​ ಅಡ್ವಾನ್ಸ್​ನಲ್ಲಿ ಪ್ರಕಟಿಸಲಾಗಿದೆ. ಅಸ್ಥಿಸಂಧಿವಾತದ ಪ್ರಮುಖ ಬಯೋಮಾರ್ಕ್​ ಅನ್ನು ಪತ್ತೆ ಮಾಡುವ ರಕ್ತ ಪರೀಕ್ಷೆಯ ನಿಖರತೆಯನ್ನು ಸಂಶೋಧಕರು ಮೌಲ್ಯಮಾಪನಕ್ಕೆ ಒಳಪಡಿಸಿದ್ದಾರೆ. ಈ ಮೂಲಕ ಅವರು ರೋಗದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಂದಾಜಿಸಿದ್ದಾರೆ.

ಸದ್ಯ ಇರುವ ಪತ್ತೆ ರೋಗ ಪತ್ತೆ ವಿಧಾನಕ್ಕಿಂತ ಈ ರಕ್ತದ ಪರೀಕ್ಷೆಗಳು ಮುಂಚಿತವಾಗಿ ರೋಗವನ್ನು ಪತ್ತೆ ಮಾಡುತ್ತದೆ ಎಂದು ಅಧ್ಯಯನದ ಹಿರಿಯ ಲೇಖಕ ಮತ್ತು ಡ್ಯೂಕ್​ ಯೂನಿವರ್ಸಿಟಿಯ ಪ್ರೊಫೆಸರ್​ ವರ್ಜಿನಿಯಾ ಬೆಯರ್ಸ್​​​ ಕ್ರೌಸ್ ತಿಳಿಸಿದ್ದಾರೆ.

ಅಸ್ಥಿ ಸಂಧಿವಾತ ಎಂಬುದು ಸಂಧಿವಾತದ ಸಾಮಾನ್ಯ ಭಾಗವಾಗಿದೆ. ಅಮೆರಿಕದಲ್ಲಿ ಅಂದಾಜು 35 ಮಿಲಿಯನ್​ಗಿಂತ ಹೆಚ್ಚು ಮಂದಿ ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ.

ಪ್ರಸ್ತುತ ಸಂಧಿವಾತಕ್ಕೆ ಯಾವುದೇ ಪರಿಹಾರವಿಲ್ಲ. ಪರಿಣಾಮಕಾರಿ ಥೆರಪಿಯು ಇದನ್ನು ಆರಂಭಿಕದಲ್ಲಿ ಪತ್ತೆ ಮಾಡಿ, ತಡವಾಗುವುದಕ್ಕೆ ಮುಂಚೆಯೇ ಅದರ ಪರಿಹಾರ ನೀಡಬಹುದು. ಈ ಅಧ್ಯಯನಕ್ಕಾಗಿ ಯುಕೆಯಲ್ಲಿ ದೊಡ್ಡ ಮಟ್ಟದ ದತ್ತಾಂಶ ಮತ್ತು 200 ಬಿಳಿ ಮಹಿಳೆಯರ ಸೆರಂ ಅನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅಧ್ಯಯನದಲ್ಲಿ ಅರ್ಧದಷ್ಟು ಮಂದಿ ಮೊಣಕಾಲಿನ ಅಸ್ಥಿಸಂಧಿವಾತಕ್ಕೆ ಗುರಿಯಾಗಿದ್ದಾರೆ. ಇನ್ನುಳಿದ ಅರ್ಧ ಮಂದಿಯಲ್ಲಿ ಯಾವುದೇ ರೋಗ ಪತ್ತೆಯಾಗಿಲ್ಲ. ಈ ಎರಡು ಗುಂಪುಗಳನ್ನು ದೇಹ ದ್ರವ್ಯ ಸೂಚ್ಯಂಕ ಮತ್ತು ವಯಸ್ಸಿನ ಮೇಲೆ ಸರಿಹೊಂದಿಸಲಾಗಿದೆ.

ರಕ್ತ ಪರೀಕ್ಷೆಯಲ್ಲಿ ಕೆಲವು ಬಯೋಮಾರ್ಕರ್‌ಗಳನ್ನು ಗುರುತಿಸಿದರು. ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ಮಹಿಳೆಯರನ್ನು ಯಶಸ್ವಿಯಾಗಿ ಗುರುತಿಸುವಲ್ಲಿ ಪರೀಕ್ಷೆ ಸಹಾಯವಾಯಿತು. ಈ ಬಯೋಮಾರ್ಕರ್‌ಗಳು ಅಸ್ಥಿಸಂಧಿವಾತದ ಆಣ್ವಿಕ ಸಂಕೇತಗಳನ್ನು ಎಂಟು ವರ್ಷಗಳವರೆಗೆ ಪತ್ತೆಹಚ್ಚಿದರು. ಅನೇಕ ಮಹಿಳೆಯರು ಎಕ್ಸ್-ರೇ ಪರೀಕ್ಷೆಗಳ ಮೂಲಕ ರೋಗವನ್ನು ಪತ್ತೆಹಚ್ಚಿದ್ದಾರೆ.

ಎಕ್ಸ್​ರೇ ಪತ್ತೆ ಹಚ್ಚುವುದಕ್ಕೆ ಮುಂಚೆಗೆ ರಕ್ತದ ಬಯೋಮಾರ್ಕ್​ಗಳು ಮೊಣಕಾಲಿನ ಅಸ್ಥಿ ಸಂಧಿವಾತ ಪತ್ತೆ ಮಾಡುತ್ತದೆ ಎಂಬುದಕ್ಕೆ ಇದು ಪೂರಕ ಸಾಕ್ಷಿಯನ್ನು ನೀಡಿದೆ ಎಂದು ಕೌರಸ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 2050ರ ಹೊತ್ತಿಗೆ ಜಗತ್ತಿನ 100 ಕೋಟಿ​ ಜನರಿಗೆ ಅಸ್ಥಿಸಂಧಿವಾತ ಸಮಸ್ಯೆ!

ABOUT THE AUTHOR

...view details